ಅಕ್ಟೋಬರ್ ೧೭ ರಂದು ಭೂ ಸ್ವಾಧೀನ ವಿರೋಧಿ ಸಮಾವೇಶ

ಕೃಷಿ ವಲಯವನ್ನು ಕಾರ್ಪೊರೇಟ್ ಹಿಡಿತಕ್ಕೆ ಒಪ್ಪಿಸಲು ರಾಜ್ಯ ಸರಕಾರ ತೀರ್ಮಾನಿಸಿದಂತಿದೆ … ಬರುವ ನವೆಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ ರಾಜ್ಯದ ರೈತರಿಂದ ಕಿತ್ತುಕೊಂಡ ಭೂಮಿಯನ್ನು ಅವರ ಸ್ವಾಧೀನಕ್ಕೆ ಕೊಡಲು ಸಿದ್ಧವಾಗಿ ನಿಂತಿದೆ . ಕೃಷಿ ಆಧರಿತವೆಂದು ಹೇಳಲಾಗುವ ಈ ಕಂಪನಿಗಳು ಯಾವವು ? ಅವು ಏನನ್ನು ಉತ್ಪಾದಿಸುತ್ತವೆ ? ಅವೆಲ್ಲ ರಾಜ್ಯದ ಕೃಷಿಗೆ ಪೂರಕವಾ ?ಅವುಗಳನ್ನು ಎಲ್ಲಿ ಸ್ಥಾಪಿಸಲಾಗುತ್ತದೆ ? ಅವುಗಳ ಸ್ಥಾಪನೆಯಿಂದ ಆಯಾ ಪ್ರದೇಶಗಳ ನೈಸರ್ಗಿಕ , ಸಾಮಾಜಿಕ ಪರಿಸರದ ಮೇಲಾಗುವ ಪರಿಣಾಮಗಳೇನು ? ಎಂಬ ಈ ವಿಚಾರಗಳನ್ನು ರಾಜ್ಯದ ರೈತರು , ಜನಗಳ ಮುಂದಿಡದೆ , ಯಾವ ಚರ್ಚೆಯನ್ನು ನೆಡಿಸದೆ , ತಜ್ಞರಅಭಿಪ್ರಾಯ ಕೇಳದೆ ಕಾರ್ಪೊರೇಟ್ ವಲಯದ ತಾಳಕ್ಕೆ ಕುಣಿಯಲು ತುದಿಗಾಲಲ್ಲಿ ನಿಂತ ಬಿ ಜೆ ಪಿ ಸರಕಾರ ರೈತರ ಕೃಷಿ ಯೊಗ್ಗೆ ಭೂಮಿಯನ್ನು ಕಿತ್ತುಕೊಳ್ಳಲು ಭೂಬ್ಯಾಂಕ ಅಡಿಯಲ್ಲಿ ಒಂದು ಲಕ್ಷ ಹತ್ತೊಂಬತ್ತು ಸಾವಿರ ಏಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಹೊರಟಿದೆ .. ಹಾಗೇನಾದ್ರೂ ಆದ್ರೆ ಭೂಮಿ ಕಳಕೊಂಡ ರೈತರು ಬೀದಿಪಾಲಾಗುವುದು ನಿಶ್ಚಿತ .ಸರಕಾರದ ಈ ದೋರಣೆ ತುಂಬಾ ಅಪಾಯಕಾರಿ .. ಸರಕಾರದ ನೀತಿಯನ್ನು ವಿರೋಧಿಸಿ ಗದಗ ಜಿಲ್ಲೆಯಲ್ಲಿ ದ ಕೊರಿಯಾ ಮೂಲದ ಸ್ಥಳೀಯ ಸಂಪನ್ಮೂಲಗಳನ್ನು ದೋಚುವ ದೈತ್ಯ ಲೂಟಿಕೋರ ಕಂಪನಿಯಾದ ಪೋಸ್ಕೊದ ಸ್ಥಾಪನೆ ವಿರೋಧಿಸಿ ಹೋರಾಟ ನಡೆಸಿದ ಭೂ ಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ ಅಕ್ಟೋಬರ ೧೭ ರಂದು ರಾಜ್ಯ ಮಟ್ಟದ ಭೂ ಸ್ವಾಧೀನ ಸಮಾವೇಶವನ್ನು ಗದಗ ನಗರದಲ್ಲಿ ನಡೆಸಲು ಹೊರಟಿದೆ ಭೂ ಸ್ವಾಧೀನಕ್ಕೆ ಒಳಗಾಗುವ ಜಿಲ್ಲೆಗಳ ರೈತರು , ರಾಜ್ಯದ ನೆಲ ಜಲಗಳ ಬಗ್ಗೆ ಕಾಳಜಿ ಇರುವವರೆಲ್ಲ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಸಮಾವೇಶವನ್ನು ನಾಡಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್ . ಎಸ್ ದೊರೆಸ್ವಾಮಿಯವರು ಉದ್ಘಾಟನೆ ಮಾಡುವರು. ಡಾ ತೋಂಟದ ಸಿದ್ದಲಿಂಗ ಸ್ವಾಮಿಗಳು ಅಧ್ಯಕ್ಷತೆ ವಹಿಸುವರು . ಶುಭಾಶಯದ ಮಾತುಗಳನ್ನು ಡಾ . ಅನ್ನದಾನೇಶ್ವರ ಸ್ವಾಮಿಗಳು ಆಡಲಿದ್ದಾರೆ .. ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ , ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷರಾದ ಚಂದ್ರಶೇಖರ ಕೋಡಿಹಳ್ಳಿ , ಉತ್ತರ ಕರ್ನಾಟಕದ ರೈತ ನಾಯಕರಾದ ಬಾಬಾಗೌಡ ಪಾಟೀಲ ,ಪ್ರಾಂತ ರೈತ ಸಂಘದ ನಾಯಕರಾದ ಮಾರುತಿ ಮಾನ್ಪಡೆ , ಮಾತನಾಡುವರು .ಪತ್ರಕರ್ತರಾದ ಸನತಕುಮಾರ ಬೆಳಗಲಿ , ರುದ್ರಮುನಿ , ಶೌಕತ ಅಲಿ ಆಲೂರ , ಮೊದಲಾದವರು ಉಪಸ್ಥಿರಿರುವರು .. ಡಾ ಸಿದ್ಧನಗೌಡ ಪಾಟೀಲ ಪ್ರಾಸ್ತಾವಿಕ ಮಾತು ಆಡುವರು ಮದ್ಯಾಹ್ನ ೩ ಗಂಟೆಗೆ ನಡೆಯುವ ರೈತ ಮತ್ತು ರಾಜ್ಯದ ಹಿತಾಸಕ್ತಿಯ ವಿಚಾರಗೊಷ್ಟಿಯ ಅಧ್ಯಕ್ಷತೆಯನ್ನು ಹಿರಿಯ ಚಿಂತಕ ಡಾ . ಜಿ ರಾಮಕೃಷ್ಣ ವಹಿಸುವರು ..ಕೇಂದ್ರ ಭೂಸ್ವಾಧೀನ ಮಸೂದೆ ಮತ್ತು ರೈತರ ಪ್ರಶ್ನೆಗಳ ಕುರಿತು ಕೆ ಪಿ ಸುರೇಶ , ಕೃಷಿ ವಲಯ ಮತ್ತು ಜಾಗತಿಕ ಬಂಡವಾಳದ ಹರವಿನ ನೆಲೆಗಳು ಕುರಿತು ಶಿವಸುಂದರ , ಪೋಸ್ಕೊ ಹೋರಾಟ ಮತ್ತು ಕರ್ನಾಟಕದ ಜನ ಚಳುವಳಿಗಳು ಕುರಿತು ಡಾ . ರಹಮತ ತರೀಕೆರೆ , ಗದಗ ಜಿಲ್ಲೆಯ ವಾಸ್ತವ ಮತ್ತು ಆರ್ಥಿಕಾಭಿವೃದ್ಧಿಯ ನೆಲೆಗಳು ಕುರಿತು ಡಾ . ಟಿ ಆರ್ ಚಂದ್ರಶೇಖರ ಅವರು ಮಾತನಾಡುವರು ಈ ಗೋಷ್ಟಿಯ ಪ್ರಾಸ್ತಾವಿಕ ಮಾತುಗಳನ್ನು ಬಿ ಎಸ್ ಸೊಪ್ಪಿನ ಆಡುವರು ಬಿ . ಪೀರ್ ಬಾಷಾ ಗೋಷ್ಟಿಯ ಸಮನ್ವಯ ಮಾಡುವರು ಈ ಸಮಾವೇಶವು ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಮುಂಜಾನೆ ೧೧ ಗಂಟೆಗೆ ಆರಂಭಗೊಳ್ಳುವುದು ..

ಸಮಾವೇಶದ ಹಿನ್ನೆಲೆಯಲ್ಲಿ ಅಖಿಲ ಭಾರತ ಕಿಶಾನ ಸಭಾ , ಪ್ರಾಂತ ರೈತ ಸಂಘ , ರಾಜ್ಯ ರೈತ ಸಂಘ , ದಲಿತ ಸಂಘರ್ಷ ಸಮಿತಿಯ ವಿವಿದ ಸಂಘಟನೆಗಳು ,ಲಡಾಯಿ ಪ್ರಕಾಶನ ಬಳಗ , ಭೂಮಿ ಬೇಕು – ರೈತ ಆಂದೋಲನ ಸಮಿತಿ , ಪ್ರಗತಿಶೀಲ ಲಿಂಗಾಯತ ಯುವಕ ಸಂಘ , ಕಾರ್ಮಿಕ ಸಂಘಟನೆಗಳು ಸಹಭಾಗಿ ಸಂಘಟನೆಗಳಾಗಿ , ಕಾರ್ಯನಿರ್ವಹಿಸಲಿವೆ ..ಆಸಕ್ತರು ಸಮಾವೇಶದಲ್ಲಿ ಪಾಲಗೊಳ್ಳಲು ಭೂಸ್ವಾಧೀನ ವಿರೋಧಿ ಸಂಗ್ರಾಮ ಸಮಿತಿ ಸಂಚಾಲಕರಾದ ಬಸವರಾಜ ಸೂಳಿಭಾವಿ , ಡಾ . ಸಿದ್ಧನಗೌಡ ಪಾಟೀಲ , ವೈ ಎನ್ ಗೌಡರ , ಬಿ ಎಸ್ ಸೊಪ್ಪಿನ , ಲಕ್ಷ್ಮಣ ದೇಸಾಯಿ , ಹಣಮಂತಪ್ಪ ಗಡ್ಡದ , ಚನ್ನಪ್ಪ ಬೂದಿಹಾಳ , ಬಸವರಾಜ ಚನ್ನಲ್ಲಿ , ಕೋರಿದ್ದಾರೆ .
Please follow and like us:
error

Related posts

Leave a Comment