fbpx

ಕಾರ್ಮಿಕ ವಿರೋಧಿ ಜಿಲ್ಲಾಧಿಕಾರಿ- ಭಾರಧ್ವಾಜ್

ಕೊಪ್ಪಳ ಜಿಲ್ಲಾಧಿಕಾರಿಯಾದ ಆರ್.ಆರ್. ಜನ್ನು, ಕಳೆದ ಒಂದು ತಿಂಗಳಿನಿಂದ ಗಂಗಾವತಿ ಪೌರಕಾರ್ಮಿಕರು ಹಲವಾರು ಬಾರಿ ಮನವಿ ಸಲ್ಲಿಸಿ ನೇರ ಭೇಟಿಯಾಗಿ ನ್ಯಾಯ ಕೊಡಿಸಲು ಕೇಳಿಕೊಂಡರು ಸ್ಪಂದಿಸದ ಜಿಲ್ಲಾಧಿಕಾರಿ ಕಾರ್ಮಿಕ ವಿರೋಧಿಯಾಗಿದ್ದಾರೆಂದು ಭಾರಧ್ವಾಜ್ ಆರೋಪಿಸಿದ್ದಾರೆ.
ಗಂಗಾವತಿ ನಗರಸಭೆಯ ಪೌರಾಯುಕ್ತ ಎ.ಆರ್. ರಂಗಸ್ವಾಮಿ ದಿನಾಂಕ ೫-೦೩-೨೦೧೫ ರಂದು ಜಿಲ್ಲಾ ಕಾರ್ಮಿಕರ ನ್ಯಾಯಾಲಯದಲ್ಲಿ ಇದ್ದ ದಾವೆಗೆ ಜಿಲ್ಲಾ ಕಾರ್ಮಿಕಾಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಾಗಲು ನೋಟಿಸ್ ನೀಡಿದರೂ ಲೆಕ್ಕಿಸದೇ ಗೈರು ಹಾಜರಿಯಾಗಿ ಕಾರ್ಮಿಕರಿಗೆ ದ್ರೋಹ ಮಾಡಿದ್ದಾರೆ. ೪೨ ಜನ ದಲಿತ ಮಹಿಳಾ ಕಾರ್ಮಿಕರು ೩ ಗಂಟೆಗಳ ಕಾಲ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಕೂತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ನ್ಯಾಯ ಕೊಡಿಸಬೇಕೆಂದು ಬೇಡಿಕೊಂಡರು. ಕಾರ್ಮಿಕರಿಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯೆ ನೀಡುತ್ತಾ ನನ್ನ ಕೈಯಲ್ಲಿ ಏನು ಇಲ್ಲ, ನಿಮಗೆ ಬರಬೇಕಾದ ಬಾಕಿ ವೇತನವನ್ನು ಮಾತ್ರ ಕೊಡಲು ಪೌರಾಯುಕ್ತರಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿ ತಮ್ಮ ಕಾರ್ಮಿಕ ವಿರೋಧಿ ನೀತಿಯನ್ನು ಬಹಿರಂಗಗೊಳಿಸಿದ್ದಾರೆ. 
ದಿ ೦೮-೦೩-೨೦೧೫ ರ ಒಳಗಾಗಿ ೧೨೦ ಜನ ಪೌರ ಕಾರ್ಮಿಕರಿಗೆ ೫ ತಿಂಗಳ ವೇತನ ಪಾವತಿಸಿ ಕೆಲಸದಿಂದ ಹೊರ ಹಾಕಿದ ೪೨ ಜನ ಮಹಿಳಾ ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ದಿನಾಂಕ ೦೯-೦೩-೨೦೧೫ ರಂದು ನಗರಸಭೆಯ ಕಾರ್ಯಾಲಯಕ್ಕೆ ಬೀಗ ಜಡಿಯುವುದಾಗಿ, ಅಲ್ಲಿಗೂ ನಗರಸಭೆ ಸ್ಪಂದಿಸದಿದ್ದಲ್ಲಿ ಕಾರ್ಮಿಕರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಭಾರಧ್ವಾಜ್  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!