ಶೈಕ್ಷಣಿಕ ಕೊರತೆಯನ್ನು ಹೊರ ಹಾಕಲಿಕ್ಕೆ ದೂರು ಪೆಟ್ಟಿಗೆಗಳು ಅವಶ್ಯ

 ಕೊಪ್ಪಳ :- ೧೮ ಮಕ್ಕಳ ಮನದಾಳದ ಶೈಕ್ಷಣಿಕ ಕೊರತೆಯನ್ನು ಹೊರ ಹಾಕಲಿಕ್ಕೆ ದೂರು ಪೆಟ್ಟಿಗೆಗಳು ಅವಶ್ಯವಾಗಿವೆ ಎಂದು ಹಿರಿಯ ನ್ಯಾಯವಾದಿ ಸತ್ಯನಾರಣರಾವ್ ಹೇಳಿದರು.s

ಅವರು ನಗರದ ಬನ್ನಿಕಟ್ಟಿ ಸರಕಾರಿ ಪ್ರೌಡಶಾಲೆಯಲ್ಲಿ  ಹಮ್ಮಿಕೊಂಡಿದ್ದ ದೂರು ಪೆಟ್ಟಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ರಾಜ್ಯದಲ್ಲಿ ವಿಧ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಹೆಚ್ಚಾಗಿರುವದು ದುರದೃಷ್ಠಕರ ಸಂಗತಿಯಾಗಿದ್ದು ಮತ್ತು ಶಾಲೆಗಳಲ್ಲಿ ನೇರವಾಗಿ ಶಿಕ್ಷಕರಿಗೆ ನೇರವಾಗಿ ಹೇಳಲಿಚ್ಚಿಸದ ವಿಷಯಗಳ ಬಗ್ಗೆ ದೂರು ಪೆಟ್ಟಿಗೆಯಲ್ಲಿ ದೂರು ದಾಖಲಿಸಿ ತಮ್ಮ ಸಮಸ್ಯಗಳನ್ನು ಬಗೆಹರಿಸಿಕೊಳ್ಳಬಹುದು ಮತ್ತು ಶಾಲೆಯ ಅಭಿವೃದ್ದಿಗೆ ಪೂರಕವಾದ ಸಲಹೆಗಳನ್ನು ನೀಡಲು ಅನುಕೂಲವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಮಾತನಾಡುತ್ತ ಈ ಶಾಲೆಯಲ್ಲಿ ದೂರು ಸಲ್ಲಿಸಲಿಕ್ಕೆ ಸಮಸ್ಯಗಳ ಪ್ರಮಾಣ ತುಂಬಾ ಕಡಿಮೆ ಇದೆ ಇದಕ್ಕೆ ಕಾರಣ ಈ ಶಾಲೆಯ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಪರಮಾನಂದ ಯಾಳಗಿಯವರು ಈ ಶಾಲೆಯ ಅಭಿವೃದ್ದಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದಾರೆ ಸಾಮಾನ್ಯವಾಗಿ ಪತ್ರಕರ್ತರು ಶಾಲೆಯ ಅಭಿವೃದ್ದಿ  ಸಮಿತಿಯಲ್ಲಿ ಇರುವದಿಲ್ಲ ಆದರೆ ಇವರು ಪತ್ರಕರ್ತರಾಗಿರುವದರಿಂದ ಇವರಿಗೆ ಶೈಕ್ಷಣಿಕ ಅಭಿವೃದ್ದಿ ಬಗ್ಗೆ ತುಂಬ ಕಾಳಜಿ ಇದೆ ಈ ಶಾಲೆ ಆರಂಭವಾಗಿ ಕೆಲವೇ ವರ್ಷಗಳಾಗಿದ್ದರು ಉತ್ತಮ ಕೊಠಡಿಗಳು  ಉತ್ತಮ ಗ್ರಂಥಾಲಯ ಮಕ್ಕಳಿಗೆ ಅಚ್ಚುಕಟ್ಟಾದ ಸಮವಸ್ತ್ರ ಹೊಂದುವಂತೆ ಮಾಡಿದ್ದಾರೆ ಈಗಾಗಿ ಈ ಶಾಲೆ ಉಳಿದ ಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಪರಮಾನಂದ ಯಾಳಗಿಯವರು ಮಾತನಾಡಿ ದೇಶದಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ವಿಧ್ಯಾರ್ಥಿನಿಯರ ಮೇಲೆ ಹಾಗೂ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಮಾನಸಿಕ ಕಿರುಕುಳ ಇತ್ಯಾದಿ ಪಕ್ರರಣಗಳು ಕಂಡುಬಂದ ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ  ದೂರು ಪೆಟ್ಟಿಗೆ  ಮತ್ತು ಸಿ.ಸಿ. ಕ್ಯಾಮರಗಳನ್ನು ಅಳವಡಿಸಬೇಕು ಎಂದು ಆದೇಶ ಜಾರಿಗೆ ತಂದಿದ್ದು ವಿಧ್ಯಾರ್ಥಿಗಳು ಇದರ ಸದುಪುಯೋಗ ಪಡಿಸಿಕೊಂಡು ಶಾಲೆಯ ಮಕ್ಕಳು ತಮ್ಮ ತೊಂದರೆಗಳನ್ನು ಮತ್ತು ಶಾಲೆಯ ಅಭಿವೃದ್ದುಗಾಗಿ ತಮ್ಮ ಸಲಹೆ ಸೂಚನೆಗಳನ್ನು ಈ ಪೆಟ್ಟಿಗೆಯಲ್ಲಿ ಹಾಕಿದರೆ ಅವುಗಳ ಈಡೇರಿಕೆಗಾಗಿ ಪ್ರತಿ ಶನಿವಾರಕೊಮ್ಮೆ ಸಮಿತಿಯ ಸದಸ್ಯರು ಪೆಟ್ಟಿಗೆ ತೆರೆದು ದೂರುಗಳನ್ನು  ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಶಾಂತಾದೇವಿ ಹಿರೇಮಠ, ಪುಷ್ಪಲತಾ ಏಳುಭಾವಿ, ನಿರ್ಮಾಲಾ ಬಳ್ಳೂಳ್ಳಿ, ಲಲಿತಾ ಅಗಡಿ, ಪ್ರಭಾರಿ ಮುಖ್ಯೋಪಾದ್ಯಯರಾದ ತಾಹೇರಾಬೇಗಂ, ಮಂಜುಳಾ ನಾಲವಾಡ, ಶೈಲಜಾ ಎಚ್, ಪತ್ರಕರ್ತರಾದ ಹುಸೇನಪಾಸ, ರಾಮರಡ್ಡೆಪ್ಪ, ಉಪಸ್ಥಿತರಿದ್ದರು. ಜಯರಾಜ ಭೂಸದ ಕಾರ್ಯಕ್ರಮ ನಿರೂಪಿಸಿದರೆ, ವೀರಯ್ಯ ಒಂಟಿಗೊಡಿಮಠ, ಸ್ವಾಗಿಸಿದರು ಗೋಪಾಲರಾವ್ ಗುಡಿ,  ಕೊನೆಯಲ್ಲಿ ವಂದಿಸಿದರು.
Please follow and like us:
error

Related posts

Leave a Comment