ಅನಧಿಕೃತ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಎಸ್.ಎಫ್.ಐ ಅವಕಾಶ ಕೋರಿಕೆ

ಅನಧಿಕೃತ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾರ್ಥಿಗಳಂತೆ ಪರೀಕ್ಷೆ ನಡೆಸಲು ಅವಕಾಶಕೋರಿ ಒತ್ತಾಯ.
ಈಗಾಗಲೇ ಅನಧಿಕೃತ ಶಾಲೆಗಳ ಪಟ್ಟಿಯನ್ನು  ಸಾರ್ವಜನಿಕ ಶಿಕ್ಷಣ ಇಲಾಖೆ ಇಲಾಖೆ ಬಿಡುಗಡೆ ಮಾಡಿದೆ. ಅನಧಿಕೃತ ಖಾಸಗಿ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವುದನ್ನು ಎಸ್.ಎಫ್.ಐ ಸ್ವಾಗತಿಸುತ್ತದೆ.  ಆದರೆ ಆ ಶಾಲೆಯಲ್ಲಿರುವ ವಿದ್ಯಾರ್ಥಿಗಳನ್ನು ಪರ್ಯಾಯವಾಗಿ ಎಲ್ಲಿ ಸೇರಿಸಬೇಕು ಎಂಬ ಗೊಂದಲ ವಿದ್ಯಾರ್ಥಿಗಳನ್ನು ಮತ್ತು ಪಾಲಕರನ್ನು  ಕಾಡುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪಾಲಕರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ. ಪರಿಣಾಮವಾಗಿ ಅಂತಹ  ಶಾಲೆಗಳಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ ಓದುತ್ತಿರುವ ೪೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ತೀವ್ರ ಅಡ್ಡಿಗಳು ಬರುತ್ತಿವೆ. ಅವರನ್ನು ಬಾಹ್ಯ ವಿದ್ಯಾರ್ಥಿಗಳೆಂದು ಪರಿಗಣಿಸಲಾಗುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ೮೦ ಅಂಕ ಥಿಯೆರಿ & ೨೦ ಅಂಕ ಪ್ರಾಯೋಗಿಕ ಪರೀಕ್ಷೆಗಳನ್ನು ಬರೆದರೆ ಅನಧಿಕೃತ ಶಾಲೆಯ ವಿದ್ಯಾರ್ಥಿಗಳು ೧೦೦ ಪೂರ್ಣ ಅಂಕಗಳಿಗೆ ಪರೀಕ್ಷೆ ಬರೆಯಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೇಳಿದೆ. ಇದರಿಂದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ಬೌಧ್ಧಿಕವಾಗಿ ಹಿಂಸೆ ನೀಡಿದಂತಾಗುತ್ತದೆ.
ತಪ್ಪು ಮಾಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕೂಡಲೇ ಕ್ರಮ ಜರುಗಿಸಬೇಕಿದೆ. ಸರ್ಕಾರದ ಈ ಕ್ರಮ ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಕೊಟ್ಟಂತಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಕ್ರಮ ಜರುಗಿಸದೆ ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ಈ ರೀತಿಯ ಶಿಕ್ಷೆ ನೀಡುತ್ತಿರುವುದು ಸರಿಯಲ್ಲ. ಮುಂದೆ ಅವರ ತೇರ್ಗಡೆ ಪ್ರಮಾಣಪತ್ರ, ಅಂಕಪಟ್ಟಿ  ಸೇರಿದಂತೆ ಇತರ ಕೆಲಸಗಳಿಗೆ ತೊಂದರೆಯಾಗುವ ಸಂಭವವಿದೆ. ಅದಕ್ಕಾಗಿ ಕೂಡಲೆ ಪಾಲಕರಲ್ಲಿರುವ ಆತಂಕವನ್ನು ಹೋಗಲಾಡಿಸಲು ಶಿಕ್ಷಾಣ ಇಲಾಖೆಯು ಹಾಗೂ ಸರ್ಕಾರ ಮಧ್ಯಪ್ರವೇಶಿಸಬೇಕಿದೆ.
ಅನಧಿಕೃತ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾರ್ಥಿಗಳಂತೆ ಪರೀಕ್ಷೆ ನಡೆಸಲು ಅವಕಾಶ ನೀಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಎಸ್.ಎಫ್.ಐ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಲಿದೆ ಎಂದು ಎಸ್ ಎಫ್ ಐ ಸಂಘಟನೆ  ಅಮರೇಶ ಕಡಗದ್      ಜಿಲ್ಲಾ ಅಧ್ಯಕ್ಷರು ,ಬಾಳಪ್ಪ ಹುಲಿಹೈದರ್ ಜಿಲ್ಲಾ ಕಾರ್ಯದರ್ಶಿ ,ಶಿವಕುಮಾರ್, ಕೃಷ್ಣ ರಾಥೋಡ್ ಸಿದ್ರಾಮೇಶ ಉಮೇಶ ರಾಠೋಡ್, ಚೆನ್ನಪ್ಪ, ರೂಪಾ, ಕಾವ್ಯ, ಕಲ್ಪನಾ, ಹನುಮಂತಿ   ತಿಳಿಸಿದ್ದಾರೆ.
Please follow and like us:
error