ಜೆ.ಎಸ್.ಡಬ್ಲ್ಯೂಉತ್ಕೃಷ್ಟ ಉಕ್ಕು ಉತ್ಪಾದನೆಯಲ್ಲಿ ದಾಖಲೆ ಬೆಸ್ಟ್ ಇಂಟಿಗ್ರೆಟಡ್ ಸ್ಟೀಲ್ ಪ್ಲ್ಯಾಂಟ್ ಪ್ರಶಸ್ತಿ

ಹೊಸಪೇಟೆ:ಜಾಗತಿಕ ಮಟ್ಟದ ಉತ್ಕೃಷ್ಠ ಉಕ್ಕು ಉತ್ಪಾದನೆಯಲ್ಲಿ ದಾಖಲಾತಿ ಪ್ರಮಾಣದಲ್ಲಿ ಸಾಧನೆಗೈದಿರುವ ತೋರಣಗಲ್ ಜೆಎಸ್‌ಡಬ್ಲ್ಯೂ ಜಿಂದಾಲ್ ಉಕ್ಕು ಕಾರ್ಖಾನೆಗೆ ೨೦೧೨-೧೩ನೇ ಸಾಲಿನ ಬೆಸ್ಟ್ ಇಂಟಿಗ್ರೆಟಡ್ ಸ್ಟೀಲ್ ಪ್ಲ್ಯಾಂಟ್ ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಾಡಿದ್ದಾರೆ ಎಂದು ಜೆಎಸ್‌ಡಬ್ಲ್ಯೂ ಜಿಂದಾಲ್ ಸಂಸ್ಥೆಯ ಆಡಳಿತ ಮಂಡಳಿ ವಿಭಾಗದ ಉಪಾಧ್ಯಕ್ಷ ಮಂಜುನಾಥ ಪ್ರಭು ಹೇಳಿದರು.
ತೋರಣಗಲ್ ಜಿಂದಾಲ್ ಸಂಸ್ಥೆಯ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇದು ಸಂಸ್ಥೆಗೆ ಒಂದು ಹೆಮ್ಮೆಯ ವಿಷಯವಾಗಿದೆ ಎಂದರು. ವಿಶ್ವದಾಖಲೆಯ ಅಪ್ರತಿಮ ಓಟಗಾರ ಹುಸೇನ್ ಬೋಲ್ಡ್ ರವರ ಸಾಧನೆಯಂತೆ ಜೆಎಸ್‌ಡಬ್ಲ್ಯೂ ಜಿಂದಾಲ್ ಸಂಸ್ಥೆಯು ಬಳ್ಳಾರಿ ಜಿಲ್ಲೆಯ ಬರಡು ಭೂಮಿಯಲ್ಲಿ ದಿವಂಗತ ಓ.ಪಿ.ಜಿಂದಾಲ್ ಅವರ ಆಶಯದಂತೆ ಸಜ್ಜನ್ ಜಿಂದಾಲ್ ಇವರು ೧೯೯೪ರಲ್ಲಿ ಉಕ್ಕು ಕಾರ್ಖಾನೆ ಆರಂಭಿಸಿದರು. ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಆಯಿತು ಎಂದರು. 
ವಾರ್ಷಿಕ ಒಂದು ಮಿಲಿಯನ್ ಟನ್ ಉಕ್ಕು ಉತ್ಪಾದನೆ ನಡೆಸುವ ಮೂಲಕ ದೇಶದ ಏಕೈಕ ಸ್ವತಂತ್ರ ಉಕ್ಕು ಉದ್ಯಮದ ಘಟಕ ಇದಾಗಿದೆ ಎಂದರು. ೨ಕೋಟಿ ಮೊತ್ತದ ಪ್ರಧಾನ ಮಂತ್ರಿಗಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಜೆಎಸ್‌ಡಬ್ಲ್ಯೂ ಜಿಂದಾಲ್ ಸಂಸ್ಥೆಯು ಭವಿಷ್ಯದಲ್ಲಿ ೪೦ ಮಿಲಿಯನ್ ಮೆಟ್ರಿಕ್ ಟನ್ ಉಕ್ಕು ಉತ್ಪಾದನೆ ನಡೆಸುವ ಗುರಿ ಹೊಂದಿದೆ ಎಂದರು. ಆಡಳಿತಾಂಗದ ಅಧಿಕಾರಿ ಎಂ.ಎಸ್.ಶರ್ಮಾ ಆಗೂ ಸಾಮಾಜಿಕ ಸೇವೆ ವಿಭಾಗದ ಡಾ.ಸಿ.ಎಸ್.ಕೇದಾರ್ ಮಾತನಾಡಿ, ಜೆಎಸ್‌ಡಬ್ಲ್ಯೂ ಜಿಂದಾಲ್ ತೋರಣಗಲ್ ಸುತ್ತಮುತ್ತಲಿನ ಸುಮಾರು ೨೯ ಹಳ್ಳಿಗಳ ೧ ಲಕ್ಷ ಜನರಿಗೆ ಉಪಯುಕ್ತವಾಗುವ ಅನೇಕ ಸಾಮಾಜಿಕ ಕಾರ್ಯಕ್ರಗಳನ್ನು ಕೈಗೊಂಡು ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಸ್ವಚ್ಛ ಭಾರತ ಯೋಜನೆಗೆ ಪೂರಕವಾಗಿಕೈಜೋಡಿ ಪರಿಸರ ನೈರ್ಮಲ್ಯ ಹಾಗೂ ಹಸಿರುಮುಕ್ತಗೊಳಿಸುವ ಕಾರ್ಯ ನಡೆಸಿದೆ ಎಂದರು. ಇದಕ್ಕಾಗಿ ಮೈರಾಡ್, ಸ್ವಾಮಿನಾಥನ್ ಫೌಂಡೇಷನ್, ಹಾಗೂ ವಿಕಾಸ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಮಹಿಳೆಯರ, ಕೃಷಿಕರ, ವಿದ್ಯಾರ್ಥಿಗಳ ಸ್ವಾವಲಂಬನೆಗಾಗಿ ಅನೇಕ ಯೋಜನೆ ಅನುಷ್ಠಾನಕ್ಕೆ ತರುತ್ತಿದೆ. ಪ್ರಮುಖವಾಗಿ ನೈರ್ಮಲ್ಯಕ್ಕಾಗಿ ಶೌಚಾಲಯ ನಿರ್ಮಿಸಲಾಗಿದೆ ಎಂದರು. 
ವಿದ್ಯಾರ್ಥಿಗಳಿಗೆ ಸೌರ ದೀಪ ವಿತರಣೆ, ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ನೆರವು, ಕುಶಲಕರ್ಮಿಗಳಿಗೆ ತರಬೇತಿ ನೀಡುವುದು. ಶಾಲೆಗಳಿಗೆ ಗ್ರಂಥಾಪಯ, ಕಂಪ್ಯೂಟರ್ ಕೊಡುಗೆ, ಯುವಕರಿಗೆ ತಾಂತ್ರಿಕ ತರಬೇತಿ, ಗರ್ಭಿಣಿ, ಸ್ತ್ರೀಯರಿಗೆ ಸಂಸ್ಥೆಯ ಸಂಜೀವಿನ ಆಸ್ಪತ್ರೆಯಲ್ಲಿ ಶುಶ್ರೂಷೆ ಮುಂತಾದ ಯೋಜನೆಗಳನ್ನು ೩೨ಕೋಟಿ ರೂ. ವೆಚ್ಚದಲ್ಲಿ ನಿರಂತರ ಮಾಡಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೆಎಸ್‌ಡಬ್ಲ್ಯೂ ಜಿಂದಾಲ್ ಸಂಸ್ಥೆಯ ಸಾರ್ವಜನಿಕ ಸಂರ್ಪಕಾಧಿಕಾರಿ ಅನಿಲ್ ಸಿಂಧಗಿ, ಕುಲಕರ್ಣಿ, ಆನಂದ್ ಮತ್ತಿತರರು ಹಾಜರಿದ್ದರು.
Please follow and like us:
error