ಕರ್ಕಿಹಳ್ಳಿ ನಾಳೆ ಶ್ರೀ ಶಿವಚಿದಂಬರೇಶ್ವರ ರಥೋತ್ಸವ.

ಕೊಪ್ಪಳ, ೨೯- ತಾಲೂಕಿನ ಕರ್ಕಿಹಳ್ಳಿಯ ಶ್ರೀಮೃತ್ಯುಂಜಯೇಶ್ವರ (ಶಿವಚಿದಂಬರೇಶ್ವರ) ಸನ್ನಿದಾನದಲ್ಲಿ ದಿ.೩೧ ರಂದು ಶುಕ್ರವಾರ ಮಧ್ಯಾಹ್ನ ೧ಕ್ಕೆ ಮಹಾ ರಥೋತ್ಸವ ಹರುಗಲಿದೆ.
ಜಾತ್ರ ಮಹೋತ್ಸವದ ಅಂಗವಾಗಿ ಕಳೆದ ೧೦ ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಗಳು ನಿರಂತರವಾಗಿ ಜರುಗುತ್ತವೆ.
ಶುಕ್ರವಾರ ರಥೋತ್ಸವದಂದು ಮಧ್ಯಾಹ್ನ ೧೨ಕ್ಕೆ ರಥಾಂಗಹೋಮದ ಪೂರ್ಣಾಹುತಿ ಹಾಗೂ ೧ ಗಂಟೆಗೆ ಸಕಲದಿಂಡಿ ಮೇಳಗಳ ಭಜನೆ ಹಾಗೂ ಮಂಗಳ ವಾಧ್ಯಗಳು ಶ್ರೀಚಿದಂಬರ ಸ್ವಾಮಿಗೆ ವಿಶೇಷ ಅಲಂಕಾರ ಜರುಗಲಿದೆ.
ರಥೋತ್ಸವದಂದು ಜರುಗಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಮುರಗೋಡದ ಶ್ರೀಶಂಕರದೀಕ್ಷಿತ ಗುರುಮಹಾರಾಜರು, ಬಡಲಿ ಶ್ರೀ ಗಂಗಾಧರ ಧೀಕ್ಷಿತ ಗುರುಮಹಾರಾಜರು, ಶ್ರೀ ಸುಂದರೇಶ ಧೀಕ್ಷಿತರು, ಶ್ರೀದಂಡಪಾಣಿ ಧೀಕ್ಷಿತರು, ಶ್ರೀ ಮಹೋಹರ  ಧೀಕ್ಷಿತ ಮಹಾರಾಜರು, ಅಗಡಿ ಶ್ರೀ ಶೇಷಣ್ಣ ಸ್ವಾಮಿಗಳು, ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ , ವಿ.ಪ. ಸದಸ್ಯ ಹಾಲಪ್ಪ ಆಚಾರ ಇತರರು ಆಗಮಿಸಲಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಸರ್ವರು ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.
Please follow and like us:
error