೯ನೇ ಬಾರಿಗೆ ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವಕ್ಕೆ ಕಲಾ ತಂಡಗಳ ಆಹ್ವಾನ.

ಕೊಪ್ಪಳ, ಆ.೦೮ – ೨೨,೨೩ ಮತ್ತು ೨೪ರಂದು ಕೊಪ್ಪಳ ಸಾಹಿತ್ಯಭವನದಲ್ಲಿ ೯ ನೇ ಬಾರಿಗೆ ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವದ ಸಿದ್ಧಯ್ಯ ಪುರಾಣಿಕ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನೀಡಲು ಕಲಾ ತಂಡಗಳನ್ನು ಆಹ್ವಾನಿಸಲಾಗಿದೆ. ಕೊಪ್ಪಳ ಜಿಲ್ಲಾ ನಾಗರಿಕರ ಸಾಂಸ್ಕೃತಿಕ ವೇದಿಕೆಯಿಂದ ನಡೆಯಲಿರುವ ಈ ಉತ್ಸವದಲ್ಲಿ ಪ್ರದರ್ಶನ ನೀಡಬಯಸುವ ತಂಡಗಳು ಸಾಂಸ್ಕೃತಿಕ ವಿವಿಧ ಪ್ರಕಾರಗಳಾದ ಭರತನಾಟ್ಯ, ನೃತ್ಯರೂಪಕ, ಜನಪದ ನೃತ್ಯ, ಸಮೂಹ ನೃತ್ಯ, ಸಿನಿಮಾ ನೃತ್ಯ, ಮಹಿಳಾ ನೃತ್ಯ, ಗ್ರಾಮೀಣ ನೃತ್ಯಗಳು, ಜನಪದ ಗಾಯನ, ಸುಗಮ ಸಂಗೀತ, ಜಾನಪದ, ತತ್ವಪದ, ಕೋಲಾಟ, ಡೊಳ್ಳುಕುಣಿತ, ದೊಡ್ಡಾಟ, ಬಯಲಾಟ, ವೀರಗಾಸೆ, ಭಜನೆ ಮುಂತಾದ ಪ್ರಕಾರಗಳ ಕಾರ್ಯಕ್ರಮಗಳ ನೃತ್ಯ ಪ್ರದರ್ಶನ ನೀಡಲಿಚ್ಛಿಸುವವರು ೯೫೩೮೮೨೫೧೭೩, ೯೨೪೨೮೬೩೦೫೦, ೯೮೪೫೩೩೮೧೬೦ ದೂರವಾಣಿಗೆ ಸಂರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಉತ್ಸವದ ಸಾಂಸ್ಕೃತಿಕ ಕಾರ್ಯದರ್ಶಿ ವೈ. ಬಿ. ಜೂಡಿ  ತಿಳಿಸಿದ್ದಾರೆ.
Please follow and like us:
error

Related posts

Leave a Comment