ವಿದ್ಯಾರ್ಥಿಗಳು ವೃತ್ತಿ ಕೌಶಲ್ಯದ ಕಡೆ ಗಮನಹರಿಸಬೇಕು: ಸಾಹಿತಿ ಅಲ್ಲಾಗಿರಿರಾಜ್ ಕರೆ

ಗಂಗಾವತಿ ೦೧: ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಶ್ಯಕತೆ ಜೊತೆಗೆ ವೃತ್ತಿ ಕೌಶಲ್ಯ ಮತ್ತು ಮಾರ್ಗದರ್ಶನವನ್ನು ಪ್ರೌಢಶಾಲಾ ಮಟ್ಟದಲ್ಲಿ ಸರ್ಕಾರ ನೀಡುತ್ತಿರುವುದು ಸದುಪಯೋಗಪಡಿಸಿಕೊಳ್ಳಬೇಕೆಂದು ಸಾಹಿತಿ ಅಲ್ಲಾಗಿರಿರಾಜ್ ಕನಕಗಿರಿ ಕರೆ ನೀಡಿದರು. 
ಅವರು ತಾಲ್ಲೂಕಿನ ವೆಂಕಟಗಿರಿ ಪ್ರೌಢಶಾಲೆಯಲ್ಲಿ ವೃತ್ತಿ ಕೌಶಲ್ಯ ಮತ್ತು ಮಾರ್ಗದರ್ಶನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತ ಭಾರತ ದೇಶದಲ್ಲಿ ಕುಲ ಕಸುಬು ಆಧಾರಿತ ಸಮುದಯಗಳಿಂದ ಸಾವಿರಕ್ಕೂ ಹೆಚ್ಚು ಗುಡಿ ಕೈಗಾರಿಕೆ ಕೌಶಲ್ಯ ತುಂಬಿ ತುಳುಕುತ್ತಿದ್ದವು. ಆದರೆ ಇಂದು ಜಾಗತೀಕರಣ ಮತ್ತು ಉದಾರಿಕರಣದ ಹೊಡೆತದಿಂದ ದೇಶದ ಬಹುಪಾಲು ವೃತ್ತಿಕೌಶಲ್ಯಗಳು ನಶಿಸಿಹೋಗುತ್ತಿರುವದು ದುರಂತ ಸಂಗತಿಯಾಗಿದೆ ಎಂದು ಅಲ್ಲಾಗಿರಿರಾಜ್ ಕನಕಗಿರಿ ಅವರು ವಿಷಾದ ವ್ಯಕ್ತಪಡಿಸಿದರು ಅದಕ್ಕಾಗಿ ವಿದ್ಯಾರ್ಥಿದಿಸೆಯಿಂದಲೆ ವೃತ್ತಿಕೌಶಲ್ಯ ಮತ್ತು ಮಾರ್ಗದರ್ಶನ ಪಡೆದುಕೊಂಡು ನಿರೋದ್ಯೋಗ ಸಮಸ್ಯೆಯಿಂದ ಹೊರಬಂದು ಯುವಜನಾಂಗ ಉತ್ತಮ ಬದುಕು ಕಟ್ಟಬೇಕಾಗಿದೆ ಎಂದು ತಿಳಿಸಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ ಶಾಲೆಯ ಮುಖ್ಯೋಪಾಧ್ಯಯರಾದ ಲಕ್ಷ್ಮಪ್ಪ ಅವರು ಮಾತಾನಾಡಿ ಸದರಿ ಕಾರ್ಯಕ್ರಮದಿಂದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಮಾರ್ಗದರ್ಶನ ಕೇಂದ್ರದ ಕಡೆಗೆ ಗಮನ ಹರಿಸಬೇಕೇಂದು ತಿಳಿಸಿದರು. ಈ ಸಂಧರ್ಬದಲ್ಲಿ ಮುಖ್ಯಅತಿಥಿಗಳಾಗಿ ಎಂ.ಬಿ ಕೊಪ್ಪಳ, ಎಸ್.ಬಿ ಗೊಂಡಬಾಳ್ ಮಂಜುನಾಥ ಬಸವರಾಜ ಹೇಮಂತ್‌ರಾಜ್, ಶ್ರೀಮತಿ ಆಶ್ವಿನಿ ಕುಮಾರ, ಕುಮಾರಿ ಗೀತಾ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕ್ಷೀರಭಾಗ್ಯ ಯೋಜನೆಗೆ ಚಾಲನೆ: ತಾಲ್ಲೂಕಿನ ವೆಂಕಟಗಿರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ತಾಲ್ಲೂಕ ಪಂಚಾಯತಿ ಸದಸ್ಯರಾದ ರುದ್ರಪ್ಪ ಹುಣ್ಣುಕುರಿ ಅವರು ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಫಕೀರಪ್ಪ ಗುರಿಕಾರ ವಹಿಸಿಕೊಂಡಿದ್ದರು. ಮುಖ್ಯೋಪಾದ್ಯಾಯ ಲಕ್ಷ್ಮಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.  

Related posts

Leave a Comment