ಚುನಾವಣಾ ವೀಕ್ಷಕರಿಗೆ ದೂರು ಸಲ್ಲಿಕೆಗೆ ಸೂಚನೆ

ಕನಕಗಿರಿ :  
 ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ಕೇರಳ ರಾಜ್ಯದ ಹಿರಿಯ ಐ.ಎಫ್.ಎಸ್. ಅಧಿಕಾರಿ ವಿ.ವಿ. ಶಾಜಿಮೋನ್- ಇವರನ್ನು ನೇಮಿಸಲಾಗಿದ್ದು, ಇವರ ಮೊಬೈಲ್ ಸಂಖ್ಯೆ ೯೪೮೧೬೪೭೨೩೪, ಸ್ಥಿರ ದೂರವಾಣಿ ಸಂಖ್ಯೆ: ೦೮೫೩೩-೨೩೦೪೪೫ ಆಗಿರುತ್ತದೆ.  ಇವರು ಈಗಾಗಲೆ ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದಾರೆ.
  ಚುನಾವಣಾ ವಿಷಯವಾಗಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಅಥವಾ ಯಾವುದೇ ದೂರುಗಳನ್ನು ಈ ಚುನಾವಣಾ ವೀಕ್ಷಕರಿಗೆ ತಿಳಿಸಬಹುದಾಗಿದೆ.  ಇವರು ಗಂಗಾವತಿಯ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದು, ಇವರನ್ನು ಖುದ್ದಾಗಿ ಸಂಪರ್ಕಿಸಲು ಅವರನ್ನು ಗಂಗಾವತಿಯ ಎಪಿಎಂಸಿ ಕಾರ್ಯಾಲಯದಲ್ಲಿ ಪ್ರತಿ ದಿನ ಸಂಜೆ ೦೪ ಗಂಟೆಯಿಂದ ೦೬ ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ .
ಕುಷ್ಟಗಿ 
: ಕುಷ್ಟಗಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ ಮಹಾರಾಷ್ಟ್ರ ರಾಜ್ಯದ ಹಿರಿಯ ಐ.ಎಫ್.ಎಸ್. ಅಧಿಕಾರಿ ಎ.ಎಸ್.ಕೆ. ಸಿನ್ಹಾ ಅವರನ್ನು ನೇಮಿಸಲಾಗಿದ್ದು, ಇವರು ಈಗಾಗಲೆ ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದಾರೆ.
  ಎ.ಎಸ್.ಕೆ. ಸಿನ್ಹಾ ಅವರ ಮೊಬೈಲ್ ಸಂಖ್ಯೆ: ೯೪೮೧೪೩೭೨೩೪ ಆಗಿದ್ದು, ಚುನಾವಣಾ ವಿಷಯವಾಗಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಅಥವಾ ಯಾವುದೇ ದೂರುಗಳನ್ನು ಈ ಚುನಾವಣಾ ವೀಕ್ಷಕರಿಗೆ ತಿಳಿಸಬಹುದಾಗಿದೆ.  ಇವರು ಕುಷ್ಟಗಿಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದು, ಇವರನ್ನು ಖುದ್ದಾಗಿ ಸಂಪರ್ಕಿಸಲು ಅವರು ವಾಸವಿರುವ ಪ್ರವಾಸಿ ಮಂದಿರದಲ್ಲಿ ಪ್ರತಿ ದಿನ ಸಂಜೆ ೦೪ ಗಂಟೆಯಿಂದ ೦೬ ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ .
ಯಲಬುರ್ಗಾ 
: ಕನಕಗಿರಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕರನ್ನಾಗಿ  ಉತ್ತರ ಪ್ರದೇಶ ರಾಜ್ಯದ ಐಎಎಸ್ ಅಧಿಕಾರಿ ಭರತ್‌ಲಾಲ್ ರೈ ಅವರನ್ನು ನೇಮಿಸಲಾಗಿದ್ದು, ಇವರು ಈಗಾಗಲೆ ಚುನಾವಣಾ ಕಾರ್ಯಕ್ಕೆ ಆಗಮಿಸಿದ್ದಾರೆ.
  ಭರತ್‌ಲಾಲ್ ರೈ ಅವರ ಮೊಬೈಲ್ ಸಂಖ್ಯೆ- ೯೪೮೧೮೪೦೨೩೪ ಆಗಿದ್ದು, ಚುನಾವಣಾ ವಿಷಯವಾಗಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಅಥವಾ ಯಾವುದೇ ದೂರುಗಳನ್ನು ಈ ಚುನಾವಣಾ ವೀಕ್ಷಕರಿಗೆ ತಿಳಿಸಬಹುದಾಗಿದೆ.  ಇವರು ಯಲಬುರ್ಗಾದ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದು, ಇವರನ್ನು ಖುದ್ದಾಗಿ ಸಂಪರ್ಕಿಸಲು ಅವರನ್ನು ಗಂಗಾವತಿಯ ಎಪಿಎಂಸಿ ಕಾರ್ಯಾಲಯದಲ್ಲಿ ಪ್ರತಿ ದಿನ ಸಂಜೆ ೦೪ ಗಂಟೆಯಿಂದ ೦೬ ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ.
ವೆಚ್ಚ ವೀಕ್ಷಕರ ನೇಮಕ : ದೂರು, ಮಾಹಿತಿಗಳಿಗೆ ಆಹ್ವಾನ
 ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿನ ಚುನಾವಣಾ ವೆಚ್ಚಗಳ ಬಗ್ಗೆ ನಿಗಾ ವಹಿಸಲು ಈಗಾಗಲೆ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದ್ದು, ಇವರು ಈಗಾಗಲೆ ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ್ದಾರೆ.
  ಕುಷ್ಟಗಿ, ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿತ ಚುನಾವಣಾ ವೆಚ್ಚ ವೀಕ್ಷಕರಾಗಿ ಸಂಜೀವ್ ಕೆ. ಸಿಂಗ್- ೯೪೮೨೧೬೪೨೩೪ ಇವರು ನೇಮಕಗೊಂಡಿದ್ದು, ಇವರು ಗಂಗಾವತಿಯ ಸರ್ಕ್ಯೂಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.  ಕೊಪ್ಪಳ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿತ ವೆಚ್ಚ ವೀಕ್ಷಕರಾಗಿ ಶಶಿಕಾಂತ್- ೯೪೮೦೬೩೯೨೩೪ ಇವರು ನೇಮಕಗೊಂಡಿದ್ದು, ಇವರು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿದ್ದಾರೆ.  ಸಾರ್ವಜನಿಕರು ಚುನಾವಣಾ ವಿಷಯವಾಗಿ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಅಥವಾ ಯಾವುದೇ ದೂರುಗಳನ್ನು ಈ ವೀಕ್ಷಕರಿಗೆ ತಿಳಿಸಬಹುದಾಗಿದೆ.  ಲಿಖಿತ ದೂರುಗಳನ್ನು ಸಲ್ಲಿಸಲು ಮತ್ತು ವೀಕ್ಷಕರನ್ನು ಖುದ್ದಾಗಿ ಸಂಪರ್ಕಿಸಲು ಅವರ ವಾಸ್ತವ್ಯ ಇರುವ ನಿರೀಕ್ಷಣಾ ಮಂದಿರಗಳಲ್ಲಿ ಪ್ರತಿದಿನ ಸಂಜೆ ೦೪ ಗಂಟೆಯಿಂದ ೦೬ ಗಂಟೆಯವರೆಗೆ ಸಂಪರ್ಕಿಸಬಹುದಾಗಿದೆ.
Please follow and like us:

Related posts

Leave a Comment