ಸವಿತಾ ಸಮಾಜ ಪ್ರವರ್ಗ ೧ ಕ್ಕೆ ಸೇರಿಸಲು ಒತ್ತಾಯ
ಗಂಗಾವತಿ: ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸೇರಿದಂತೆ ರಾಜಕೀಯವಾಗಿ ಹಿಂದುಳಿದ ಸಮಾಜವೆನಿಸಿದ ಸವಿತಾ ಸಮಾಜವನ್ನು ಪ್ರವರ್ಗ ೧ ಕ್ಕೆ ಸೇರ್ಪಡೆಗೊಳಿಸಲು ಸರ್ಕಾರ ಮುಂದಾಗಬೇಕೆಂದು ರಾಯಚೂರು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗಲದಿನ್ನಿ ಶ್ರೀನಿವಾಸ ಒತ್ತಾಯಿಸಿದರು.

ಅವರು ಇಲ್ಲಿನ ಸಂತೆ ಮಾರುಕಟ್ಟೆಯ ಸವಿತಾ ಸಮಾಜದವರ ಶ್ರೀಶಂಕುಚಕ್ರ ಆಂಜನೇಯ ಸ್ವಾಮಿ ದೇವಸ್ಥಾನದ ವಿಶೇಷ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಬಳಿಕ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಸವಿತಾ ಸಮಾಜ ಪ್ರ ವರ್ಗ-೨ ಹೊಂದಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಮಾಜದ ಪರಿವಿಕ್ಷಣೆ ನಡೆಸಿ ಪ್ರವರ್ಗ ೧ ಕ್ಕೆ ತರಲು ಭರವಸೆ ನೀಡಿದ್ದು ಪ್ರಸ್ತುತ ನೂತನ ಮುಖ್ಯಮಂತ್ರಿ ಸದಾನಂದಗೌಡರು ಪ್ರವರ್ಗ ೧ಕ್ಕೆ ಸೇರ್ಪಡೆಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ತಿಳಿಸಿದರು.

ಸಮಾಜ ಬಾಂಧವರು ವೃತ್ತಿ ಬಾಂಧವ್ಯದೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಲು ಮುಂದಾಗಬೇಕು, ಮಹಿಳೆಯರು ಆರ್ಥಿಕವಾಗಿ ಸದೃಡವಾಗಲು ಸ್ವ ಸಹಾಯ ಗುಂಪುಗಳನ್ನು ರಚಿಸಿ ಕೊಳ್ಳಬೇಕು. ದೇವರಾಜ ಅರಸ ನಿಗಮದಿಂದ ದೊರೆಯುವ ಸಾಲ ಸೌಲಭ್ಯವನ್ನು ಸಮರ್ಪಕವಾಗಿ ಪಡೆದುಕೊಂಡು ಸಾಲ ಮರು ಪಾವತಿಗೆ ಮುಂದಾಗಬೇಕು, ಸಮಾಜವನ್ನು ಗ್ರಾಮೀಣ ಮಟ್ಟದಿಂದ ಎಲ್ಲಾ ಹಂತದವರೆಗೆ ಸಂಘಟಿಸಿ ಅಗತ್ಯವಿರುವ ಸೌಲಭ್ಯಕ್ಕೆ ಸಂಘಟನಾತ್ಮಕ ಹೋರಾಟಕ್ಕೆ ಮುಂದಾಗಬೇಕೆಂದು ತಿಳಿಸಿದರು. ಬೆಳಗಾವಿ ಭಾಗದ ಕಾರ್ಯದರ್ಶಿ ವೇಲುಕೂರ ವೆಂಕಟೇಶ ಉಪಸ್ಥಿತರಿದ್ದರು.

ಹೆಚ್೮-ಜಿವಿಟಿ೦೧ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸೇರಿದಂತೆ ರಾಜಕೀಯವಾಗಿ ಹಿಂದುಳಿದ ಸಮಾಜವೆನಿಸಿದ ಸವಿತಾ ಸಮಾಜವನ್ನು ಪ್ರವರ್ಗ ೧ ಕ್ಕೆ ಸೇರ್ಪಡೆಗೊಳಿಸಲು ಸರ್ಕಾರ ಮುಂದಾಗಬೇಕೆಂದು ರಾಯಚೂರು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ನಾಗಲದಿನ್ನಿ ಶ್ರೀನಿವಾಸ ಒತ್ತಾಯಿಸಿದರು.

ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸುವೆ- ಇ.ಮಾರೇಶ್

ಗಂಗಾವತಿ-೮, ಹಿಂದುಳಿದ ವರ್ಗ ವೆನಿಸಿದ ಸವಿತಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಕೊಪ್ಪಳ ಜಿಲ್ಲಾ ಸವಿತಾ ಸಮಾಜದ ನೂತನ ಅಧ್ಯಕ್ಷ ಇ.ಮಾರೇಶ್ ಹೇಳಿದರು.

ಅವರು ಇಲ್ಲಿನ ಸಂತೆ ಮಾರುಕಟ್ಟೆ ಬಳಿ ಇರುವ ಸವಿತಾ ಸಮಾಜದ ಶ್ರೀ ಶಂಕು ಚಕ್ರ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ರಾಯಚೂರು ಜಿಲ್ಲಾ ಅಧ್ಯಕ್ಷ ನಾಗಲದಿನ್ನಿ ಶ್ರೀನಿವಾಸ ಹಾಗೂ ಬೆಳಗಾವಿ ವಿಭಾಗದ ಪ್ರಧಾನ ಕಾರ್ಯದರ್ಶಿ ವೇಲ್ಕುರು ವೆಂಕಟೇಶ್ ನೇತೃತ್ವದಲ್ಲಿ ಜರುಗಿದ ಜಿಲ್ಲಾದ್ಯಕ್ಷರ ಆಯ್ಕೆಯಲ್ಲಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡು ಮಾತನಾಡಿದರು.

ಸಮಾಜದ ವಿವಿಧ ಕ್ಷೇತ್ರದಲ್ಲಿ ಹಿಂದುಳಿದ ಸವಿತಾ ಸಮಾಜವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಸಂಘಟಿಸಿ ಸರ್ಕಾರದಿಂದ ದೊರೆಯುವ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನಾತ್ಮಕ ಹೋರಾಟ ನಡೆಸಲಾಗುವುದು. ಸಮಾಜದ ಎಲ್ಲಾ ಮಕ್ಕಳು ಶಿಕ್ಷಣ ಸೌಲಭ್ಯ ಪಡೆದುಕೊಳ್ಳಲು ಜನ ಜಾಗೃತಿ ನಡೆಸಲಾಗುವುದು.

ಮಹಿಳೆಯರು ಸ್ವಾವಲಂಬಿಗಳಾಗಿ ಜೀವಿಸಲು ಸ್ವ ಸಹಾಯ ಗುಂಪುಗಳ ರಚನೆ, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೇವರಾಜ ಅರಸ ನಿಗಮಗಳಿಂದ ದೊರೆಯುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ರಾಯಚೂರು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ನಾಗಲದಿನ್ನಿ ಶ್ರೀನಿವಾಸ ಮಾತನಾಡಿ, ಸವಿತಾ ಸಮಾಜವನ್ನು ಸಂಘಟಿಸಿ ಪ್ರ.ವರ್ಗ ೧ಕ್ಕೆ ಬರಲು ಸರ್ಕಾರದ ಗಮನ ಸೆಳೆಯಲು ಮುಂದಾಗಬೇಕು. ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆದುಕೊಂಡು ಸಮಾಜವನ್ನು ಎಲ್ಲಾ ರಂಗಗಳಲ್ಲಿ ಮುಂದೆ ಬರಲು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕು ಎಂದು ತಿಳಸಿದರು. ನೂತನ ಜಿಲ್ಲಾ ಅಧ್ಯಕ್ಷರ ಆಯ್ಕೆ ಸಭೆಯಲ್ಲಿ ಹುಲಿಗಿ ಗ್ರಾಮದ ಚಂದ್ರಶೇಖರ ಸಂಗಾಪುರ, ಶ್ರೀನಿವಾಸ ಸಿಂಗನಾಳ ಹುಸೇನಪ್ಪ, ಹೇರೂರು ಹನುಮಂತಪ್ಪ, ಕಾರಟಗಿ ರಾಮಾಂಜನೇಯಲು, ಹೊಸ್ಕೇರಾ ಕ್ಯಾಂಪಿನ ರಾಮಬಾಬು ಸೇರಿದಂತೆ ಸ್ಥಳೀಯ ಮುಖಂಡರಾದ ಪಿ.ಜ್ಞಾನೇಶ್ವರ, ಎನ್.ಬಾಲರಾಜ್, ರಾಮಚಂದ್ರಪ್ಪ, ಎನ್.ನರಸಿಂಹಲು, ಇ.ತಾಯಪ್ಪ, ಹೆಚ್.ಗೋಪಾಲ, ಮತ್ತಿತರರು ಉಪಸ್ಥಿತರಿದ್ದರು.

ಹೆಚ್೮-ಜಿವಿಟಿ೦೨ ಹಿಂದುಳಿದ ವರ್ಗ ವೆನಿಸಿದ ಸವಿತಾ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಹಿರಿಯರ ಮಾರ್ಗದರ್ಶನ ಪಡೆದು ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಕೊಪ್ಪಳ ಜಿಲ್ಲಾ ಸವಿತಾ ಸಮಾಜದ ನೂತನ ಅಧ್ಯಕ್ಷ ಇ.ಮಾರೇಶ್ ಹೇಳಿದರು.

Leave a Reply