ಸಮ್ಮೇಳನ ದೃಶ್ಯಗಳು

ಗಂಗಾವತಿ, ಡಿ.9: ಗಂಡುಗಲಿ ಕುಮಾರರಾಮನ ನೆಲ, ಬತ್ತದ ಕಣಜವೆಂದೇ ಖ್ಯಾತಿ ಪಡೆದ ಗಂಗಾವತಿಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 78ನೆ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ದೀಪ ಬೆಳಗಿಸುವ ಮೂಲಕ ಶುಕ್ರವಾರ ಅದ್ದೂರಿ ಚಾಲನೆ ನೀಡಿದರು.
ಈ ಸಂದರ್ಭ ಸಮ್ಮೇಳನಾಧ್ಯಕ್ಷ ಸಿ.ಪಿ.ಕೃಷ್ಣಕುಮಾರ್, ಕಸಾಪ ಅಧ್ಯಕ್ಷ ನಲ್ಲೂರು ಪ್ರಸಾದ್ ಮತ್ತಿತರ ಗಣ್ಯರು ಹಾಜರಿದ್ದರು. ಆರಂಭಿಕವಾಗಿ ಮಾತನಾಡಿದ ನಲ್ಲೂರು ಪ್ರಸಾದ್ ಅವರು, ಕನ್ನಡ ಶಾಲೆಗಳನ್ನು ಮುಚ್ಚುವ ಸರಕಾರದ ನಿರ್ಧಾರವನ್ನು ಖಂಡಿಸಿದರು. ಅಲ್ಲದೇ ಸರಕಾರ ಯಾವುದೇ ಕಾರಣಕ್ಕೂ ಕನ್ನಡದ ಶಾಲೆಗಳನ್ನು ಮುಚ್ಚಬಾರದು ಎಂದು ಮನವಿ ಮಾಡಿಕೊಂಡರು.ಬಳಿಕ ಮಾತನಾಡಿ ಸದಾನಂದ ಗೌಡರು, 78ನೆ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ಅವಕಾಶ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಕನ್ನಡ ವಿರೋಧಿ ಚಟುವಟಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಹಾಗಾಗಿ ಇನ್ಮುಂದೆ ಗಡಿನಾಡಲ್ಲಿ ಕನ್ನಡ ವಿರೋಧಿ ಕೆಲಸ ನಡೆಯದಂತೆ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ಡಾ. ಚಂದ್ರಶೇಖರ ಕಂಬಾರರಿಗೆ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ ಹಾಗೂ ಡಾ.ಎಸ್.ಎಲ್.ಭೈರಪ್ಪನವರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತಿರುವುದು ಕನ್ನಡ ಸಾರಸ್ವತ ಲೋಕಕ್ಕೆ ಹೆಮ್ಮೆಯ ವಿಚಾರ. ಆ ಮೂಲಕ ಕನ್ನಡ ಸಾಹಿತ್ಯ ರಾಷ್ಟ್ರದ ಗಮನ ಮತ್ತಷ್ಟು ಸೆಳೆದಿದೆ ಎಂದರು.

ನಾಡಗೀತೆ
 ಸೇರಿದ ಭರ್ಜರಿ ಜನ
ಈಗ ವಿಶ್ರಾಂತಿಯ ಸಮಯ
 ವೇದಿಕೆಯ ಮುಂಭಾಗ
 ಫಲಪುಷ್ಪ ಪ್ರದರ್ಶನ
 ಕಸಾಪ ಪುಸ್ತಕ ಮಳಿಗೆ
 ಅದ್ಬುತ ಸಂಗ್ರಹಕಾರ ಲಿಂಗಣ್ಣ ಮೇಟಿ
 ಇನ್ನೊಬ್ಬ ಪತ್ರಿಕೆಗಳ ಸಂಗ್ರಹಕಾರ
 ಮಾರಾಟಕ್ಕೆ….
 ಗಂಗಾವತಿ ತಾಲೂಕಿನ ಬರಹಗಾರರ ಪುಸ್ತಕಗಳ ಪ್ರದರ್ಶನ,ಮಾರಾಟ
 ಪುಸ್ತಕ ಮಳಿಗೆಗಳು
 ಅಪ್ಪಟ ಕನ್ನಡಿಗ
 ನೋವಿಗೆ ಮುಲಾಮು ಮಾರಾಟ
 ನಿರಂತರ ಕುವೆಂಪು
 ಸೀರೆ ಇದ್ದಲ್ಲಿ ನೀರೇ….
 ಕಬ್ಬಿನ ಹಾಲು ಬೇಕೆ?
 ಮಳಿಗೆಗಳ ಬಳಿ ಜನ
 ನೋಂದಣಿ ಸಾಲು
 ವಿಶೇಷ ಭಾವುಟ
 78ಮೀಟರ್ ಉದ್ದದ ಬಾವುಟ ಮುಸ್ಲಿಂ ಅಭಿಮಾನಿಗಳಿಂದ
 ಎಸ್ ಎಫ್ ಐ ಸಂಘಟನೆ ಕಾರ್ಯಕರ್ತರಿಂದ ಕನ್ನಡ ಶಾಲೆಗಳ ಮುಚ್ಚುವ ಆದೇಶದ ವಿರುದ್ಧ ಪ್ರತಿಭಟನೆ..  ಕಾರ್ಯಕ್ರಮದಲ್ಲಿ ಸ್ವಲ್ಪ ಹೊತ್ತು ಗೊಂದಲದ ವಾತಾವರಣ..
ಪೋಲೀಸರ್ ಲಾಠಿ ಚಾರ್ಜ  ಮೂರು ನಾಲ್ಕು ಕಾರ್ಯಕರ್ತರಿಗೆ ಗಂಭೀರ ಗಾಯ…
30 ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
 ಪುಷ್ಪದಲ್ಲಿರಳಿದ ಕರುನಾಡು
 ವಿಶ್ರಾಂತಿಯಲ್ಲಿ ಸಿಪಿಕೆ
Please follow and like us:
error