fbpx

ಕುಷ್ಟಗಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ ಗುರುತು ಪತ್ತೆಗೆ ಸಹಕರಿಸಲು ಮನವಿ.

ಕೊಪ್ಪಳ
ನ. ೦೭ (ಕ ವಾ) ಕುಷ್ಟಗಿಯ ಬಾಲಾಜಿ ಗ್ರಾನೈಟ್ ಫ್ಯಾಕ್ಟರಿ ಬಳಿಯ
ರಸ್ತೆಯಲ್ಲಿ ಸುಮಾರು ೫೦ ರಿಂದ ೬೦ ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ
ಪತ್ತೆಯಾಗಿದ್ದು, ಇದು ಸಂಶಯಾಸ್ಪದ ಸಾವಾಗಿದ್ದು, ಮೃತ ವ್ಯಕ್ತಿಯ ಗುರುತು ಪತ್ತೆಗೆ
ಸಹಕರಿಸಲು ಕುಷ್ಟಗಿ ಪೊಲೀಸ್ ಠಾಣೆ ಸಬ್‌ಇನ್ಸಪೆಕ್ಟರ್ ಮನವಿ ಮಾಡಿದ್ದಾರೆ.
    
ಮೃತ ವ್ಯಕ್ತಿಯ ವಯಸ್ಸು ೫೦ ರಿಂದ ೬೦ ವರ್ಷ ಇದ್ದು, ತಲೆಯಲ್ಲಿ ಕಪ್ಪು-ಬಿಳಿ ಮಿಶ್ರಿತ
ಗುಂಗುರು ಕೂದಲಿದೆ.  ದುಂಡು ಮುಖ, ಉದ್ದನೆ ಮೂಗು, ಬಿಳಿ ಬಣ್ಣದ ಗಡ್ಡ, ಮೀಸೆ,
ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಬಿಳಿ ಕಪ್ಪು ಬಣ್ಣದ ಚೌಕಳಿ ತುಂಬು ತೋಳಿನ
ಶರ್ಟ್ ಧರಿಸಿದ್ದು, ಕಪ್ಪು ಬಣ್ಣದ ಆಫ್ ಪ್ಯಾಂಟ್, ನೀಲಿ ಬಣ್ಣದ ಬನಿಯನ್, ಬಿಳಿ ಬಣ್ಣದ
ಮಾಸಿದ ಕಪ್ಪು ದಡಿಯುಳ್ಳ ಲುಂಗಿ, ತಿಳಿ ಹಸಿರು ಮತ್ತು ಕೇಸರಿ ಬಣ್ಣದ ಟಾವೆಲ್
ಧರಿಸಿದ್ದು ಇರುತ್ತದೆ.  ಮೈ ಮೇಲೆ ಯಾವುದೇ ಗಾಯ, ಗುರುತು ಕಂಡುಬಂದಿಲ್ಲ.  ನ. ೦೪ ರ
ರಾತ್ರಿ ೯ ಗಂಟೆಯಿಂದ ನ. ೦೫ ರಂದು ಮುಂಜಾನೆ ೯ ಗಂಟೆಯ ಅವಧಿಯಲ್ಲಿ ಮೃತಪಟ್ಟಿರುವ
ಸಾಧ್ಯತೆಗಳಿವೆ.  ಈ ಅಪರಿಚಿತ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ, ಕುಷ್ಟಗಿ
ಪೊಲೀಸ್ ಠಾಣೆ ೦೮೫೩೬- ೨೬೭೦೩೩ ಅಥವಾ ಕೊಪ್ಪಳ- ೦೮೫೩೯-೨೩೦೧೧೧ ಕ್ಕೆ ನೀಡುವಂತೆ ತಿಳಿಸಿದೆ.
Please follow and like us:
error

Leave a Reply

error: Content is protected !!