You are here
Home > Koppal News > ಪ್ರದೀಪಗೌಡ ಮಾಲೀಪಾಟೀಲರ ವೆಬ್‌ಸೈಟ್ ಉದ್ಘಾಟನೆ

ಪ್ರದೀಪಗೌಡ ಮಾಲೀಪಾಟೀಲರ ವೆಬ್‌ಸೈಟ್ ಉದ್ಘಾಟನೆ

ಕೊಪ್ಪಳ : ಕೊಪ್ಪಳ ಜನತಾದಳದ(ಎಸ್) ಅಭ್ಯರ್ಥಿ ಪ್ರದೀಪಗೌಡ ಮಾಲೀಪಾಟೀಲರ ಕುರಿತ ಪೂರ್ಣ ಮಾಹಿತಿ ನೀಡುವ ವೆಬ್‌ಸೈಟ್(ಬ್ಲಾಗ್)ನ್ನು ಉದ್ಘಾಟಿಸಲಾಯಿತು. ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ನೂತನ ಪ್ರಚಾರ ಕಾರ್ಯಾಲಯದಲ್ಲಿ ಹಿರಿಯ ನಾಯಕರಾದ ಸುರೇಶ ಭೂಮರಡ್ಡಿ ಹಾಗೂ ಅಭ್ಯರ್ಥಿ ಪ್ರದೀಪಗೌಡ ಮಾಲೀಪಾಟೀಲ್ ವೆಬ್ ತಾಣಕ್ಕೆ ಚಾಲನೆ ನೀಡಿದರು. ಇದರಲ್ಲಿ ಕವಲೂರಗೌಡ್ರ ಕಿಲ್ಲೆ,ಮನೆತನ ಹಾಗೂ ಅವರ ತಂದೆಯವರ ವಿವರಗಳು,ಫೋಟೋಗಳು ಲಭ್ಯವಿವೆ. ನಿರಂತರ ಜನಸೇವೆಯಲ್ಲಿ ತೊಡಗಿರುವ ಪ್ರದೀಪಗೌಡರ ಬಗ್ಗೆ, ಅಲ್ಲದೇ ಕಳೆದ ಉಪಚುನಾವಣೆಯ ಚಿತ್ರಗಳು ವರದಿಗಳು ಸೇರಿದಂತೆ ಹಲವಾರು ಮಾಹಿತಿಗಳು ಇದರಲ್ಲಿ ಲಭ್ಯ.  ಈ ಚುನಾವಣೆಯಲ್ಲಿ ಮಾಡಲಾಗುತ್ತಿರುವ ಪ್ರತಿಯೊಂದು ಸಭೆ,ಸಮಾರಂಭ ಹಾಗೂ ಪಾದಯಾತ್ರೆಯ ಮಾಹಿತಿ ಮತ್ತು ಚಿತ್ರಗಳು ಇದರಲ್ಲಿ ಲಭ್ಯವಿವೆ.
    ರಾಜಕಾರಣದಲ್ಲಿ ಬದಲಾವಣೆ ತರಲು ಬಯಸಿರುವ ಪ್ರದೀಪಗೌಡ ಮಾಲೀಪಾಟೀಲ್‌ರು ಹೊಸ ತಂತ್ರಜ್ಞಾನದ ಮೂಲಕ ಜನರನ್ನು ತಲುಪಲು ಬಯಸಿದ್ದಾರೆ. ಜನತೆಯೊಂದಿಗೆ ಸರಳ ಸಂವಾದಕ್ಕಾಗಿ ಇದನ್ನು ರೂಪಿಸಲಾಗಿದೆ. ಫೇಸ್‌ಬುಕ್ ನಲ್ಲಿ ಸಹ ಎಲ್ಲ ಮಾಹಿತಿ ಲಭ್ಯವಿದೆ. ಆಸಕ್ತರುpradeepgouda.blogspot.com 
 ಮತ್ತು ಫೇಸ್‌ಬುಕ್ ನಲ್ಲಿ https://www.facebook.com/pradeepgouda.kavaloorgoudru   ಲಾಗಿನ್ ಮಾಡಲು ಕೋರಲಾಗಿದೆ.

Leave a Reply

Top