fbpx

ಅತಿರುದ್ರಮಹಾಯಾಗ

ಪ್ರಸನ್ನ ಬೂದೇಶ್ವರ ಸಹಿತ ಬೂದೇಶ್ವರ ದೇವಸ್ಥಾನ ಬೂದಗುಂಪಾ, ಕೂಕನಪಳ್ಳಿ.
ಕೊಪ್ಪಳ: ಗಂಗಾವತಿ ಮತ್ತು ಕೊಪ್ಪಳ ಮದ್ಯದಲ್ಲಿ ಇರುವ ಬೂದುಗುಂಪಾ ಎನ್ನು ಗ್ರಾಮ ಅತ್ಯಂತ ಮಹಿಮೆ ಉಳ್ಳ ಪ್ರಸನ್ನ ಬೂದೇಶ್ವರ ಸಹಿತ ಬೂದೇಶ್ವರ ದೇವಸ್ಥಾನದಲ್ಲಿ ಶ್ರೀ ಬೂದೇಶ್ವರ ಸ್ವಾಮಿಯು ತನ್ನ ಇಚ್ಛೆಯಂತೆ ನೆಲೆನಿಂತು ಭಕ್ತರನ್ನು ಅನುಗ್ರಹ ಮಾಡುತ್ತಿದ್ದಾನೆ. ನಮಗೆ ನಾಡಿನಜ್ಯೋತಿಷ್ಯದ ಮುಖಾಂತರ ತನ್ನ ಇರುವಿಕೆಯನ್ನು ಮತ್ತು ತೆತ್ರಾಯುಗದ ಅವತಾರಿ ಶ್ರೀ ರಾಮ ಸಂಕಲ್ಪವನ್ನೂ ಮತ್ತು ಅದರ ಮುಖಾಂತರವೇ ಅವರಿಂದ ಪ್ರತಿಷ್ಠಾಪಿಸಲ್ಪಟ್ಟ ದಿವ್ಯಶಕ್ತಿ ಮಹಿಮೆಗಳ ಈ ಭಗವನ್ತನದ್ದಾಗಿದೆ.
ಈ ಮಹಿಮಾನ್ವಿತ ಭಗವಂತನ ಪ್ರತಿಷ್ಠೆ ನಡೆದು ೧೨ ವರ್ಷಗಳು ಕಳೆದಿರುವ ಈ ಸಂದರ್ಭದಲ್ಲಿ ಆಗಮ ಶಾಸ್ತ್ರದಲ್ಲಿ ಹೇಳಿರುವಂತೆ ಅಷ್ಟಬಂಧ ಪುನರುದ್ವರ್ತನ ಮತ್ತು ಕುಂಭಾಭಿಷೇಕ ನಡೆಸಲು ಭಗವಂತನ ಪ್ರೇರಣೆಯಿಂದ ಸಂಕಲ್ಪಮಾಡಲಾಗಿದೆ. ಇದೆ ಸಂದರ್ಭದಲ್ಲಿ ದಿನಾಂಕ: ೨೧.೦೧.೨೦೧೫ ರಿಂದ ೦೩.೦೨.೨೦೧೫ ರವರಗೆ ಭಗವಂತನ ಪೂರ್ಣಕಲಾ ಸಾನ್ನಿಧ್ಯ ಮತ್ತು ಲೀಕ ಕಲ್ಯಾಣಾರ್ಥವಾಗಿ ಅತಿರುದ್ರ ಸ್ವಾಹಾಕಾರ, ಚತುರ್ವೇದ ಸಹಿತಾಯಾಗ, ಶತಚಂಡೀಯಾಗ, ಅಯುತ ಮೋದಕ ಹೋಮವೇ  ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಗಳು ತಪೋನಿಷ್ಠರೂ ಜ್ಞಾನಿಗಳೂ ಆಗಿರುವ ಶ್ರೀ ಸೋಂದಾ ಸ್ವರ್ಣದಲ್ಲಿ ಮಠಾಧೀಶ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯ ಮಾರ್ಗದರ್ಶನದಲ್ಲಿ ನೆರವೆರದಿದೆ. 
ಈ ಕಾರ್ಯಕ್ರಮದ  ಸಾನ್ನಿಧ್ಯವನ್ನು ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಮದ್ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ವಹಿಸುವರು ಹಾಗೂ ಅಧ್ವರ್ಯ: ಶತಪ್ರತಿಷ್ಠಾಚಾರ್ಯ ಬೆಣ್ಣೆಗದ್ದೆ ನಾರಾಯಣಭಟ, ಬ್ರಹ್ಮತ್ವ: ವೇ.ಬ್ರ.ಶ್ರೀ ಅನಂತಕೃಷ್ಣ ಘನಪಾಠಿಗಳು ಅಮೈ, ಪುರೋಹಿತರು: ವೇ, ಮಹೇಶ್ವರ ಭಟ್ಟ ಜೋಶಿ, ಗಂಗಾವತಿ ಆಗಮಿಸುವರು ಮತ್ತು ಹೆಚ್,ಜಿ. ರಾಮುಲು ಮಾಜಿ ಸಂಸದರು ಮತ್ತು ಕುಟುಂಬದವರ ಆಯೋಜನೆಯಲ್ಲಿ ನೆರವೆರುವುದು.
ಕಾರ್ಯಕ್ರಮಗಳ ವಿವರ
ರವಿವಾರ, ದಿನಾಂಕ ೨೫-೦೧-೨೦೧೫
ಬೆಳಗ್ಗೆ ೦೭.೧೫ಕ್ಕೆ ಗೋಪೂಜೆ, ಗಂಗಾಪೂಜೆ ಮಂಟಪ ಪ್ರವೇಶ, ಗಣಪತಿ ಪೂಜಾ, ಕೃಛ್ರಾಚರಣೆ ಮಹಾಸಂಕಲ್ಪ, ಪುಣ್ಯಾಹ, ಋತ್ವಿಗ್ವರಣ ದೇವನಾಂದೀ, ಮಾತೃಕಾಪೂಜೆ, ಅಂಕುರಾರೋಪಣ, ಕೌತುಕಬಂಧನ, ಬಗರಹ್ಮಕೊರ್ಚಹವನ, ಕೊಶ್ಮಾಂಡಹವನ, ಮಹಾಗಣಪತಿಹೋಮ, ನವಗ್ರಶಾಂತಿ, ಪೂರ್ನಾಹುತಿ, ತಿರ್ಥಪ್ರಸಾದ.
ಸಂಜೆ ೪.೩೦ ಕ್ಕೆ ಶ್ರೀ ಶ್ರೀ ಮದ್ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಗಮನ ಹಾಗೂ ಭಕ್ತರಿಂದ ಭವ್ಯ ಸ್ವಾಗತಹಾಗೂ ಧೂಲಿಪಾದ ಪೂಜೆ.
ಸಂಜೆ ೦೫.೩೦ ಕ್ಕೆ ಸಂಕೋಚಾನುಜ್ಞೆ, ಶಕ್ತಿತ್ವ ಸಂಹಾರ ಘಟಪೂಜೆ, ತತ್ವಸಂಹಾರ, ಶಕ್ತಸಂಹಾರ ಹೋಮಾಯಾದಿಗಳು, ಸಂಹಾರಘಾಭಿಷೇಕ, ಬಂಧಲೇಪಾದಿಗಳು, ಸೃಷ್ಟಿಕಲಶಾಭಿಷೇಕ. ಬ್ರಹ್ಮಕಲಶಪೂಜೆ, ಕಲಾವಾಹನೆಮ, ನೀರಾಜನಾದಿಗಳು,
ಸೋಮುವಾರ, ದಿನಾಂಕ : ೨೬.೦೧.೨೦೧೫
(ಉಷಃಕಾಲ) ಬೆಳಗ್ಗೆ ೩.೦೦ ಘಂಟೆಯಿಂದ ಪುಣ್ಯಾಹ, ಕಶಾಧಿವಾಸಹೋಮ, ಕಲಾ-ತತ್ವ ಶಾಂತಿ, ಪ್ರಾಯಶ್ಚಿತ್ತಾದಿ ಹೋಮಗಳು, ಮೂಲಮಂತ್ರಹೋಮ ಪೂರ್ಣಾಹುತಿ ಇತ್ಯಾದಿಗಳು.
ಬೆಳಿಗ್ಗೆ ೬.೦೦ ಗಂಟೆಯಿಂದ ೭.೦೦ ರ ಒಳಗೆ ಸಲ್ಲುವ ಮಕರಲಗ್ನದ ಶುಭಮೂರ್ಹೂದಲ್ಲಿ ಶ್ರೀ ಶ್ರೀ ಮದ್ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಬ್ರಹ್ಮಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ಸರ್ವಾಲಂಕಾರ ಮಹಾಪೂಜೆ, ಮಹಾನಿರೀಕ್ಷೆ, ರಾಷ್ಟ್ರಾಶೀರ್ವಾದ, ಮಂತ್ರಾಕ್ಷತೆ.
ಅತಿರುದ್ರ
ಗುರುವಾರ ದಿನಾಂಕ : ೨೯.೦೧.೨೦೧೫
ಬೆಳಿಗ್ಗೆ ೧೧.೩೫ ಗಂ. ಗೋ-ಗಜಾದಿಪೂಜೆ, ಮಹಾಸಂಕಲ್ಪ, ಚತುರ್ವೇದ ಸಂಹಿತಾಸ್ವಾಹಾಕಾರ, ಪೂರ್ವಾಂಗ ಸಹಿತ ಅತಿರುದ್ರಸ್ವಾಹಾಕಾರ ಶತಚಂಡೀಯಾಗಾಂಗ ಪಾರಾಯಣಗಳ ಆರಂಭ, ೧೦,೦೦೦ ಮೊದಕ ಮಹಾಗಣಪತಿಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ.
ಪ್ರತಿದಿನ ಸಂಜೆ ಪ್ರಾಕಾರೋತ್ಸವ
ಸಾಯಂಕಾಲ: ಕ್ರಮಾರ್ಚನೆ, ರಾಜೋಪಚಾರಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ.
ಶುಕ್ರವಾರ, ದಿನಾಂಕ : ೩೦.೦೧.೨೦೧೫ 
ಬೆಳಿಗ್ಗೆ ೭.೦೦ ರಿಂದ : ಪೂಜಜಪಾದಿಗಳು, ಅತಿರುದ್ದರಸ್ವಾಹಾಕಾರ, ಸಂಹಿತಾಯಾಗ, ಶತಚಂಡೀಯಾಗಗಳ ಮುಂದುವರಿಕೆ ನವಗ್ರಹಶಾಂತಿಹೋಮ, ಪೂರ್ಣಾಹುತಿ, ಮಂಗಳಾರತಿ, ತೀರ್ಥಪ್ರಸಾದ ವಿತರಣೆ, ಸಾಯಂಕಾಲ ಕ್ರಮಾರ್ಚನೆ ರಾಜೋಪಚಾರಾಧಿಗಳು.
ಶನಿವಾರ: ದಿ: ೩೧.೦೧.೨೦೧೫
ಬೆಳಿಗೆ ೭. ರಿಂದ ಪೂಜಾ-ಜಪ ಹೋಮಗಳ ಮುಂದುವರಿಕೆ, ಸುಬ್ರಹ್ಮಣ್ಯ ಹೋಮ, ಪೂರ್ಣಾಹುತಿ, ತಿರ್ಥಪ್ರಸಾದ, ಸಾಯಂಕಾಲ ಕ್ರಮಾರ್ಚನೆ, ರಾಜೋಪಚಾರಾಧಿಗಳು
ರವಿವಾರ ದಿ: ೦೧.೦೨.೨೦೧೫ ಬೆಳಿಗ್ಗೆ ೭.೦೦ ಜಾ-ಜಪ ಹೋಮಗಳ ಮುಂದುವರಿಕೆ  ತಿರ್ಥ ಪ್ರಸಾದ ವಿತರಣೆ.
ಸೋಮುವಾರ ದಿನಾಂಕ: ೦೨.೦೨.೨೦೧೫
ಬೆಳಿಗ್ಗೆ ೭.೦೦ ರಿಂದ ೧೦೮ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರ ತಿಥ ಮಹಾಸ್ವಾಮಿಗಳು, ಪೀಠಾಧಿಪತಿಗಳು, ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲಸಂಸ್ಥಾನ ಶ್ರೀ ರಾಘವೇಂಧ್ರಸ್ವಾಮಿಗಳವರ ಮಠ, ಮಂತ್ರಾಲಯ ಇವರಿಂದ ಶ್ರೀಮೂಲ ರಾಮದೇವರ ಹಾಗೂ ಸಂಸ್ಥಾನ ಮಹಾಪೂಜೆ ಮತ್ತು ಶ್ರೀರಾಮತಾರಕ ಹೋಮ, ಸಾಯಂಕಾಲ- ಕ್ರಮಾರ್ಚನೆ, ರಾಜೋಪಚಾರಾದಿಗಳು.
Please follow and like us:
error

Leave a Reply

error: Content is protected !!