ಅಕ್ಟೋಬರ್‌ನಲ್ಲಿ ಟಿವಿ ಸಿನೆಮಾ ಸಾಹಿತ್ಯ ಸಮ್ಮೇಳನಕ್ಕೆ ನಿರ್ಧಾರ.

ಕೊಪ್ಪಳ, ಸೆ. ೬. ಅಕ್ಟೋಬರ್‌ನಲ್ಲಿ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪ್ರಥಮ ರಾಜ್ಯಮಟ್ಟದ ಟಿವಿ ಸಿನೆಮಾ ಸಾಹಿತ್ಯ ಸಮ್ಮೇಳನ ಮತ್ತು ಚಡಚಣದಲ್ಲಿ ಅಂತರಾಷ್ಟ್ರೀಯ ಕಿರು ಚಿತ್ರೋತ್ಸವ ಮಾಡಲು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವಿಶೇಷ ಸಭೆಯಲ್ಲಿ ನಿರ್ಧರಿಸಿತು. ಇಂದು ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದ ಸಭೆಯಲ್ಲಿ ಒಮ್ಮತದಿಂದ ನಿರ್ಧಾಕ್ಕೆ ಬಂದಿದ್ದು, ಸೆಪ್ಟೆಂಬರ್ ೨೦ ರಂದು ಮತ್ತೊಮ್ಮೆ ಸರ್ವ ಪದಾಧಿಕಾರಿಗಳ ಸಭೆಯನ್ನು ಕೊಪ್ಪಳದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಛೇಂಬರನ ಪ್ರಧಾನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ ಸಭೆಗೆ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ, ನಿರ್ಮಾಪಕ ಶಂಕರ ಸುಗತೆ  ವಹಸಿಕೊಂಡು ಮಾತನಾಡಿದರು. ಈ ಸಭೆಯಲ್ಲಿ ಕಳೆದ ತಿಂಗಳು ಕಲಬುರಗಿಯಲ್ಲಿ ಜರುಗಿದ ಸಭೆಯ ನಡವಳಿಗಳನ್ನು ಅನುಮೋದಿಸಲಾಯಿತು ಅದರಂತೆ, ಕಲಬುರಗಿಯಲ್ಲಿ ಛೇಂಬರ್‌ನ ಪ್ರಾದೇಶಿಕ ಕಛೇರಿಯನ್ನು ಆರಂಭಿಸುವದು, ಛೇಂಬರ್‌ನ ನೂತನ ವೆಬ್‌ಸೈಟನ್ನು ಶೀಘ್ರ ಆರಂಭಿಸಿ ಅದರಲ್ಲಿ ಎಲ್ಲಾ ಸದಸ್ಯರ ವಿವರಗಳನ್ನು ದಾಖಲಿಸುವದು, ಆನಲೈನಲ್ಲಿ ಸದಸ್ಯತ್ವ ನೀಡುವದೂ ಸೇರಿದಂತೆ ಸಂಸ್ಥೆಯ ಬೆಳವಣಿಗೆ ಮತ್ತು ಚಲನಚಿತ್ರ ಕಾರ್ಯಗಳಿಗೆ ಶೀಘ್ರ ಚಾಲನೆ ನೀಡುವ ನಿಟ್ಟಿನಲ್ಲಿ ಚರ್ಚಿಸಲಾಯಿತು. ಇಂದು ೫ ಜನ ಸದಸ್ಯತ್ವ ಪಡೆದುಕೊಂಡಿದ್ದು ಸೆಪ್ಟೆಂಬರ್ ೨೦ ರಂದು ಇನ್ನೂ ೫೦ ಜನರನ್ನು ವಿವಿಧ ವಿಭಾಗಗಳಲ್ಲಿ ಸದಸ್ಯತ್ವ ಪಡೆಯಲು ತೀರ್ಮಾನಿಸಲಾಯಿತು. ನವೆಂಬರ್ ನಲ್ಲಿ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಹುಬ್ಬಳ್ಳಿಯಲ್ಲಿ ಆಚರಿಸುವದು, ಅಷ್ಟರಲ್ಲಿ ಉ.ಕ. ಚೇಂಬರ್‌ನಿಂಬ ಹೊಸ ಚಿತ್ರಗಳನ್ನು ಬಿಡುಗಡೆಗೊಳಿಸುವದು ಹಾಗೂ ಉತ್ತರ ಕರ್ನಾಟಕದಲ್ಲಿರುವ ಕಲಾವಿದ, ತಂತ್ರಜ್ಞರನ್ನು ಒಂದೆಡೆ ತಂದು ಸಹಕಾರ ಪ್ರೋತ್ಸಾಹ ನೀ

ಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.  ಸಭೆಯಲ್ಲಿ ಪ್ರಧನ ಕಾರ್ಯದರ್ಶಿ ಮಂಜುನಾಥ ಜಿ. ಗೊಂಡಬಾಳ, ಮಾತನಾಡಿ ಉತ್ತರ ಕರ್ನಾಟಕ ಚಲನಚಿತ್ರ ವಾಣೀಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸುವದು ಪ್ರಯೋಜನವಿಲ್ಲ ಎಂಬ ಅಪಸ್ವರವನ್ನು ಕಿಡಗೇಡಿಗಳು, ನೂತನ ಛೇಂಬರ ಅಸ್ತಿತ್ವದ ಬಗ್ಗೆ ಅಸಹನೆ ಇರುವವರು ಮಾಡುತ್ತಿದ್ದಾರೆ, ಆದರೆ ಛೇಂಬರ್‌ನಿಂದ ಚಿತ್ರ ನಿರ್ಮಾಣಕ್ಕೆ ಬೇಕಿರುವ ಎಲ್ಲಾ ದಾಖಲೆ ಅರ್ಹತೆಗಳು ಇದ್ದು ನಿಸ್ಸಂದೇಹವಾಗಿ ನೂತನ ನಿರ್ಮಾಪಕರು ನೋಂದಣಿ ಮಾಡಿಸಬಹುದು ಮತ್ತು ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡಬಹುದು ಎಂದರು. ಅಲ್ಲದೇ ಸಮ್ಮೇಳವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುವದು, ವಿವಿದ ಪ್ರಕಾರಗಳ್ಲಿ ಚಲನಚಿತ್ರ ಪ್ರಶಸ್ತಿಗಳನ್ನು ನೀಡಲಾಗುವದು ಎಂದರು. ಈ ಸಂದರ್ಭದಲ್ಲಿ ಛೇಂಬರ್ ಖಜಾಂಚಿ ಮಲಕೇಶ ಕೋಟೆ, ಆನಂದ ಹೆಚ್. ಹುಬ್ಬಳ್ಳಿ, ಡಾ|| ಮಹಾಂತೇಶ ಮಲ್ಲನಗೌಡರ, ಮಂಜುನಾಥ ಪೂಜಾರ, ರಂಗನಾಥ ಕೋಳೂರು, ಸುರೇಶ ಕಂಬಳಿ, ಬಸವರಾಜ ಭೋವಿ, ಬಸವರಾಜ ಕೊಪ್ಪಳ, ಡಾ|| ಕೊಟ್ರೇಶ ಎಸ್. ಬಳ್ಳಾರಿ, ಬಾಬಾಸಾಬ, ಶಾಮೀದ ಇತರರು ಇದ್ದರು.

Please follow and like us:
error