fbpx

ಬದನೆಪಲ್ಯ, ಕಡಕ್ ರೊಟ್ಟಿ- ಪಲಕ್ ಜುನಕಾ ಹಾಗೂ ಬಿಸಿ -ಹಾಲು, ಮಾದಲಿ, ತುಪ್ಪ

ಶುರುವಾಯ್ತು ದಾಸೋಹ- 
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದ ಜಾತ್ರಾ ಅಂಗವಾಗಿ  

ಬುಧವಾರದಿಂದ ಮಹಾದಾಸೋಹದಲ್ಲಿ  ಪ್ರಸಾದ ವಿತರಿಸುವ ಕಾರ್ಯ ಭರದಿಂದ ಸಾಗಿದೆ. ಇಂದು ಬೆಳಿಗ್ಗೆ ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಸಕಲ ಭಕ್ತಸಮೂಹಕ್ಕೆ ಪ್ರಸಾದ ನೀಡುವದರ ಮೂಲಕ  ದಾಸೋಹಕ್ಕೆ  ಚಾಲನೆ ನೀಡಿದರು. ಆರಂಭಗೊಂಡ ಮೊದಲ ದಿನವೇ ಲಕ್ಷಾಂತರ ಭಕ್ತಾಧಿಗಳು ಮಹಾದಾಸೋಹದಲ್ಲಿ ಪ್ರಸಾದ ಸವಿ ಸವಿದರು. ಹಾಲು, ತುಪ್ಪ, ಮಾದಲಿ, ಬದನೆ ಪಲ್ಯ, ಬೇಳೆ ಪಲ್ಯ, ಕಡಕ್ ರೊಟ್ಟಿ, ಹಿಟ್ಟಿನ ಜುನಕಾ  ಇವೆಲ್ಲವು ಭಕ್ತರ ಹಸಿವು ನೀಗಿಸಿದವು. ಇಂದಿನಿಂದ ಆರಂಭಗೊಂಡ ಈ ಮಹಾದಾಸೋಹವು ಅಮವಾಸ್ಯೆಯವರೆಗೂ ನಿರಂತವರಾಗಿ ಜರುಗುತ್ತದೆ. ದಿನಾಲು ವೈವಿಧ್ಯಮಯವಾದ  ಮತ್ತು ರುಚಿಕಟ್ಟಾದ ಪ್ರಸಾದ ಭಕ್ತರಿಗೆ ದೊರೆಯಲಿದೆ. ಪ್ರಸಾದ ಸವಿದ ನಂತರ ಧನ್ಯತಾ ಭಾವನೆಯಿಂದ ಪುಳಕಿತರಾಗಿ ಶ್ರೀಗವಿಸಿದ್ಧೇಶ್ವರನನ್ನು ಸ್ಮರಿಸುತ್ತಿರುವ ದೃಶ್ಯ ಶ್ರೀಗವಿಮಠದಲ್ಲಿ ಕಂಡು ಬಂದಿತು. ಇಂದಿನ ಪ್ರಸಾದ ತಯಾರಿಸುವ ಸೇವೆಯನ್ನು ಮಂಗಳೂರು, ಕಲ್ ತಾವರಗೇರಿ, ವಗರನಾಳ, ಜಂತ್ಲಿ- ಶಿರೂg, ಹಳ್ಳಿಗುಡಿ, ಕಾಸನಕಂಡಿ, ಬೇವಿನಾಳ,ಕಾಮನೂರ ಗ್ರಾಮಗಳ ಭಕ್ತರು ಹಾಗೂ ಪ್ರಸಾದ ಬಡಿಸುವ ಸೇವೆಯನ್ನು ಶ್ರೀಮತಿ ಶಾರದಮ್ಮಾ ಕೊತಬಾಳ ಮಹಾವಿದ್ಯಾಲಯದ ಗವಿಸಿದ್ಧಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನೆರವೇರಿಸಿದರು.

Please follow and like us:
error

Leave a Reply

error: Content is protected !!