ವೇಕ್ ಅಪ್ ಕಾಲ್ ಸೇವೆ ಸದುಪಯೋಗಪಡಿಸಿಕೊಳ್ಳಲು ಮಾಜಿ ಸಂಸದರ ಮನವಿ

ರೈಲ್ವೆ ಪ್ರಯಾಣಿಕರಲ್ಲಿ ಮನವಿ ವೇಕ್ ಅಪ್ ಕಾ

ಲ್ ಸೇವೆ ಸದುಪಯೋಗಪಡಿಸಿಕೊಳ್ಳಿ

ಪ್ರಯಾಣಿಕರು ಇಳಿಯಬೇಕಾದ ಸ್ಥಳ ತಲುಪುವ ಅರ್ಧಗಂಟೆ ಮುಂಚೆಯೇ ಎಚ್ಚರಿಸುವ ಹಾಗೂ ರೈಲು ನಿಲ್ದಾಣ ಎಚ್ಚರಿಕೆ ಕರೆಯ ಸೌಲಭ್ಯವನ್ನು ರೈಲ್ವೆ ಇಲಾಖೆ ಪರಿಚಯಿಸಿದ್ದು, ರೈಲ್ವೆ ಪ್ರಯಾಣಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ರೈಲ್ವೆಯ ಈಗಿರುವ ವಿಚಾರಣಾ ಸಹಾಯವಾಣಿ ಸಂಖ್ಯೆ: ೧೩೯ ರಲ್ಲಿಯೇ ಈ ವಿನೂತನ ’ವೇಕ್ ಅಪ್ ಕಾಲ್’ ಸೇವೆಯೂ ಲಭ್ಯವಿದೆ. ಭಾರತ್ ಬಿಪಿಓ ಸಹಾಯದೊಂದಿಗೆ ಐಆರ್‌ಸಿಟಿಸಿಯು ಈ ಸೇವೆಯನ್ನು ಪ್ರಾರಂಭಿಸಿದೆ. ಪ್ರಯಾಣಿಕರು ೧೩೯ ಸಂಖ್ಯೆಗೆ ಕರೆ ಮಾಡಿ ತಮ್ಮ ಭಾಷೆಯನ್ನು ಆಯ್ದುಕೊಳ್ಳಬೇಕು. ನಂತರ ’ವೇಕ್ ಅಪ್ ಕಾಲ್’ ಸೇವೆಯ ಸಂಖ್ಯೆ ೭ ನ್ನು ಆಯ್ದುಕೊಂಡು ತಮ್ಮ ಪಿಎನ್‌ಆರ್ ಸಂಖ್ಯೆ, ನಿಲ್ದಾಣದ ಹೆಸರು ಹಾಗೂ ನಿಲ್ದಾಣದ ಎಸ್‌ಟಿಡಿ ಕೋಡನ್ನು ನಮೂದಿಸಿ ಮೂಲಕ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು.
ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ಇಳಿಯಬೇಕಾದ ನಿಲ್ದಾಣ ತಪ್ಪುವದೆಂಬ ಭಯದಿಂದ ನಿದ್ದೆಗೆಡುವ ಪ್ರಮೇಯ ಇನ್ನು ಮುಂದೆ ಇರುವುದಿಲ್ಲ. ನಿಲ್ದಾಣವನ್ನು ತಲುಪುವ ಅರ್ಧ ಗಂಟೆ ಮುಂಚಿತವಾಗಿಯೇ ಪ್ರಯಾಣಿಕರನ್ನು ಎಚ್ಚರಗೊಳಿಸುವ ವ್ಯವಸ್ಥೆ ಇದಾಗಿದ್ದು, ರೈಲು ನಿಲ್ದಾಣ ಎಚ್ಚರಿಕೆ ಕರೆಯನ್ನೂ ಸಹ ಇದು ಒಳಗೊಂಡಿದೆ.
ರೈಲ್ವೆ ಇಲಾಖೆಯ ಈ ವಿನೂತನ ಯೋಜನೆಯ ಸದುಪಯೋಗವನ್ನು ಪ್ರಯಾಣಿಕರು ಪಡೆದುಕೊಳ್ಳಲು -ಮಾಜಿ ಸಂಸದ ಶಿವರಾಮಗೌಡ ಕೋರಿದ್ದಾರೆ.

Leave a Reply