ಪತ್ನಿ ಕೊಲೆ : ಆರೋಪಿಗೆ ಜೀವಾವಧಿ ಶಿಕ್ಷೆ

  ತನ್ನ ಎರಡನೆ ಹೆಂಡತಿಯ ಶೀಲದ ಬಗ್ಗೆ ಸಂಶಯಪಟ್ಟು ಆಕೆಯನ್ನು ಕೊಲೆ ಮಾಡಿದ ಆರೋಪಿ ಪತಿ ಜಿಲ್ಲೆಯ ಗಂಗಾವತಿ ತಾಲೂಕಿನ ಶಾಲಿಗನೂರು ಗ್ರಾಮದ ಮಹಿಬೂಬ್ ಬಾಷಾ  ತಂದೆ ಮಾಬುಸಾಬ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೊಪ್ಪಳದ ಒಂದನೆ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.
ಮಹಿಬೂಬ್ ಬಾಷಾ ಅಲಿಯಾಸ್ ಮಹಿಬೂಬ ಎಂಬಾತನು ತನ್ನ ಎರಡನೇ ಹೆಂಡತಿಯಾದ ಹಸನ್ ಬೇಗಂಳ ಶೀಲದ ಬಗ್ಗೆ  ಸಂಶಯಪಟ್ಟು ಶಾಲಿಗನೂರ್ ಗ್ರಾಮದಲ್ಲಿ ಕಳೆದ ಜನೇವರಿ ೦೭ ರಂದು ಬೆಳಗಿನ ಜಾವ ೫.೦೦ ಗಂಟೆಯ ಸುಮಾರಿಗೆ ಸಿದ್ದಾಪೂರ-ನಂದಿಹಳ್ಳಿ ರಸ್ತೆಯ ಶಾಲಿಗನೂರು ಕ್ರಾಸ್ ಹತ್ತಿರ ಆಕೆಯನ್ನು ಕೊಲೆ ಮಾಡಿದ್ದನು.  ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಟಗಿ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ೧ನೇ ತ್ವರಿತ ವಿಲೇವಾರಿ ನ್ಯಾಯಾಲಯದ ನ್ಯಾಯಾಧೀಶ ಲೆಕ್ಕದಪ್ಪ ಜಂಬಗಿ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೩೦೨ ರ ಅಡಿ  ಜೀವಾವದಿ ಶಿಕ್ಷೆ, ರೂ.೧೦,೦೦೦/- ದಂಡ. ದಂಡ ಕೊಡಲು ತಪ್ಪಿದಲ್ಲಿ ೩ ತಿಂಗಳ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಲ್.ಎಸ್. ಸುಳ್ಳದ  ಇವರು ವಾದಿಸಿದ್ದರು.
ಕೊಲೆ ಯತ್ನ : ಆರೋಪಿಗೆ ಜೈಲು ಶಿಕ್ಷೆ
ಕೊಪ್ಪಳ,ಜು  ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿ ಶೇಖರಪ್ಪ ಎಂಬಾತನಿಗೆ ೧೦ ತಿಂಗಳ ಸಾದಾ ಜೈಲು ಶಿಕ್ಷೆ ಹಾಗೂ ೨೦೦೦ ರೂ. ದಂಡ ವಿಧಿಸಿ ಕೊಪ್ಪಳದ ತ್ವರಿತ ನ್ಯಾಯಾಲಯ ತೀರ್ಪು ನೀಡಿದೆ.
  ಕಳೆದ ೨೦೧೧ ರ ಸೆಪ್ಟಂಬರ್ ೧೨ ರಂದು  ತನ್ನ ಮಗಳ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ ಬಗ್ಗೆ ಆರೋಪಿಯಾದ ಪತಿ ಶೇಖರಪ್ಪನ ವಿರುದ್ಧ ಆತನ ಮಾವ ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.  ಪ್ರಕರಣದ ವಿಚಾರಣೆ ನಡೆಸಿದ ೧ನೇ ತ್ವರಿತ ವಿಲೇವಾರಿ ನ್ಯಾಯಾಧೀಶರಾದ ಲೆಕ್ಕದಪ್ಪ ಜಂಬಗಿ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೩೨೪ ರ ಅಡಿ  ೧೦ ತಿಂಗಳ ಸಾದಾ ಜೈಲು ಶಿಕ್ಷೆ ಮತ್ತು ರೂ.೨,೦೦೦/- ದಂಡ, ದಂಡ ಕೊಡಲು ತಪ್ಪಿದಲ್ಲಿ ೧೫ ದಿವಸ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಲ್.ಎಸ್. ಸುಳ್ಳದ  ಇವರು ವಾದಿಸಿದ್ದರು. 

Leave a Reply