ಜು,೨೧ ಅಜಾತಶ್ರೀನಾಗಲಿಂಗಲೀಲೆ ನಾಟಕ ಪ್ರದರ್ಶನ

ಕೊಪ್ಪಳ, ಜು. ೧೭ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಹಾಗೂ ಶ್ರೀಲಲಿತ ಕಲಾ ನಾಟ್ಯ ಸಂಘ ಕುಕನೂರು ಇವರ ಸಹಯೋಗಲ್ಲಿ ಜು, ೨೧ ರವಿವಾರ ಮಧ್ಯಹ್ನ ೩ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಹಿರಿಯ ರಂಗ ಕಲಾವಿದ ಬಾಬಣ್ಣ ಕಲ್ಮನಿ ಇವರ ಗೌರವಾರ್ಥ ಶಿವಶಂಕರ ವಿರಚಿತ ಅಜಾತ ಶ್ರೀ ನಾಗಲಿಂಗ ಲೀಲೆ ಎಂಬ ನಾಟಕವನ್ನು ಪ್ರದರ್ಶಿಸಲಾಗವುದು
ನಾಟಕ ಉದ್ಘಾಟನೆಯನ್ನು ವಿರೇಶಪ್ಪ ಸೋಮಾಪೂರ ನೆರವೇರಿಸುವರು. ವಾಣಿಜ್ಯೋದ್ಯಮಿ ಫಕೀರಪ್ಪ ಅವರ ಅಧ್ಯಕ್ಷತೆಯಲ್ಲಿ, ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯಕ ನಿರ್ದೇಶಕಿ ಶ್ರೀಮತಿ ಸೌಭಾಗ್ಯ, ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಹಾಗೂ ನಗರಸಭೆ ಮಾಜಿ ಸದಸ್ಯ ಜಾಕೀರ್ ಹುಸೇನ್ ಕಿಲ್ಲೇದಾರ ಆಗಮಿಸುವರು. ಪ್ರದರ್ಶನ ಉಚಿತವಾಗಿದ್ದು, ರಂಗ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕವನ್ನು ವೀಕ್ಷಿಸಿ ಯಶಸ್ವಿಗೊಳಸಬೇಕು ಎಂದ ಶ್ರೀ ಲಲಿತಕಲಾ ನಾಟ್ಯ ಸಂಘದ ಅಧ್ಯಕ್ಷ ಬಾಬಣ್ಣ ಕಲ್ಮನಿ ತಿಳಿಸಿದ್ದಾರೆ.
Please follow and like us:
error