ಮಡೇಸ್ನಾನ ನಿಷೇಧಿಸಬೇಕು

ಮಡೇಸ್ನಾನ ನಿಷೇಧಿಸಬೇಕು. ಅದೊಂದು ಸಾಮಾಜಿಕ ಅನಿಷ್ಟವಾಗಿದೆ. ಯಾರೂ ಅದನ್ನೂ ಸಮರ್ಥಿಸಿಕೊಳ್ಳಲಾರರು. ಆದರೆ ಕೆಲವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾರೆ ಎಂದು ಗದುಗಿನ ಶ್ರೀತೋಂಟದಾರ್ಯ ಸಿದ್ದಲಿಂಗ ಸ್ವಾಮಿಜಿ ಒತ್ತಾಯಿಸಿದರು. ಅವರು ನಗರದ ಸಾಹಿತ್ಯ ಭವನದಲ್ಲಿ  ಜಮಾತೆ ಇಸ್ಲಾಂ ಹಿಂದ್  ಹಮ್ಮಿಕೊಂಡಿದ್ದ ಕೆಡುಕು ಮುಕ್ತ ಸಮಾಜದೆಡೆಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾಜ ಇಂದು ಇಂತಹ ಹಲವಾರು ಕೆಡಕುಗಳಿಂದ ನರಳಾಡುತ್ತಿದೆ. ನಮ್ಮನ್ನಾಳುವವರಿಗೆ ನೈತಿಕತೆ ಎನ್ನುವುದೇ ಇಲ್ಲವಾಗಿದೆ. ಭ್ರಷ್ಟಾಚಾರ ಎನ್ನುವುದು ಮಿತಿ ಮೀರಿದೆ. ಮನುಷ್ಯ ಆಸೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. ಭ್ರಷ್ಟಾಚಾರದ ವಿರುದ್ದ ಹೋರಾಟ ಮಾಡುತ್ತಿರುವ ಅಣ್ಣಾಹಜಾರೆಯನ್ನು ಬೆಂಬಲಿಸೋಣ ಎಂದು ಹೇಳಿದರು. 
    ಅಲ್ಲಮಪ್ರಭು ಬೆಟ್ಟದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಕ್ಬರ ಅಲಿ  ಉಪನ್ಯಾಸ ನೀಡಿದರೆ. ಕೆ.ಯು.ಶೇಕ್ ಸ್ವಾಗತ ಮತ್ತು ಮಹಮ್ಮದ್ ಅಬ್ದುಲ್ ಶೆಕೂರ್ ವಂದಿಸಿದರು.
Please follow and like us:
error