ಕರವೇಯಿಂದ ವಜುಬಾಯಿ ವಾಲಾ ಪ್ರತಿಕೃತಿ ಧಹಿಸಿ ರಸ್ತೆ ತಡೆ

ಕೊಪ್ಪಳ: ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ ಜಿಲ್ಲಾ ಘಟಕ   ದಿ  ೩೦  ರಂದು ಕೊಪ್ಪಳ ಬಸ್ ನಿಲ್ದಾಣದ ಎದುರಿಗೆ ಕರ್ನಾಟಕದ ರಾಜ್ಯಪಾಲರಾದ ವಜುಬಾಯಿ ವಾಲಾ ರವರ ಪ್ರತಿಕೃತಿ ಧಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಸಲ್ಲಿಸುತ್ತಿರುವ ಪತ್ರಿಕಾ ಹೇಳಿಕೆ.

ಕರ್ನಾಟಕ ವಿಧಾನ ಮಂಡಲದ ಜಂಟಿ ಅಧಿವೇಶನವನ್ನು ಕುರಿತು ಮಾನ್ಯ ರಾಜ್ಯಪಾಲರು ಹಿಂದಿಯಲ್ಲಿ ಮಾತನಾಡುವುದಾಗಿ ಪತ್ರಿಕಾ ಹೇಳಿಕೆ ನೀಡಿರುವುದನ್ನು ಕರವೇ ಖಂಡಿಸುತ್ತದೆ. ಭಾರತ ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಭಾಷೆಯಲ್ಲಿ ಮಾತನಾಡಿ ಬಾಷಾ ಸಾಮರಸ್ಯವನ್ನು ಎತ್ತಿ ಹಿಡಿಯಬೇಕಾದಂತ ರಾಜ್ಯಪಾಲರು ಅನ್ಯಬಾಷೆಗಳಲ್ಲಿ ಮಾತನಾಡುವುದರಿಂದ ಭಾರತ ಒಕ್ಕೂಟ ವ್ಯವಸ್ಥೆಗೆ ದಕ್ಕೆ ಬರುವ ಸಾಧ್ಯತೆಗಳಿರುವುದರಿಂದ ರಾಜ್ಯಪಾಲರು ಕನ್ನಡ ಬಾಷೆಯಲ್ಲಿ ಮಾತನಾಡಬೇಕೆಂದು ಕರವೇ ಒತ್ತಾಯಿಸುತ್ತದೆ. 
ರಾಜ್ಯಪಾಲರ ನಿಲುವನ್ನು ಒಪ್ಪಿಕೊಂಡಿರುವ ಸಿದ್ರಾಮಯ್ಯ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಕೊಂಡಿರುವುದು ರಾಜ್ಯಪಾಲರೊಂದಿಗೆ ರಾಜ್ಯದ ಹಿತಾಶಕ್ತಿಯನ್ನು ಮರೆತು ಶ್ಯಾಮಿಲಾದಂತಾಗಿದೆ. ರಾಜ್ಯಪಾಲರು ಹಿಂದಿಯಲ್ಲಿ ಮಾತನಾಡುವುದನ್ನು ವಿರೋದಿಸದ ಸಚಿವ ಸಂಪುಟದ ನೀತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ವಿರೋದಿಸುತ್ತದೆ. 
ಇನ್ನುಮುಂದಾದರು ಕನ್ನಡ ಭಾಷೆಗೆ ಅಗ್ರಸ್ಥಾನವನ್ನು ನೀಡುವಲ್ಲಿ ರಾಜ್ಯಸರಕಾರ ಕೆಲಸ ಮಾಡಬೇಕು. ಸಮಸ್ತ ಕನ್ನಡಿಗರ ಶ್ರೇಯೋಭಿವೃದ್ದಿಗಾಗಿ ಕನ್ನಡ ಬಲ್ಲಂತಹ ರಾಜ್ಯ ಪಾಲರನ್ನು ನೇಮಕ ಮಾಡುವಂತೆ ಕೇಂದ್ರ ಸರಕಾರಕ್ಕೆ ಒತ್ತಡ ಹೇರಬೇಕು. ಐ.ಎ.ಎಸ್. ಐ.ಪಿ.ಎಸ್. ಅಧಿಕಾರಿಗಳು ಕನ್ನಡ ಬಾಷೆಯನ್ನು ಕಲಿಯಲು ಅವಕಾಶ ಮಾಡಿದಂತೆ ರಾಜ್ಯಕ್ಕೆ ಬರುವ ರಾಜ್ಯಪಾಲರಿಗೂ ಕನ್ನಡ ಬಾಷೆಯನ್ನು ಕಲಿಯಲು ಸಂವಿದಾನದಲ್ಲಿ ತಿದ್ದುಪಡಿ ಮಾಡಲು ರಾಜ್ಯದ ಸಂಸದರೆಲ್ಲರೂ ಪ್ರಯತ್ನಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಈ ಪ್ರತಿಭಟನೆ ಮೂಲಕ ಆಗ್ರಹಿಸುತ್ತದೆ. 
 ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರು ಬಸನಗೌಡ ಪೊಲೀಸಪಾಟೀಲ, ಹನ್ಮಂತ ಬೆಸ್ತರ, ಗವಿಸಿದ್ದಪ್ಪ ಹಂಡಿ, ಗಿರೀಶಾನಂದ ಜ್ಞಾನಸುಂದರ, ಪ್ರವೀಣ ಬ್ಯಾಹಟ್ಟಿ, ಗೋವಿಂದರಾಜ ಈಳಗೇರ, ಪೈಯಾಜ್, ಮಂಜುನಾಥ, ಬಸು, ಆನಂದ, ದಾದು, ರಿಯಾಜ್ ಕುದರಿಮೋತಿ, ಖಾಸಿಮ್ ಸಾಬ್, ಮುಂತಾದವರು ಉಪಸ್ಥಿತರಿದ್ದರು. 

Leave a Reply