ಲಿಂಗದಹಳ್ಳಿಯಲ್ಲಿ ವಾಲ್ಮೀಕಿ ಜಯಂತೋತ್ಸವ

ಕುಷ್ಠಗಿ: ಲಿಂಗದಹಳ್ಳಿಯಲ್ಲಿ ಇಲ್ಲಿನ ವಾಲ್ಮೀಕಿ  ಸಮಾಜ ವತಿಯಿಂದ ೨೩ ರಂದು ಬಾನುವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ನೆಡೆಯಿತು. ಬೆಳಿಗ್ಗೆ ಶ್ರಿ ಮಾರುತೇಶ್ವರ ದೇವಸ್ಥಾನದಿಂದ ಪೂಜೆ ಸಲ್ಲಿಸಿದ ಬಳಿಕ ಸಮಾಜದ ಗುರುಗಳಾದ ರವಿಚಂದ್ರ ನಾಯಕ ಸಾ|| ಹುಲಿಹೈದರ ವಾಲ್ಮೀಕಿ ಭಾವ ಚಿತ್ರ ಹಾಗೂ ಮೆರವಣಿಗೆಗೆ ಚಾಲನೆ ನೀಡಿದರು ಮಹಿಳೆಯರು ಕಳಸ, ಬಜನೆ, ಡೊಳ್ಳು ಕುಣಿತ, ಡ್ರಮಸಟ್ಟಿನೊಂದಿಗೆ ನೂರಾರು ಜನರು ಗ್ರಾಮದಲ್ಲಿ ಮೆರವಣಿಗೆ ನೆಡೆಯಿತು. 
          ಗ್ರಾಮದಲ್ಲಿ ಹಬ್ಬದ ವಾತವರಣ ತುಂಬಿತು. ಗಾಣದಾಳ, ಹೊಮ್ಮಿನಾಳ, ಹುಲಿಹೈದರ, ಜಿ.ಎಚ್.ಕ್ಯಾಂಪ್, ವಿರಪಾಪುರ ಮುಂತಾದ ಗ್ರಾಮದಿಂದ ಬಂದಿದ್ದ ಜನರು ವಾಲ್ಮೀಕಿ ಭಾವ ಚಿತ್ರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಂತರ ೧೨ ಗಂಟೆಗೆ ಅನ್ನಸಂತರ್ಪಣೆ ಜರುಗಿತು. ತದನಂತರ ೧ : ೦೦ ಗಂಟೆಗೆ ಮುಂಗೈ ಆಟ ನೆಡೆಯಿತು ತಾವರಗೇರಾ ಪೋಲಿಸರು ಶರಣೆಗೌಡರು ಪೋಲಿಸ್ ಪಿ.ಎಸ್.ಐ ಬಂದು ವಿಕ್ಷಣೆ ನೆಡೆಸಿ ಆಸ್ಥಿನರಾಗಿದ್ದರು. ಮುಖಂಡರಾದ ಗ್ಯಾನಿನಗೌಡ್ರ, ಸಂಗಪ್ಪ ಕಂಬಾರ, ಯಮನೂರು ಲಾವಂಡಿ, ಶಿವಕುಮಾರ, ರಾಮಣ್ಣ ಗೌಡ್ರ, ವಿರುಪಾಕ್ಷ ಕಂಬಾರ, ನಾಗರಾಜ ಗೌಡ್ರ ವೀರುನಗೌಡ ದಳಪತಿ, ಯಮನೂರ ಗೌಡ್ರ, ಚಿದಾನಂದ, ಹನುಮಂತ.ಬಿ, ಯಮನೂರ ಎಮ್ಮಿ ಇನ್ನು ಮುಂತಾದವರು ಪಾಲ್ಗೊಂಡಿದ್ದರು. ಸಮಾಜದ ಮುಖಂಡರಾದ ವಿರುಪಾಕ್ಷ ಕಂಬಾರ ನಾಯಕ ತಿಳಿಸಿದ್ದಾರೆ.

Leave a Reply