fbpx

ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್ ಭೂಮಿ ಪೌಂಢೇಶನ್ ಗೆ – ಚಿನ್ನ,

ಗಂಗಾವತಿಯಲ್ಲಿ ಇಂಟರ್‌ನ್ಯಾಷನಲ್ ಗೋಜೊರಿಯು ಕರಾಟೆ-ಡು ಇಂಡಿಯಾ ರವರು ನಡೆಸಿದ ಡಾ|| ಎ.ಪಿ.ಜೆ ಅಬ್ದುಲ್ ಕಲಾಂ ಮೆಮೊರಿಯಲ್ ಅಂಗವಾಗಿ ರಾಷ್ಟ್ರೀಯ ಕರಾಟೆ ಸ್ಪರ್ಧೇಯಲ್ಲಿ ನಗರದ ಭೂಮಿ ಪೌಂಢೇಶನ್ ಕರಾಟೆ ಪಟುಗಳು ಭಾಗವಹಿಸಿದ್ದರು. ಜೂನಿಯರ್ ಬ್ಲಾಕ್ ಬೆಲ್ಟ್ ೫೫ ರಿಂದ ೬೦ ಕೆ.ಜಿ ಕುಮಿತೆ (ಫೈಟ್) ವಿಭಾಗದಲ್ಲಿ ಇಮ್ರಾನ್.ಎಮ್.ಎಚ್ ಚಿನ್ನದ ಪದಕ ಪಡೆದಿದ್ದಾರೆ. ಅದೇ ರೀತಿ ಸಿನಿಯರ್ ಬ್ಲಾಕ್ ಬೆಲ್ಟ್ ಕುಮಿತೆ (ಫೈಟ್) ೬೫ ರಿಂದ ೭೦ ಕೆ.ಜಿ ವಿಭಾಗದಲ್ಲಿ ಸೋಮು ಹಾಗೂ ೭೦ ರಿಂದ ೭೫ ಕೆ.ಜಿ ಕುಮಿತೆ (ಫೈಟ್) ವಿಭಾಗದಲ್ಲಿ ಮಹಾದೇವ ಕಲಾಲ್ ತೃತೀಯ ಸ್ಥಾನ ಕಂಚಿನ ಪದಕ ಪಡೆದಿದ್ದಾರೆ. ಅದೇ ರೀತಿ ಜೂನಿಯರ್ ಕಲರ್ ಬೆಲ್ಟ್ ೧೫ ರಿಂದ ೨೦ ಕೆ.ಜಿ ಕುಮಿತೆ (ಫ್ರೈಟ್) ವಿಭಾಗದಲ್ಲಿ ಮಂಜುನಾಥ.ಕೆ. ಬೆಳ್ಳಿಯ ಪದಕ, ತಿರುಮಲೇಶ.ಕೆ. ಕಂಚಿನ ಪದಕ ಪಡೆದು ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥ ಎಸ್.ವಿ.ಮೌನೇಶ, ತರಬೇತಿದಾರ ದೇವಣ್ಣ.ಕೆ, ವಿಠ್ಠಲ್.ಹೆಚ್. ರವರು ಉಪಸ್ಥಿತರಿದ್ದರು.

Please follow and like us:
error

Leave a Reply

error: Content is protected !!