ವಾಲ್ಮೀಕಿ ಸಮುದಾಯದ ವಿವಿಧ ಬೇಡಿಕೆ : ಮುಖ್ಯಮಂತ್ರಿಗೆ ಮನವಿ

ಕೊಪ್ಪಳ, ಅ. ೧೩. ಕೊಪ್ಪಳ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ವಾಲ್ಮೀಕಿ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಮಾಜದ ಮುಖಂಡರು ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ಸುಮಾರು ೮೦ ಲಕ್ಷದಷ್ಟಿರುವ ವಾಲ್ಮೀಕಿ ಸಮುದಾಯ ವಾಲ್ಮೀಕಿ, ನಾಯಕ, ಬೇಡ, ಬೇಡರ, ತಳವಾರ ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತದೆ. ಜಗತ್ತಿಗೆ ರಾಮಾಯಣದಂಥಹ ಬೃಹತ್ ಮಹಾಕಾವ್ಯ ನೀಡಿದ ಸುಮಾರು ೭೨ ಕೋಟೆ, ಕೊತ್ತಲಗಳನ್ನು ಕಟ್ಟಿ ಬೆಳೆಸಿದ ಸಮಾಜ ಇಂದು ತುಂಬಾ ಶೋಚನೀಯ ಸ್ಥಿತಿಗೆ ಬಂದಿದೆ ಆದ್ದರಿಂದ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. ೩ ರಿಂದ ೭.೫ ಗೆ ಹೆಚ್ಚಿಸುವದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕುಷ್ಟಗಿ ತಾಲೂಕ ವಾಲ್ಮೀಕಿ ಸಮಾಜ ಮತ್ತು ಜಿಲ್ಲೆಯ ಯುವ ಮುಖಂಡರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಕೇಂದ್ರ ಹಾಗೂ ರಾಜ್ಯದ ವಿವಿಧ ಯೋಜನೆಗಳನ್ನು ಶೇ. ೧೦೦ ರಷ್ಟು ಅನುಷ್ಠಾನಗೊಳಿಸುವದು, ಶಿಷ್ಯ ವೇತನ ಮತ್ತು ಶೈಕ್ಷಣಿಕ ಸಹಾಯಧನಗಳನ್ನು ಆಯಾ ಆರ್ಥಿಕ ವರ್ಷದಲ್ಲಿ ಬಿಡುಗಡೆಗೊಳಿಸಬೇಕು, ಶಾಸಕರ ಅನುಗುಣವಾಗಿ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು. ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ವಾಲ್ಮೀಕಿ ಪುತ್ಥಳಿ ನಿರ್ಮಿಸುವದು, ಎಸ್.ಟಿ. ನಿಗಮಕ್ಕೆ ಪ್ರತ್ಯೇಕ ಕಛೇರಿ ಮಾಡುವದು, ಬ್ಯಾಕ್‌ಲಾಗ್ ಹುದ್ದೆಗಳನ್ನು ಹಾಗೂ ನಾಯಕ ಸಮಾಜದ ಅನುಕಂಪ ಆಧಾರಿತ ಹುದ್ದೆಗಳನ್ನು ಕೂಡಲೇ ತುಂಬಬೇಕು ಎಂದು ಮನವಿಯಲ್ಲಿ ಕೋರಲಾಗಿದೆ
ನಿಷ್ಕ್ರಿಯವಾಗಿರುವ ಸಿಆರ್‌ಇ ಸೆಲ್ ಪೋಲಿಸ್ ಘಟಕವನ್ನು ರದ್ದುಗೊಳಿಸಿ, ಘಟಕದ ವ್ಯಾಪ್ತಿಯಲ್ಲಿ ಇರುವ ಪ್ರಕರಣಗಳನ್ನು ಸಿಐಡಿಗೆವಹಿಸುವದು, ಕೊಪ್ಪಳ ತಾಲೂಕ ಜಬ್ಬಲಗುಡ್ಡದ ಮೇಲೆ ಇರುವ ಗಂಡುಗಲಿ ಕುಮಾರರಾಮನ ಕೋಟೆ ಕೊತ್ತಲಗಳನ್ನು ರಕಷಿಸಬೇಕು ಅದಕ್ಕಾಗಿ ಪ್ರಾಧಿಕಾರ ರಚನೆಯಾಗಬೇಕು ಮತ್ತು ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಬೇಕು, ಜಿಲ್ಲಾ ಕೇಂದ್ರದಲ್ಲಿ ಕುಮಾರ ರಾಮನ ಪುತ್ಥಳಿ ಸ್ಥಾಪಿಸಬೇಕು, ಜಿಲ್ಲಾ ವಾಲ್ಮೀಕಿ ಭವನವನ್ನು ಸಮಾಜದ ಉಪಯೋಗಕ್ಕೆ ಕಡಿಮೆ ಬೆಲೆಗೆ ಕೊಡಬೇಕು ಹಾಗೂ ವಿಶೇಷವಾಗಿ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಹೊಂದಿದವರಿಗೆ ಶಿಕ್ಷೆ ನೀಡುವದು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ಮಾಡಬೇಕು ಎಂದು ಸಮಾಜದ ಅಧ್ಯಕ್ಷ ಸಂಗಮೇಶ ಕರಡಿ, ಜಿಲ್ಲಾ ವಾಲ್ಮೀಕಿ ಸಮಾಜದ ಉಪಾಧ್ಯಕ್ಷ ರಮಾಜಪ್ಪ ಹೊಸಕೇರಾ, ಜಿಲ್ಲಾ ಯುವ ಮುಖಂಡ ಮಂಜುನಾಥ ಜಿ. ಗೊಂಡಬಾಳ, ಕರಿಬಸಪ್ಪ ಬಾಗಲಕೋಟಿ, ರಮೇಶ ಕೊಳ್ಳಿ, ಆರ್. ಕೆ. ಸುಬೇದಾರ ಹಿರೇಮನ್ನಾಪೂರ, ಬಸವರಾಜ ನಂದಿಹಾಳ, ಶಿವನಗೌಡ ಮೊದಲಗಟ್ಟಿ, ಗ್ರಾ. ಪಂ. ಮಾಜಿ ಅಧ್ಯಕ್ಷ ಚಂದ್ರಪ್ಪ ನಾಯಕ, ಹನುಮಂತರೆಡ್ಡಿ ಕಿನ್ನಾಳ, ಮಾನಪ್ಪ ತಳವಾರ, ಭೀಮನಗೌಡ ನಂದಿಹಾಳ, ಹನುಮಂತ ಮೋಡಿಕಾರ, ಪರಸಪ್ಪ ಹೊಸೂರ, ಚಿದಾನಂದ ಹತ್ತಿಗುಡ್ಡ ಅನೇಕರು ಉಪಸ್ತಿತರಿದ್ದರು.

Leave a Reply