ಬಿಜೆಪಿಗೆ ಸಂಕೇಶ್ವರ್ ರಾಜೀನಾಮೆ

ಹುಬ್ಬಳ್ಳಿ, ಡಿ.೧೧: ಬಿಜೆಪಿ ಮೇಲ್ಮನೆ ಸದಸ್ಯ, ಪತ್ರಿಕೋದ್ಯಮಿ ವಿಜಯ ಸಂಕೇಶ್ವರ್ ತನ್ನ ಎಂಎಲ್‌ಸಿ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪರ ಕೆಜೆಪಿ ಜತೆ ಇತ್ತೀಚೆಗೆ ಗುರುತಿಸಿಕೊಂಡಿದ್ದ ಸಂಕೇಶ್ವರರು ನಿರೀಕ್ಷೆಯಂತೆ ರಾಜೀನಾಮೆ ನೀಡಿದ್ದಾರೆ. ಹಾಗೂ ಇನ್ನೂ ಅನೇಕ ಎಂಎಲ್‌ಸಿಗಳು ಇಂದು ರಾಜೀನಾಮೆ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ವಿಶೇಷ ಅಧಿವೇಶನದಲ್ಲಿ ಪಾಲ್ಗೊಂಡಿರುವ ವಿಜಯ ಸಂಕೇಶ್ವರ ಇದೀಗ ತಾನೆ ತಮ್ಮ ರಾಜೀನಾಮೆ ಪತ್ರವನ್ನು ಪರಿಷತ್ತಿನ ಸಭಾಪತಿಗೆ ತಲುಪಿಸಿದ್ದು, ಬಿಜೆಪಿ ಜತೆಗಿನ ಸುದೀರ್ಘ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಇದೇ ವೇಳೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿರುವ ಸಂಕೇಶ್ವರ ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ. ಆರ್‌ಎಸ್‌ಎಸ್  ಹಿಡಿತದಲ್ಲಿ ಬಿಜೆಪಿ ಸಿಲುಕಿ ಒದ್ದಾಡುತ್ತಿದೆ. ಆದ್ದರಿಂದ ಪಕ್ಷದೊಂದಿಗೆ ಸಂಬಂಧ ಕಡಿದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಕೆಜೆಪಿ ಜತೆ ಗುರುತಿಸಿಕೊಂಡಿರುವ ಮೇಲ್ಮನೆ ಸದಸ್ಯರ ಬಗ್ಗೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ  ಮಾಜಿ ಸಿಎಂ ಸದಾನಂದ ಗೌಡ ನೇತೃತ್ವದಲ್ಲಿ ಬಿಜೆಪಿ ನಾಯಕರು ಸಭೆ ಸೇರಿರುವ ಸಮಯದಲ್ಲೇ ಇತ್ತ ಸಂಕೇಶ್ವರ ಅವರು ಸಭಾಪತಿ ಡಿ.ಎಚ್. ಶಂಕರಮೂರ್ತಿರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಸಂಕೇಶ್ವರ ರಾಜೀನಾಮೆಯನ್ನು ಸಭಾಪತಿ ಅಂUಕರಿಸಿದ್ದಾರೆ. ಈ ಮಧ್ಯೆ, ಬಿಜೆಪಿ ವರಿಷ್ಠ ಧರ್ಮೇಂದ್ರ ಪ್ರಧಾನ್ ಬೆಳಗಾವಿಗೆ ದೌಡಾಯಿಸಿದ್ದಾರೆ.

Please follow and like us:
error

Related posts

Leave a Comment