ಪಕ್ಷಾತೀತವಾಗಿ ನಿಸ್ವಾರ್ಥತೆಯಿಂದ ಕಾರ್ಯನಿರ್ವಸಿದಲ್ಲಿ ಸಹಕಾರ ಸಂಸ್ಥೆಗಳು ಬಲಗೊಳ್ಳಲು ಸಾದ್ಯ -ಹಾಲಪ್ಪ ಆಚಾರ

ಯಲಬುರ್ಗಾ :೧೫-೧೧-೨೦೧೪ ರಂದು ಶುಕ್ರವಾರ ಬೆಳಗ್ಗೆ ೧೧-೦೦ ಗಂಟೆಗೆ ೬೧ ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ವೃತ್ತಿ ಕೌಶ್ಯಲತೆ ಅಭಿವೃಧ್ಧಿ & ಮಹಿಳಾ ಸಬಲಿಕರಣ, ಯುವಜನತೆ ಮತ್ತು ಅಬಲ ವರ್ಗಗಳ ಆಚರಣೆ “ದಿನವನ್ನು ವಜ್ರಬಂಡಿ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು. 
ಕಾರ್ಯಕ್ರಮದ ಉದ್ಘಾಟನೆಯನ್ನು   ಹಾಲಪ್ಪ ಆಚಾರ. ವಿಧಾನ ಪರಿಷತ್ ಸದಸ್ಯರು ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿ., ಬೆಂಗಳೂರು. ಇವರು ಜ್ಯೋತಿ ಬೆಳಗಿಸುವುದರೊಂದಿಗೆ ತಮ್ಮ ಅಮೃತ ಹಸ್ತದಿಂದ ಉದ್ಘಾಟಿಸಿದರು. ನಂತರ ಉದ್ಘಾಟನಾ ಭಾಷಣದಲ್ಲಿ ಸಹಕಾರ ಚಳುವಳಿಯನ್ನು ಅಬಲರ ಅಭಿವೃದ್ಧಿಗಾಗಿ ಆರಂಭಿಸಲಾಯಿತು. ಆರಂಭದಲ್ಲಿ ಸಹಕಾರ ಚಳವಳಿ ರೈತ ಚಳವಳಿಯಾಗಿ ಕಾರ್ಯಾರಂಭ ಮಾಡಿದರೂ ವರ್ಷಗಳು ಉರುಳಿದಂತೆಲ್ಲ ಸಮಾಜದ ಎಲ್ಲ ವರ್ಗದ ಅಗತ್ಯಗಳನ್ನು ಪೊರೈಸುತ್ತಾ ಬಂದಿದೆ. ಸಹಕಾರ ಚಳವಳಿ ಅಬಲರಿಗೆ ರಕ್ಷಾ ಕವಚವೇ ಹೊರತು ಶ್ರೀಮಂತರ ಆಯುಧವಲ್ಲ ಸಹಕಾರ ಸಂಸ್ಥೆಗಳಲ್ಲಿರುವ ಪ್ರತಿಯೋಬ್ಬರು ಪಕ್ಷಾತಿತವಾಗಿ ನಿಶ್ವಾರ್ಥತೆಯಿಂದ ಕಾರ್ಯನಿರ್ವಹಿಸಿದಲ್ಲಿ ಸಹಕಾರ ಸಂಸ್ಥೆಗಳು ಬಲಗೊಳ್ಳಲು ಸಾಧ್ಯ ಎಂದು ಕರೆ ನೀಡಿದರು. 
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆರ್.ಡಿ.ಸಿ.ಸಿ ಬ್ಯಾಂಕ್ ನಿ, ರಾಯಚುರು ಇದರ ನಿರ್ದೇಶಕರಾದ   ಮುನಿಯಪ್ಪ ಹುಬ್ಬಳ್ಳಿ, ಶ್ರೀಮತಿ ಮಹಾದೇವಿ ಕಂಬಳಿ ತಾಲೂಕ ಪಂಚಾಯತ ಅಧ್ಯಕ್ಷರು, ಮಾನಪ್ಪ ಪೂಜಾರ, ಎಪಿಎಂಸಿ ಸದಸ್ಯರು,  ರಸುಲ್ಲಸಾಬ ಮುಜಾವಾರ ಇವರುಗಳು ಮಾತನಾಡಿದರು. 
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ  ಗವಿಸಿದ್ದೇಶ ಹೆಚ್ ಹುಡೇಜಾಲಿಮಠ ನಿರ್ದೆಶಕರು ಜಿಲ್ಲಾ ಸಹಕಾರ ಯೂನಿಯನ್ ನಿ, ಕೊಪ್ಪಳ,   ರಾಮಣ್ಣ ಸಾಲಾಭಾವಿ. ಸದಸ್ಯರು, ಜಿಲ್ಲಾ ಪಂಚಾಯತ,   ದುರುಗನೌಡ ಮಾಲಿಪಾಟೀಲ್ ಅಧ್ಯಕ್ಷರು, ಗ್ರಾಮ ಪಂಚಾಯತ, ವಜ್ರಬಂಡಿ  ರಾಮಪ್ಪ ಪೂಜಾರ ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ವಜ್ರಬಂಡಿ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ   ಶರಣಬಸಪ್ಪ ಕಾಟ್ರಳ್ಳಿ      ರಾಜಶೇಖರ ಹೊಸಮನಿ,  ಗವಿಸಿದ್ದಯ್ಯ ಹಿರೇಮಠವರು ಹಾಗೂ ವಜ್ರಬಂಡಿ ಗ್ರಾಮದ ಹಿರಿಯರು ಉಪಸ್ಥಿತರಿದ್ದರು. 
ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿಕೊಂಡಂತಹ  ಹನುಮಪ್ಪ ಉಪ್ಪಾರ ಉಪಾಧ್ಯಕ್ಷರು, ಜಿಲ್ಲಾ ಸಹಕಾರ ಯೂನಿಯನ್ ನಿ., ಕೊಪ್ಪಳ ಇವರು ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಸಹಕಾರ ಸಪ್ತಾಹದ ಆಚರಣೆಯು ೭ ದಿನಗಳ ಕಾಲ ರಾಜ್ಯ ಮತ್ತು ಜಿಲ್ಲೆಯಾಧ್ಯಂತ ದಿ. ಪಂಡಿತ ಜವಹರ್‌ಲಾಲ್ ನೆಹರು ಇವರ ಜನ್ಮ ದಿನದಂದು ಅವರು ಮಾಡದಂತಹ ಸಹಕಾರ ಕ್ಷೇತ್ರದ ಹಲವು ಮಹತ್ತರ ಬದಲಾವಣೆಯನ್ನು ನೆನಪಿಗೊಸ್ಕರ ಸಹಕಾರ ಚಳುವಳಿ ಬಲಗೊಳ್ಳುವ ದಿಸೆಯಲ್ಲಿ ಅತ್ಯುತ್ತಮವಾದ ಕಾರ್ಯನಿರ್ವಹಿಸಲು ಅನೇಕ ಸೌಲತ್ತುಗಳನ್ನು ನೀಡಿರುತ್ತಾರೆ. ಇಂತಹ ಕಾರ್ಯಕ್ರಮದಿಂದ ಸಹಕಾರ ಕ್ಷೇತ್ರದ ಬಗ್ಗೆ ಜನರಿಗೆ ಅರಿವು ಮೂಡಿಸುವ ಇಂತಹ ಸಪ್ತಾಹದ ಆಚರಣೆಯೂ ಅರ್ಥಪೂರ್ಣ ಮತ್ತು ಅವಶ್ಯ ಎಂದು ಮಾತನಾಡಿದರು. 
ಪ್ರಾರಂಭದಲ್ಲಿ ಶಾಲಾ ಬಾಲಕಿಯರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮಕ್ಕೆ ಅತಿಥಿಗಳನ್ನು  ಶರಣಗೌಡ ಪೋಲಿಸ್ ಪಾಟೀಲ್ ಇವರು ಸ್ವಾಗತಿಸಿದರು. ನಿರೂಪಣೆ ಹಾಗೂ ಪ್ರಾಸ್ತಾವಿಕವಾಗಿ ಕೊಪ್ಪಳ ಜಿಲ್ಲಾ ಸಹಕಾರ ಯೂನಿಯನ್ನಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ  ಶರಣಬಸಪ್ಪ ಕಾಟ್ರಳ್ಳಿಯವರು ಮಾತನಾಡಿದರು. ಕೊನೆಯಲ್ಲಿ  ಗವಿಸಿದ್ದೇಶ ಹೆಚ್ ಹುಡೇಜಾಲಿಮಠ ನಿರ್ದೆಶಕರು ಜಿಲ್ಲಾ ಸಹಕಾರ ಯೂನಿಯನ್ ನಿ, ಕೊಪ್ಪಳ,  ಇವರು ವಂದನಾರ್ಪಣೆಯನ್ನು ಮಾಡಿದರು.
Please follow and like us:
error

Related posts

Leave a Comment