You are here
Home > Koppal News > ಕಾಂಗ್ರೆಸ್,ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ

ಕಾಂಗ್ರೆಸ್,ಬಿಜೆಪಿ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆ

ಕೊಪ್ಪಳ, ಏ.೧೩: ತಾಲೂಕಿನ ಬೇಳೂರು ಗ್ರಾಮದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ  ಮುಖಂಡರಗಳ ವರ್ತನೆಗಳಿಂದ ಬೇಸರಗೊಂಡು ನೂರಾರು ಕಾರ್ಯಕರ್ತರು ಹಾಗೂ ಮುಖಂಡರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್‌ರವರ ಸಮ್ಮುಖದಲ್ಲಿ ಮುಖಂಡರಾದ ರಮೇಶ ಎಂ. ಗುಡ್ಲಾನೂರು, ಪಕೀರಗೌಡ್ರ, ಮಂದಿನಗೌಡ್ರ, ಡಾ. ಮಲ್ಲಿಕಾರ್ಜುನ ಪಕೀರಪ್ಪ ಸುಣಗಾರ, ಕಾಮಣ್ಣ, ನಿಂಗಜ್ಜ ತಳವಾರ, ಗವಿಸಿದ್ದಪ್ಪ ತಳವಾರ ಇತರ ಮುಖಂಡರ ನೇತೃತ್ವದಲ್ಲಿ ಮುದೇಪ್ಪ, ನೀಲಪ್ಪ, ಹನುಮಪ್ಪ, ಯಗಪ್ಪ, ಗಾಳೆಪ್ಪ, ಪಕೀರಪ್ಪ, ದುರಗಪ್ಪ, ದ್ಯಾವಪ್ಪ, ಯಲ್ಲಪ್ಪ, ಸಣ್ಣ ದೇವಪ್ಪ, ನಿಂಗಪ್ಪ, ಕುಂಗ ಹನುಮಪ್ಪ, ರಾಮಪ್ಪ, ಯಮನೂರಪ್ಪ, ಗಾಳಿ ದುರಗಪ್ಪ, ಬಸವರಾಜ ಮಾದಣ್ಣವರ್, ಯಲ್ಲಪ್ಪ ಮಾದಣ್ಣನವರ್, ರಮೇಶ ದೊಡ್ಡಮನಿ ಸೇರಿದಂತೆ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು. 
ಅಭಿವೃದ್ಧಿ ನೆಪದಲ್ಲಿ ಜನತೆಗೆ ವಂಚನೆ: ಪ್ರದೀಪಗೌಡ

ಕೊಪ್ಪಳ,ಏ,೧೩: ಕಳೆದ ೩೦ ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿ ಮಂತ್ರದಲ್ಲಿಯೇ ಎಲ್ಲಾ ಪಕ್ಷದ ಮುಖಂಡರು ಬರಿ ಕ್ಷೇತ್ರದ ಜನತೆಗೆ ವಂಚಿಸುತ್ತಾ ಬಂದಿದ್ದಾರೆ. ಇನ್ನಾದರೂ ಜನತೆ ಬದಲಾವಣೆಗೆ ಮುಂದಾಗಬೇಕಿದೆ ಎಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಮನವಿ ಮಾಡಿದರು. 
ಅವರು ಶುಕ್ರವಾರ ತಾಲೂಕಿನ ಬೇಳೂರು ಗ್ರಾಮದಲ್ಲಿ ವಿವಿಧ ಪಕ್ಷಗಳ ನೂರಾರು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ನಂತರ ಮಾತನಾಡಿ, ಪಕ್ಷಕ್ಕೆ ದಿನದಿಂದ ದಿನಕ್ಕೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವುದು ಇದೊಂದು ಶುಭ ಸಂಕೇತ. ತಾವೇಲ್ಲಾ ಪಕ್ಷದ ಶಕ್ತಿಯಾಗಿದ್ದು ಇದು ಗೌಡರ ಚುನಾವಣೆ ಎಂದು ಪರಿಗಣಿಸದೇ ಇದು ನಿಮ್ಮ ಚುನಾವಣೆ ನಿಮ್ಮ ಗ್ರಾಮದ ಅಭಿವೃದ್ಧಿಗೆ ನೀವೆ ಮುಂದಾಗಬೇಕಾದ ಮಹತ್ತರ ಕಾರ್ಯವೆಂದರು. ಅಭಿವೃದ್ಧಿ ಎಂಬುದು ಬರಿ ನಿಮ್ಮನ್ನು ವಂಚಿಸುವ ಕಾರ್ಯ ಅದಕ್ಕೆ ಜನತೆ ಏಚ್ಛೆತ್ತುಕೊಳ್ಳಬೇಕಿದೆ. ಈ ಬಾರಿ ಎಲ್ಲವನ್ನು ತುಲಾತ್ಮಕವಾಗಿ ಅಳೆದು ನೋಡಿ ಹೊಸತನದ ಬದಲಾವಣೆಗೆ ತಾವೇಲ್ಲಾ ಸಹಕರಿಸಬೇಕೆಂದರು.  
ಇದೇ ವೇಳೆ ಜೆಡಿಎಸ್ ಪಕ್ಷದ ತಾಲ್ಲೂಕಾಧ್ಯಕ್ಷ ಅಂದಪ್ಪ ಮರೇಬಾಳ, ಕಾರ್ಯದರ್ಶಿ ಶೇಖಪ್ಪ ಲಕ್ಷಾಣಿ, ಎಂ.ಡಿ.ಹುಸೇನ ಮಾಸ್ಟರ್, ಟಿ.ಟಿ. ಪಾಟೀಲ್ ಮಾತನಾಡಿ, ಕಿಲ್ಲೆದ್ ಗೌಡ್ರ ವಂಶ ಬರಿ ನೀಡಿದ ವಂಶವೇ ಹೋರತೂ ಬೇಡಿದಲ್ಲಾ ಹಾಗೇ ಅವರೆಂದು ಜನರ ಹಣ ಬಡಿದು ತಿನ್ನುವುದಿಲ್ಲವೆಂಬುದು ಜನತೆ ಅರಿತರೇ ಸಾಕು. ಅವರ ಸಜ್ಜನಿಕೆ ಸರಳವ್ಯಕ್ತಿತ್ವದ ವ್ಯಕ್ತಿಯಾಗಿದ್ದು ಇದೊಂದು ಬಾರಿ ಅವರಿಗೆ ಜನ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಂಡಬೇಕೆಂದರು. ಕ್ಷೇತ್ರದಾಧ್ಯಂತ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದಕ್ಕೆ ಇಂದು ತಾವು ಸ್ವ ಪ್ರೇರಣೆಯಿಂದ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿರುವುದೇ ಸಾಕ್ಷಿ ಎಂದರು. 
 ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಹೆಚ್.ರಮೇಶ ವಣಬಳ್ಳಾರಿ, ಪಕ್ಷದ ಮುಖಂಡರಾದ ವಿರೇಶ್‌ಮಹಾಂತಯ್ಯನಮಠ್, ರಾಜು ಹಲಗೇರಿ, ಕೋಟ್ರಪ್ಪ ಕೋರ್ಲಳ್ಳಿ, ಎಂ.ಡಿ. ನಗರ ಸಭೆ ಸದಸ್ಯರಾದ ಚನ್ನಪ್ಪ ಕೋಟ್ಯಾಳ್, ಖಾಜಾವಲಿ ಬನ್ನಿಕೊಪ್ಪ, ನಗರ ಯುವ ಘಟಕದ ಅಧ್ಯಕ್ಷ ಸೈಯದ್ ಮಹೆಮುದ್ ಹುಸೇನಿ, ಟಿ.ಟಿ. ಪಾಟೀಲ್, ಸಿದ್ದಾರಡ್ಡಿ ಡಂಬ್ರಳ್ಳಿ, ಇಸೂಫ್‌ಖಾನ್, ಹನುಮಂತಪ್ಪ ಹೀರೆಸಿಂದೋಗಿ,  ದೇವೆಂದ್ರಪ್ಪ, ಭಾಗ್ಯನಗರದ ಮಂಜುನಾಥ ಶ್ಯಾವಿ, ಮಂಜುನಾಥ್ ಗಡ್ಡದ್, ವೆಂಕಟೇಶ ಬೆಲ್ಲದ್, ಅಮರೇಶ ಮುರುಳಿ, ವಿಜಯಕುಮಾರ ಬಿಸರಳ್ಳಿ, ಪ್ರಭು ಬಬ್ಲಿ ಸೇರಿದಂತೆ ಪಕ್ಷದ ಇತರ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.
 
ಭಾಗ್ಯನಗರ ಯುವಘಟಕದ ಸಭೆ
ಕೊಪ್ಪಳ,ಏ,೧೩: ನಗರದ ಕೂಗಳತೆ ದೂರದಲ್ಲಿರುವ ಭಾಗ್ಯನಗರ ಗ್ರಾಮದಲ್ಲಿ ಇಂದು ಜೆಡಿಎಸ್ ಯುವ ಘಟಕದ ಸಭೆ ನಡೆಸಲಾಯಿತು. ಸಭೆಯ ನೇತೃತ್ವವನ್ನು ಪಕ್ಷದ ಎಸ್. ಟಿ ಘಟಕದ ಜಿಲ್ಲಾಧ್ಯಕ್ಷ ಮಲ್ಲಪ್ಪ ಫ. ಬೇಲೇರಿ, ಮಂಜುನಾಥ್ ಗಡ್ಡದ್, ರಾಮಚಂದ್ರ ಅಡ್ಡೇದರ್, ಮಂಜುನಾಥ ಶ್ಯಾವಿ ಇತರರ ಮುಖಂಡತ್ವದಲ್ಲಿ ಸಭೆ ನಡೆಸಲಾಯಿತು. 
ಈ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ಯುವಕರು ಪಕ್ಷ ಸೇರ್ಪಡೆಗೊಳ್ಳುವ ಆಶಯ ವ್ಯಕ್ತಪಡಿಸಿದರಲ್ಲದೇ ಕೊಪ್ಪಳ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರದೀಪಗೌಡ ವಿ. ಮಾಲಿ ಪಾಟೀಲ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಳ್ಳುವ ಮೂಲಕ ಕ್ಷೇತ್ರದ ಬದಲಾವಣೆಯಲ್ಲಿ ಕೈಜೋಡಿಸಿ ಪಕ್ಷದ ಬೆನ್ನೆಲುಬಾಗಿ ನಿಲ್ಲುವ ಭರವಸೆ  ನೀಡಿದರು.

Leave a Reply

Top