ಭೂ ಸ್ವಾಧೀನ ಮಸೂದೆಯನ್ನು ಕೈಬಿಡಲು ಒತ್ತಾಯಿಸಿ ಏಪ್ರಿಲ್ ೯ ರಂದು ರಾಜ್ಯ ಮಟ್ಟದ ರ‍್ಯಾಲಿ

ದೇಶಿ ಮತ್ತು ವಿದೇಶಿ ಬಹುರಾಷ್ಟ್ರೀಯ ಕಾರ್ಪೊರೇಟ್ ಉದ್ಯಮಿಗಳಿಗೆ ಮತ್ತು ಭೂ ಮಾಫಿಯದಲ್ಲಿ ತೊಡಗಿರುವ ಹಗಲುಗಳ್ಳರಿಗೆ ರೈತರ ಭೂಮಿಯನ್ನು ಮನಬಂದಂತೆ ಧಾರೆ ಎರೆಯುವ ಹೀನ ಹುನ್ನಾರದಿಂದ ಕೇಂದ್ರ ಸರ್ಕಾರವು ಸಂಸತ್ತಿನ ಗಮನಕ್ಕೂ ತರದೇ ಅಧಿವೇಶನ ಮುಗಿದ ಐದೇ ದಿನಗಳಲ್ಲಿ ಭೂ ಸ್ವಾಧೀನ ಕಾಯ್ದೆ ೨೦೧೩ಕ್ಕೆ  ರೈತ-ಕೃಷಿಕಾರ್ಮಿಕರಿಗೆ ಮಾರಕವಾಗುವಂತಹ ಪ್ರಮುಖ ತಿದ್ದುಪಡಿಗಳನ್ನು ಮಾಡಿ ಕಡು ರೈತವಿರೋಧಿಯಾದ ಸುಗ್ರೀವಾಜ್ಞೆಯನ್ನು ಅತ್ಯಂತ ಅಪ್ರಜಾಸತ್ತಾತ್ಮಕವಾಗಿ ಜಾರಿಗೊಳಿಸಿದೆ. ದೇಶಾದ್ಯಂತ ನಮ್ಮ ಸಂಘಟನೆ, ರೈತ-ಕೃಷಿಕಾರ್ಮಿಕ ಸಂಘಟನೆ(ಆರ್.ಕೆ.ಎಸ್)ಯೂ ಸೇರಿದಂತೆ ವಿವಿಧ ರೈತ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಪ್ರಜ್ಞಾವಂತ ಜನತೆ ಬಿ.ಜೆ.ಪಿ. ಸರ್ಕಾರದ ಈ ರೈತ ವಿರೋಧಿ ನಡೆಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಆದ್ದರಿಂದ ಅದೇ ಸುಗ್ರೀವಾಜ್ಞೆಗೆ ಸ್ವಲ್ಪ ಸುಣ್ಣ ಬಣ್ಣ ಬಳಿದು ಭೂ ಸ್ವಾಧೀನ ಕಾಯ್ದೆ ಮಸೂದೆ ಎಂದು ಕರೆದು ಲೋಕಸಭೆಯಲ್ಲಿ ಅಂಗೀಕರಿಸಿದ್ದಾರೆ. 
ಇದರ ಅಪಾಯದ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಕೆಎಸ್ ಹಳ್ಳಿಗಳಲ್ಲಿ ಮತ್ತು ನಗರ ಪ್ರದೇಶಗಳ ಬಡವರಲ್ಲಿ ವ್ಯಾಪಕ ಪ್ರಚಾರ ಮಾಡುವ ಸಲುವಾಗಿ ಜೀಪ್‌ಜಾಥಾ, ಕರಪತ್ರ ಹಂಚುವಿಕೆ, ಬೀದಿನಾಟಕ ಮುಂತಾದ ಎಲ್ಲಾ ಮಾರ್ಗಗಳನ್ನು ಬಳಸಿಕೊಂಡು ನಂತರ ಸುಗ್ರೀವಾಜ್ಞೆಯನ್ನು ಕೈಬಿಡುವಂತೆ ಆಗ್ರಹಿಸಿ ದಿನಾಂಕ ೯.೪.೨೦೧೫ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.
 ಕೊಪ್ಪಳ ಜಿಲ್ಯಾಧ್ಯಂತ ೫೦ ಕ್ಕೂ ಹೆಚ್ಚು ಕಳ್ಳಿ ಗಳಲ್ಲಿ ಗ್ರಾಮ ಸಭೆ ಗಳನ್ನು ಮಾಡಲಾಗಿದೆ. ಮತ್ತು ಮಸೂದೆಯ ಬಗ್ಗೆ ಗ್ರಾಮ ಸಬೆಗಳ ಮೂಲಕ ರೈತರಲ್ಲಿ ಭೂ ಸ್ವಾಧಿನ ಕಾಯ್ದೆ ಬಗ್ಗೆ ಅರಿವು ಮೂಡಿಸಲಾಗಿದೆ. ಸುಮಾರ ೨೦೦ ಕ್ಕೂ ಅಧಿಕ ಜನರ ಈ ಪ್ರತಿಭಟನೆಯಲ್ಲಿ ಭಾಗವಹಿಸು ನಿರೀಕ್ಷೆ  ಇದೆ. ಪ್ರತಿಭಟನೆಯಲ್ಲಿ ಬಾಗವಹಿಸಲು ಇಚ್ಚಿಸುವವರು   ಮಾರುತಿ ಎನ್ ಹೊಸಮನಿ ಜಿಲ್ಲಾ ಸಂಚಾಲಕರು ಆರ್ ಕೆ ಎಸ್ ಕೊಪ್ಪಳ ಮೋ:೯೪೮೦೭೫೬೬೩೦ ಇವರಿಗೆ ಸಂಪರ್ಕಿಸಲು ಕೊರಲಾಗಿದೆ.

Related posts

Leave a Comment