ಕೊಪ್ಪಳ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖಾಜಾವಲಿ ಬನ್ನಿಕೊಪ್ಪ ಅವಿರೋಧ ಆಯ್ಕೆ.

ಕೊಪ್ಪಳ,೩೦- ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖಾಜಾವಲಿ ಬನ್ನಿಕೊಪ್ಪ ಅವಿರೋಧವಾಗಿ ಆಯ್ಕೆಯಾದರು.
    ಇಂದು ಬೆಳಿಗ್ಗೆ ನಗರ ಸಭೆಯಲ್ಲಿ ಸ್ಥಾಯಿ ಸಮಿತಿ ಸ್ಥಾನಕ್ಕೆ ನಡೆದ ಚುನಾವಣೆಗೆ ಜೆಡಿಎಸ್ ಖಾಜಾವಲಿ ಬನ್ನಿಕೊಪ್ಪ ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣೆ ಪ್ರಕ್ರಿಯೆ ನಡೆಸಿದ ಪೌರಾಯುಕ್ತ ರಮೇಶ ಪಟ್ಟೇದಾರ್ ಯಾರು ನಾಮಪತ್ರ ಸಲ್ಲಿಸದಿದ್ದರಿಂದ ನಂತರ ಜೆಡಿಎಸ್‌ನ ಖಾಜಾವಲಿ ಬನ್ನಿಕೊಪ್ಪ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಘೋಷಿಸಿದರು.
    ನಗರಸಭೆ ಅಧ್ಯಕ್ಷೆ ಶ್ರೀಮತಿ ಬಸವ್ವ ರಾಮಣ್ಣ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಮಾಜಿ ಅಧ್ಯಕ್ಷ-ಹಾಲಿ ಸದಸ್ಯ ಅಮ್ಜದ್ ಪಟೇಲ್, ಮುಖಂಡರಾದ ರಾಮಣ್ಣ ಹಳ್ಳಿಗುಡಿ, ಮಲ್ಲಪ್ಪ ಎಸ್, ಸಲೀಮ್ ಹುಸೇನಿ, ಮೀನಾಕ್ಷಿ ಬನ್ನಿಕೊಪ್ಪ, ಶರಣಪ್ಪ ಚಂದನಕಟ್ಟಿ, ಮೌಲಾಹುಸೇನ್ ಜಮೇದಾರ, ಮಹೇಶ ಭಜಂತ್ರಿ, ಹಟಗಾರ ಪೇಟೆ ಪಂಚ ಕಮೀಟಿ ಅಧ್ಯಕ್ಷ ಎಸ್. ರಹೇಮತ್ ಹುಸೇನಿ, ಅನಿಕೇತ ಅಗಡಿ, ಸುವರ್ಣ ಬಸವರಾಜ ನೀರಲಗಿ, ನಸೀಮಾಬೇಗಂ. ಬಸವರಾಜ, ವಾಹೀದ್, ಬುಡನ್‌ಸಾಬ (ಕಾಲೆ ಬುಡ್ಡೆ) ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply