ನಗರ ಆಶ್ರಯ ವಂತಿಕೆ ಹಣ ಭರಿಸಲು ಸೂಚನೆ.

ಕೊಪ್ಪಳ, ಜೂ.೨೯ – ಕೊಪ್ಪಳ ನಗರಸಭೆ ವ್ಯಾಪ್ತಿಯ ನಗರ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ವಂತಿಕೆ ಹಣವನ್ನು ಭರಿಸಲು ಜು. ೧೦ ರವರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ರಮೇಶ್ ಪಟ್ಟೇದ್ ತಿಳಿಸಿದ್ದಾರೆ. ನಗರ ಆಶ್ರಯ ಯೋಜನೆ ಅಡಿಯಲ್ಲಿ ೨೦೦೦ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದ ಫಲಾನುಭವಿಗಳು ರೂ.೩೦,೦೦೦ ವಂತಿಕೆ ಹಣವನ್ನು ಭರಿಸುವಂತೆ  ೧೫ ದಿನಗಳ ಕಾಲಾವಕಾಶ ನೀಡಿ ಈ ಹಿಂದೆ ಪ್ರಕಟಣೆ ನೀಡಲಾಗಿತ್ತು. ಆದರೆ ಈವರೆಗೂ ಕೆಲವೇ ಜನರು ಮಾತ್ರ ವಂತಿಕೆ ಹಣವನ್ನು ಭರಿಸಿದ್ದಾರೆ. ವಂತಿಕೆ ಹಣವನ್ನು ಭರಿಸದೇ ಉಳಿದುಕೊಂಡಿರುವ ಫಲಾನುಭವಿಗಳಿಗೆ ಈಗ ಮತ್ತೊಮ್ಮೆ ಕಾಲಾವಕಾಶವನ್ನು ನೀಡಲಾಗಿದ್ದು, ವಂತಿಗೆ ಹಣವನ್ನು   ಜುಲೈ.೧೦ ರೊಳಗಾಗಿ ಡಿ.ಡಿ ಮೂಲಕ ಭರಿಸಬಹುದಾಗಿದೆ. ನಿಗದಿಪಡಿಸಿದ ಕಾಲಾವಧಿಯ ಒಳಗಾಗಿ ವಂತಿಕೆ ಹಣವನ್ನು ಭರಿಸದೇ ಇದ್ದಲ್ಲಿ ಅಂತಹ ಫಲಾನುಭವಿಗಳ ಹೆಸರನ್ನು ರದ್ದುಪಡಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Please follow and like us:
error