ರಕ್ತದಾನ ಶಿಬಿರ.

ಕೊಪ್ಪಳ-31- ಮಂಗಳವಾರದಂದು ರಾಯಚೂರು ಜಿಲ್ಲಾ, ಸಿಂಧನೂರು ತಾಲೂಕಿನ ವಳಬಳ್ಳಾರಿ ಗ್ರಾಮದ ಆರಾಧ್ಯ ದೇವರಾದ ಶ್ರೀ ವಳಬಳ್ಳಾರಿ ಚನ್ನಬಸವ ತಾತನವರ ೩೩ ನೇ ಪುಣ್ಯ ತಿಥಿಯ ಅಂಗವಾಗಿ  ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ೦೩/೧೧/೨೦೧೫ ಬೆಳಿಗ್ಗೆ ೦೮:೦೦ ರಿಂದ ೦೫:೦೦ ರವರೆಗೆ ಶ್ರೀ ವಳಬಳ್ಳಾರಿ ಚನ್ನಬಸವ ತಾತನವರ ಮಠದ ಆವರಣದಲ್ಲಿ  ಶಿಬಿರ ಜರುಗಲಿದ್ದು ರಕ್ತದಾನಿಗಳು ಸ್ವಯಂ ಪ್ರೇರಿತರಾಗಿ ಆಗಮಿಸಿ ರಕ್ತದಾನ ಮಾಡಬೇಕೆಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳು ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.
Please follow and like us:
error