ಅವೈಜ್ಞಾನಿಕ ಒಳಚರಂಡಿ ಕಾಮಗಾರಿಗೆ ಜನರ ತರಾಟೆ.

ಕೊಪ್ಪಳ, ಆ. ೫- ಗ್ರಾಮೀಣ ಪೊಲೀಸ್ ಠಾಣೆ ಎದುರಿನ ಹಸನ್ ರಸ್ತೆಯಲ್ಲಿ ಕರ್ನಾಟಕ ನಗರ ಬಂಡವಾಳ ಹೂಡಿಕೆ ಕಾರ್ಯಕ್ರಮದಡಿ ನಡೆದಿರುವ ಒಳಚರಂಡಿ ಕಾಮಗಾರಿ ಸಂಪೂರ್ಣ ಹೊಣೆಗೆಡಿಯಿಂದ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ್ದರಿಂದ ಸ್ಥಳೀಯರು ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು. ಹಸನ್ ರಸ್ತೆಯಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿಯಲ್ಲಿ ಚೆಂಬರ್‌ಗಳಿಗೆ ಪೈಪುಗಳನ್ನು ಜೋಡಣೆ ಕಾರ್ಯ ನಡೆದಿದ್ದು, ಅವೈಜ್ಞಾನಿಕವಾಗಿ ರಸ್ತೆ  ಅಗೆಯುವದರಿಂದ ಒಳಗಿನ ನಳದ ಪೈಪುಗಳು ಮತ್ತು ಬಿಎಸ್‌ಎನ್‌ಎಲ್ ಸೇರಿದಂತೆ ಇತರೆ ಕೇಬಲ್‌ಗಳನ್ನು ಹಾಳಾಗುತ್ತಿವೆ. ಇಲ್ಲಿಯೇ ಎರಡು ಓಣಿಗಳಿಗೆ ಕುಡಿಯುವ ನೀರಿನ ತೊಂದರೆಯಾಗುತ್ತದೆ, ಕಾಮಗಾರಿ ನಡೆಯುವಾಗ ಯುಜಿಡಿಯ ಸಹಾಯಕ ಅಭಿಯಂತರರಾದ ಸಕ್ಕುಬಾಯಿ ಸ್ಥಳಕ್ಕೆ ಭೇಟಿ ನೀಡಿದಾಗ ಇಲ್ಲಿ ನಳದ ಪೈಪುಗಳಿವೆ ಬೇರೆ ಕಡೆ ತಗ್ಗು ತೊಡಿಸಿ ಎಂದರೂ ಕೇಳದೇ ಅಲ್ಲೇ ತೆಗ್ಗು ತೆಗೆದು ನಳದ ಪೈಪು ಒಡೆದಿದ್ದಾರೆಂದು ಸ್ಥಳದಲ್ಲಿದ್ದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ವೆಂಕಟರಮಣ, ಆರ್‌ಇ ಆರ್.ಎಮ್.ದೊಡ್ಡಮನಿ, ಉಪ ಗುತ್ತಿಗೆದಾರ ರೆಡ್ಡಿ ಇವರಿಗೆ ತರಾಟೆಗೆದುಕೊಂಡು ಆದಷ್ಟು ತೀವ್ರದಲ್ಲಿ ಒಡೆದ ನಳದ ಪೈಪುಗಳನ್ನು ದುರಸ್ಥಿಗೊಳಿಸುವಂತೆ ರಸ್ತೆಗಳು ಆಗಾಗ ಅಗೆಯದೇ ಮೊದಲು ರಸ್ತೆಗಳ ಎರಡೂ ಬದಿಯಲ್ಲಿ ಕುಡಿಯುವ ನೀರು ಪೂರೈಕೆ ಪೈಪುಗಳು ಮತ್ತು ಆಯಾ ಕೇಬಲ್‌ಗಳು ಹಾಕುವ ಮುಂಜಾಗೃತೆ ಕ್ರಮಕೈಗೊಳ್ಳಬೇಕೆಂದು ಎಚ್ಚರಿಸಿದರು. ಕೊಳಚೆ ನಿರ್ಮೂಲನಾ ವೇದಿಕೆಯ ಜಿಲ್ಲಾಧ್ಯಕ್ಷ ಎಸ್.ಎ. ಗಫಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಾಳೇಪ್ಪ ಮುಂಗೋಲಿ, ಮಲ್ಲಪ್ಪ ಮುತ್ತಾಳ, ಎಸ್.ಎ. ಸುಭಾನ್ ಇನ್ನೂ ಅನೇಕ ಸ್ಥಳೀಯರಿದ್ದರು.
Please follow and like us:
error

Related posts

Leave a Comment