ಆರೋಗ್ಯ ಸಂಬಂಧಿತ ಕಾಯಿಲೆಗೆ ಸಹಾಯಧನ : ಅರ್ಜಿ ಆಹ್ವಾನ

 ಕೊಪ್ಪಳ ನಗರಸಭೆಯಿಂದ ಶೇ.೨೨.೭೫ ರ ಎಸ್.ಎಫ್.ಸಿ. ನಿಧಿ ಅನುದಾನದಲ್ಲಿ ಶೇ.೪೦ ರಷ್ಟು ವ್ಯಕ್ತಿ ಸಂಬಂಧಿತ ಕಾರ್ಯಕ್ರಮದಡಿಯಲ್ಲಿ ಅರ್ಹ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ಜನಾಂಗದವರು ಆರೋಗ್ಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವವರಿಗೆ ಆರ್ಥಿಕ ಸಹಾಯಧನವನ್ನು ಒದಗಿಸಲಾಗಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. 
ಪರಿಶಿಷ್ಟ ಜಾತಿಯವರಿಗೆ ಈ ಸೌಲಭ್ಯಕ್ಕಾಗಿ ರೂ.೬೩,೦೦೦/- ಹಾಗೂ ಪ.ಪಂಗಡದವರಿಗೆ ರೂ.೮೨,೦೦೦/- ಕಾಯ್ದಿರಿಸಲಾಗಿದೆ. ಕಾಯಿಲೆಯಿಂದ ಬಳಲುತ್ತಿರುವವರು ಅಗತ್ಯ ದಾಖಲೆಗಳ ಸಮೆತ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. 
ಕಾಯಿಲೆಯಿಂದ ಬಳಲುತ್ತಿರುವವರು ಅರ್ಜಿಯೊಂದಿಗೆ ವೈದ್ಯಾಧಿಕಾರಿಗಳಿಂದ ಪಡೆದ ದೃಢೀಕರಣ ಪತ್ರದ ಮೂಲ ಪ್ರತಿ, ಚಾಲ್ತಿ ಸಾಲಿನ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣಾ ಗುರುತಿನ ಚೀಟಿ, ಆಧಾರ ಕಾರ್ಡ್ ಪ್ರತಿಯನ್ನು ಸಲ್ಲಿಸಬಹುದಾಗಿದೆ. ಎಲ್ಲಾ ದಾಖಲಾತಿ ಪ್ರತಿಗಳಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಣ ಮಾಡಿಸಿರಬೇಕು, ಅರ್ಜಿ ಸಲ್ಲಿಸಲು ಅ.೨೫ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರಸಭೆ ಕಾರ್ಯಾಲಯ ಕೊಪ್ಪಳ ದೂರವಾಣಿ ಸಂಖ್ಯೆ : ೦೮೫೩೯-೨೩೦೦೮೦ ಸಂಪರ್ಕಿಸಬಹುದಾಗಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ. 
Please follow and like us:
error