ಮೇ ಮಾಸದ ಚಳುವಳಿಯ ಸಮಾರೋಪದ ರ‍್ಯಾಲಿ

ಎ.ಐ.ಸಿ.ಸಿ.ಟಿ.ಯು. ಸಂಘಟನೆ ಮೇ ಮಾಸ ಚಳುವಳಿಯ ಅಂಗವಾಗಿ ಮೇ ೧ ರಂದು ಫ್ರಿಡಂ ಪಾರ್ಕ್‌ನಿಂದ ಪ್ರಾರಂಬವಾದ ಚಳುವಳಿ ರಾಜ್ಯಾದ್ಯಾಂತ ಹೋರಾಟಗಳನ್ನು ನಡೆಸಿ ಸಮಾರೋಪವಾಗಿ ದಿನಾಂಕ ೩೧-೦೫-೨೦೧೪ ರಂದು ಗಂಗಾವತಿಯಲ್ಲಿ ಬೀದಿವ್ಯಾಪಾರಿಗಳ ಮತ್ತು ಸ್ಲಮ್ ಜನರ ಹಕ್ಕುಗಳಿಗಾಗಿ ಗಾಂಧಿವೃತ್ತದಿಂದ ನಗರಸಭೆವರೆಗೆ ರ‍್ಯಾಲಿ ನಡೆಸಿ, ನಗರಸಭೆಯ ಪೌರಾಯುಕ್ತರಿಗೆ ಮನವಿಗಳನ್ನು ಸಲ್ಲಿಸಿ ಮುಕ್ತಾಯಗೊಳಿಸಲಾಗಿದೆ ಎಂದು ಭಾರದ್ವಾಜ್  ತಿಳಿಸಿದ್ದಾರೆ.  

ದಿನಾಂಕ ೩೧-೦೫-೨೦೧೪ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ಗಾಂಧಿವೃತ್ತದಿಂದ ರ‍್ಯಾಲಿ ಪ್ರಾರಂಭವಾಗಿ ನಗರಸಭೆ ಕಾರ್ಯಾಲಯದ ಹತ್ತಿರ ನಿರ್ಮಿಸಿದ ಸಭಾಂಗಣದಲ್ಲಿ ಸಭೆ ಸೇರಿತು. ಈ ಸಭೆಯನ್ನು ಉದ್ದೇಶಿಸಿ ಬೆಂಗಳೂರಿನ ಬೀದಿವ್ಯಾಪಾರಿಗಳ ಹೋರಾಟಗಳ ಸಂಚಾಲಕ ವಿನಯ್ ಮಾತನಾಡಿ ಬೀದಿವ್ಯಾಪಾರಿಗಳ ರಕ್ಷಣೆ ಕಾಯ್ದೆ ೨೦೧೪ ರ ಬಗ್ಗೆ ಬೀದಿವ್ಯಾಪಾರಿಗಳಿಗೆ ತಿಳಿಸಿದರು. ಕಾ|| ಶಂಕರ್, ರಾಷ್ಟ್ರೀಯ ಉಪಾಧ್ಯಕ್ಷರು ಎ.ಐ.ಸಿ.ಸಿ.ಟಿ.ಯು. ಮಾತನಾಡಿ ಜಾಗತೀಕರಣದಿಂದ ಎಫ್.ಡಿ.ಐ.ಗಳು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾಡುತ್ತಿರುವ ದಾಳಿಯಿಂದ ಬೀದಿವ್ಯಾಪಾರಿಗಳು ಸಂಘಟಿತರಾಗಿ ಮಾಲ್‌ಗಳ ವಿರುದ್ಧ ಹೋರಾಟ ಮಾಡಬೇಕು, ಗಂಗಾವತಿಯಂತಹ ನಗರಗಳಲ್ಲಿ ಯಾವುದೇ ಬಹುರಾಷ್ಟ್ರೀಯ ಕಂಪನಿಗಳು ಬರದಂತೆ ಹೋರಾಟ ಮಾಡಬೇಕಾದ ಕಾಲ ಬಂದಿದೆ ಎಂದಿದ್ದಾರೆ. ಭಾರದ್ವಾಜ್ ಮಾತನಾಡುತ್ತಾ ಗಂಗಾವತಿಯಲ್ಲಿರುವ ಎಲ್ಲಾ ಬೀದಿವ್ಯಾಪಾರಿಗಳು ಸಂಘಟಿತರಾಗದಿದ್ದಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವುದು ಕಷ್ಟವಾಗುತ್ತದೆ ಎಂದಿದ್ದಾರೆ.
           ಈ ಸಭೆಯಲ್ಲಿ ಎ.ಐ.ಸಿ.ಸಿ.ಟಿ.ಯು. ಜಿಲ್ಲಾಧ್ಯಕ್ಷ  ಎಂ.ವಿರುಪಾಕ್ಷಪ್ಪ, ಸಿ.ಪಿ.ಐ.ಎಂ.ಎಲ್. ಜಿಲ್ಲಾ ಕಾರ್ಯದರ್ಶಿ ಬಸವರಾಜ ಸುಳೆಕಲ್, ಅಯ್ಯಾಲಾ ಜಿಲ್ಲಾಧ್ಯಕ್ಷ ಯೇಸಪ್ಪ, ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷಿಣಿ ಶಾಂತಕುಮಾರಿ, ಪ್ರಗತಿಪರ ಬೀದಿವ್ಯಾಪಾರಿಗಳ ತಾಲೂಕ ಅಧ್ಯಕ್ಷ ಖಾದರಭಾಷಾ, ಎ.ಐ.ಸಿ.ಸಿ.ಟಿ.ಯು. ತಾಲೂಕ ಅಧ್ಯಕ್ಷ ಬಿ.ಮೋಹನ್, ಕ್ರಾಂತಿಕಾರಿ ಯುವಜನ ಸಂಘದ ತಾಲೂಕ ಉಪಾಧ್ಯಕ್ಷ ಮುತ್ತಣ್ಣ ಮತ್ತು ನೂರಾರು ಕಾರ್ಮಿಕರು ಪಾಲ್ಗೊಂಡಿದ್ದಾರೆ
Please follow and like us:
error