ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿ ಬೆಳೆಸಿ

ಹೊಸಪೇಟೆ-ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ ಆಶಯದಂತೆ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಈ ಬಗ್ಗೆ ಅರಿವು ಮೂಡಿಸುವುದು ಅತಿ ಮುಖ್ಯವೆಂದು ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್ ತಿಳಿಸಿದರು.
ಅವರು ಬಿ.ಟಿ.ಆರ್. ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇನ್ನರ್ ವೀಲ್ ಕ್ಲಬ್ ವತಿಯಿಂದ ಶಾಲೆಯ  ಆವರಣದಲ್ಲಿ ನೂತನವಾಗಿ ನಿರ್ಮಿಸಿದ ಶೌಚಾಲಯವನ್ನು  ಕೊ

ಡುಗೆ ಯಾಗಿ ನೀಡಿ ಮಾತನಾಡುತ್ತಾ ಮಕ್ಕಳಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಪರಿಸರ ಕಾಳಜಿ ಬೆಳೆಸಿ ಎಂದು ಕರೆ ನೀಡಿದರು.

ರೋಟರಿ ಹಾಗೂ ಇನ್ನರ್‌ವೀಲ್ ಸಂಸ್ಥೆಗಳು ದಾನಿ ಗಳ ನೆರವಿನಿಂದ ಹಲವಾರು ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಸಮಾಜಮುಖಿ ಯಾಗಿ ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸೈಯದ್ ಮಹ್ಮದ್ ತಿಳಿಸಿದರು.
ಸಮಾಜಕ್ಕೆ ಮಾಡಿದ ದಾನ ಎಂದು ವಿಮುಖವಾಗದು ಅದರ ಎರಡರಷ್ಟು  ದೇವರು ನೀಡುವನು. ಆರೋಗ್ಯವಾದ ದೇಹದಲ್ಲಿ ಮಾತ್ರ ಉತ್ತಮ ಮನಸ್ಸಿರಲು ಸಾಧ್ಯ, ಪರಿಸರದ ಸ್ವಚ್ಚತೆಯಿಂದ ಮಾತ್ರ ಆರೋಗ್ಯ ಇದನ್ನು ಮನಗಾಣಿ, ಮಕ್ಕಳಲ್ಲಿ ಶೌಚಾಲಯದ ಪ್ರಾಮುಖ್ಯತೆಯನ್ನು ತಿಳಿಸಿ, ಶಿಸ್ತು ಮತ್ತು ಸ್ವಚ್ಚತೆಯ ಬಗ್ಗೆ ಗಮನಹರಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ದಾನಿಗಳಾದ ರೋ|ವೇದಮೂರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ೩೧ನೇ ವಾರ್ಡಿನ ನಗರಸಭೆ ಸದಸ್ಯ ರೋಹಿಣಿ, ರೋಟರಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಶ್ರೀನಿವಾಸ್, ಜಂಟಿ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ರಮೇಶ್ ಬಾಬು, ವಿಜಯ ಸಿಂಧಗಿ, ಇನ್ನರ್‌ವೀಲ್ ಕಾರ್ಯದರ್ಶಿ ರೇಖಾಪ್ರಕಾಶ್, ವಿಜಯಾ ಅಗ್ನಿಹೋತ್ರಿ , ಅನ್ನ ಪೂರ್ಣ ಸದಾಶಿವಾ, ಸುನಿತಾ ಕಿಶೋರ್, ರಾಜೇಶ್ವರಿ .ಎ, ವಿದ್ಯಾ ಸಿಂಧಗಿ, ಶಾಲಾ ಎಸ್.ಡಿ .ಎಂ.ಸಿ. ಅಧ್ಯಕ್ಷ ಗೋಪಾಲ, ಉಪಾಧ್ಯಕ್ಷೆ ನಾಗರತ್ನ, ಶಾಲಾ ಶಿಕ್ಷಕರಾದ ನಂದಾದೇವಿ, ಕೋಮಲ, ಅಮಿತ, ಸುಮ, ವೈ.ಜಯಂತಿ ಮಾಲ, ದ್ರಾಕ್ಷಾಯಣಮ್ಮ, ವೆಳ್ಳಾರ ಶೃತಿ, ಪ್ರಕಾಶ, ಮುನೇಶಾಚಾರಿ ಹಾಜರಿದ್ದರು.
ಶೌಚಾಲಯದ ದಾನಿಗಳಾದ ರೋ| ವೇದ ಮೂರ್ತಿ ಹಾಗೂ ಸುಚೇತಾ ಕುಮಾರಿಯವರನ್ನ ಸನ್ಮಾನಿಸಲಾಯಿತು.
ಇನ್ನರ್‌ವೀಲ್ ಕ್ಲಬ್‌ವತಿಯಿಂದ ನಿರ್ಮಿಸಲಾದ ಶಾಲಾ ಶೌಚಾಲಯವನ್ನು ಸಂಸ್ಥೆಯ ಅಧ್ಯಕ್ಷೆ ನಂದಿನಿ ಚಿಕ್ಕ್‌ಮಠ್ ಹಾಗೂ ಕಾರ್ಯದರ್ಶಿ ರೇಖಾ ಪ್ರಕಾಶ್ ದೀಪ ಉದ್ಘಾಟಿಸಿದರು. ರೋಟರಿ ಅಧ್ಯಕ್ಷ ಸೈಯದ್ ಮಹ್ಮದ್, ಶ್ರೀನಿವಾಸರಾವ್, ಕೆ.ಕೃಷ್ಣಮೂರ್ತಿ, ರಮೇಶ್‌ಬಾಬು, ದಾನಿಗಳಾದ ವೇದಮೂರ್ತಿ ಹಾಗೂ ಸುಚೇತ ವೇದಮೂರ್ತಿ ಉಪಸ್ಥಿತರಿರುವರು.

Leave a Reply