You are here
Home > Koppal News > ಯುವಕರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ – ಶಾಂತಣ್ಣ ಮುದಗಲ್

ಯುವಕರಿಂದ ಕ್ರಾಂತಿಕಾರಿ ಬದಲಾವಣೆ ಸಾಧ್ಯ – ಶಾಂತಣ್ಣ ಮುದಗಲ್

ಕೊಪ್ಪಳ :- ೨೯-೦೪-೨೦೧೩ ರಂದು ಮದ್ಯಾಹ್ನ ೧ ಗಂಟೆಗೆ ಕೊಪ್ಪಳ ಲಾರಿ ಮಾಲೀಕರ ಸಂಘದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಮತ ಯಾಚನೆ ಹಾಗೂ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಾಂತಣ್ಣ ಮುದಗಲ್ ಮಾತನಾಡಿ ೨ ದಶಕಗಳಿಂದ ಕೊಪ್ಪಳ ಕ್ಷೇತ್ರದ ಅಭಿವೃದ್ದಿ ಜಿಡ್ಡು ಹಿಡದಿದೆ ಸಂಗಣ್ಣನವರು ಶಾಸಕರಾಗಿ ಕೇವಲ್ ತಮ್ಮ ಮತ್ತು ತಮ್ಮ ಸಂಬದಿಕರ ಅಭಿವೃದ್ದಿ ಮಾಡಿದ್ದಾರೆ ವಿನ:ಹ  ಕ್ಷೇತ್ರದ ಅಭಿವೃದ್ದಿಗೆ ಇವರಲ್ಲಿ ಕಿಂಚೆತ್ತು ಆಸಕ್ತಿ ಇಲ್ಲ. 
ಸ್ವತಹ ಆಫರೇಶನ್ ಕಮಲಕ್ಕೆ ತಾವೇ ಮಾರಾಟವಾಗಿ ಕಾಂಗ್ರೆಸ್ ಬಿ ಫಾರ್ಮ ಬಗ್ಗೆ ಇವರು ಮಾತನಾಡುವ ಹಾಸ್ಯಸ್ಪದ ತಮಗೆ ದ್ರಾಕ್ಷಿ ಹಣ್ಣು ಸಿಗಲಿಲ್ಲವೆಂದು ಕಾಂಗ್ರೆಸಿನ ದ್ರಾಕ್ಷಿ ಹುಳಿ ಎಂದು ಯಾವ ಸೀಮೆಯ ಮಾತು?  ಕಾಂಗ್ರೆಸ್ ಬಿ ಫಾರ್ಮಗೆ ಬೆಳಗಾವಿ ಅದಿವೇಶನದಿಂದ ಚುನಾವಣೆ ಘೋಷಣೆ ಆಗುವವರೆಗೂ ಕಾಂಗ್ರೆಸ್ ದೊಣಿಯಲ್ಲಿ ಪ್ರಯಾಣ ಮಾಡಲು ಪ್ರಯತ್ನಿಸಿದ್ದು ಕ್ಷೇತ್ರದ ಎಲ್ಲಾ ಜನತೆಯ ಮನೆ ಮಾತಾಗಿದೆ. ತಾವು ಸುಳ್ಳು ಅಭಿವೃದ್ದಿಯ ಮಂತ್ರ ಹೇಳುತ್ತಿದ್ದು ಜನರು ಇದನ್ನು ಮನವರಿಕೆ ಮಾಡಿದ್ದಾರೆ ನಿಮ್ಮಿಂದ ೨ ದಶಕಗಳಿಂದ ಆಗದ ಅಭಿವೃದ್ದಿ ಮುಂದೇನು ಆಗುವು ಆದ ಕಾರಣ ಕೊಪ್ಪಳ ವಿಧಾಸಭಾ ಕ್ಷೇತ್ರದ ಮತದಾರರು ಯುವ ನಾಯಕ ರಾಹುಲ ಗಾಂದಿಯ ಆಶ ಕಿರಣವಾದ ಕೆ ರಾಘವೇಂದ್ರ ಹಿಟ್ನಾಳ ಇವರನ್ನು ಪ್ರಚಂಡ  ಬಹುಮತದಿಂದ  ಆರಿಸಿ ತಂದು ಕ್ಷೇತ್ರದ ಅಭಿವೃದ್ದಿಗೆ ಸನ್ನದ್ದರಾಗಿ ಮಾಡಲಿದ್ದಾರೆಂದು ಕರೆ ನೀಡಿದರು. 
ಈ ಸಂದರ್ಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ರಾಘವೇಂದ್ರ ಹಿಟ್ನಾಳ, ಮರ್ಧಾನಪ್ಪ ಬಿಸರಳ್ಳಿ, ಜುಬೇರ್ ಹುಸೇನಿ, ಮುನಿರ ಸಿದಕಿ, ಖರಮುದ್ದಿನ ಖಿಲ್ಲೇದಾರ, ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ಪಾಷಾ ಸೂಡಿ, ಮಹೆಬೂಬಸಾಬ ದಿಡ್ಡಿಕೇರಾ, ಮುರಗೇಪ್ಪ ಬೇಲ್ಲದ್, ಖಾದ್ರಿಸಾಬ, ಬಾಬುಸಾಬ, ಸಿ.ಕೆ.ರಫಿ, ಇಸ್ಮಾಯಿಲ್‌ಸಾಬ, ರಾಮಣ್ಣ ಯಡಿಯಾಪೂರ, ರಾಮಣ್ಣ ಕಲ್ಲಾನವರ, ಭೀಮಸಿ,  ಇನ್ನೂ ಅನೇಕ ಲಾರಿ ಮಾಲೀಕರ ಸಂಘದ ಸದಸ್ಯರು ಪದಾಧಿಕಾರಿಗಳು ಪಕ್ಷದ ಧುರಿಣರು ಹಾಗೂ ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ. 

Leave a Reply

Top