೧೨೦೦ ಸಸಿ ನೆಟ್ಟು ಸ್ವಾತಂತ್ರೋತ್ಸವ ಆಚರಿಸಿದ ರೈತರು

ಕೊಪ್ಪಳ ತಾಲೂಕಿನ ವದಗನಾಳ ಗ್ರಾಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ರೈತರ ಸಹಯೋಗದೊಂದಿಗೆ ದೇಶದ ೬೭ನೇ ಸ್ವಾತಂತ್ರೋತ್ಸವವನ್ನು ೧೨೦೦ ಸಸಿ ನಡೆವುದುರ ಮೂಲಕ ಆಚರಿಸಲಾಯಿತು.
  ವಿವಿಧಡೆ ಸಾರ್ವಜನಿಕರು, ನೌಕಕರು ಮತ್ತು ವಿದ್ಯಾರ್ಥಿಗಳು ವಿಜೃಂಭಣೆಯಿಂದ ಆಚರಿಸಿದರೆ ವದಗನಾಳ ಗ್ರಾಮದ ರೈತರು ಈ ಸ್ವಾತಂತ್ರೋತ್ಸವವನ್ನು ಇನ್ನಷ್ಟು ವಿಶೇಷವಾಗಿ ಅರ್ಥಪೂರ್ಣವಾಗಿ ಆಚರಿಸಿದರು. ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಸಮಗ್ರ ಕೃಷಿ ಪದ್ದತಿಗಳು ಯೋಜನೆಯಡಿ ರೈತರು ಸುಮಾರು ೧೨೦೦ ಸಸಿಗಳನ್ನು ನೆಡುವ ಮೂಲಕ ನಿಜವಾಗಿಯೂ ದೇಶಪ್ರೇಮವನ್ನು ಮೆರೆದಿದ್ದಾರೆ. 
  ವದಗನಾಳ ಗ್ರಾಮದಲ್ಲಿ ಸ್ವಾತಂತ್ರೋತ್ಸವ ಹಾಗೂ ವೃಕ್ಷಾರೋಪಣ ಕಾರ್ಯಕ್ರಮದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿ ಡಾ: ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ ನಸಿಸುತ್ತಿರುವ ಕಾಡು ಹಾಗೂ ವನಸಿರಿಯಿಂದಾಗಿ ನಾವು ಪದೆಪದೆ ಬರಗಾಲಗಳನ್ನು ಅನುಭವಿಸಬೇಕಾಗಿದೆ. ನಾವೆಲ್ಲರೂ ಮರಗಳನ್ನು ಕಡಿಯಲು ಆಸಕ್ತಿ ತೋರಿದಷ್ಟು ಅವುಗಳನ್ನು ನೆಡಲು ತೋರುವದಿಲ್ಲ. ಸರಿಯಾದ ಸಮಯಕ್ಕೆ ಮಳೆ ಪಡೆಯಲು ಹಾಗೂ ಉಸಿರಾಡಲು ಒಳ್ಳೆಯ ಗಾಳಿ ಸಿಗಬೇಕಾದರೆ ಮರಗಳನ್ನು ನೆಟ್ಟು ಅವುಗಳನ್ನು ಬೆಳೆಸಿದರೆ ಮಾತ್ರ ಸಾಧ್ಯ.  ಇಂದು ದೇಶದಲ್ಲಿ ಅರಣ್ಯದ ಪ್ರಮಾಣ ಶೇ. ೧೯.೫ ರಷ್ಟು ಮಾತ್ರವಿದೆ, ಆದರೆ ಒಳ್ಳೆಯ ಸಮತೋಲನವಾದ ವಾತಾವರಣ ಹೊಂದಲು ಒಟ್ಟು ಪ್ರದೇಶದ ಕನಿಷ್ಟ ಶೇ. ೩೦ ರಷ್ಟು ಅರಣ್ಯ ಕಾಪಾಡುವದು ಅಗತ್ಯವಾಗಿದೆ. ಈ ವನ್ಯ ಸಂಪತ್ತು ರೈತರು ತಮ್ಮ ಮುಂದಿನ ಜನಾಂಗಕ್ಕೆ ಬಿಟ್ಟು ಹೋಗಬಹುದಾದ ಒಳ್ಳೆಯ ಅತ್ಯಮೂಲ್ಯವಾದ ಆಸ್ತಿ ಎಂದು ರೈತರಿಗೆ ಮರ ನೆಡುವ ಮಹತ್ವ ತಿಳಿಸಿದರು. 
  ಕಾರ್ಯಕ್ರಮದಲ್ಲಿ ಹಲವಾರು ಮಕ್ಕಳು ಸ್ವಯಂಪ್ರೇರಿತರಾಗಿ ಎರಡೆರಡು ಸಸಿಗಳನ್ನು ತಾವಾಗಿಯೇ ನೆಟ್ಟು ದೇಶಪ್ರೇಮ ಹಾಗೂ ಮರಗಳ ಬಗ್ಗೆ ಇರುವ ಆಸಕ್ತಿಯನ್ನು ತೋರಿದರು. ಗ್ರಾಮದ ಹಮ್ಮೀಗೇಶ್ವರ ದೇವಸ್ಥಾನದ ಪೂಜ್ಯರು ರೈತರಿಗೆ ಸಸಿಗಳನ್ನು ವಿತರಿಸಿದರು.  

Leave a Reply