ಶ್ರೀಮತಿ ಪಾರ್ವತೆಮ್ಮ ಚನ್ನ ಒಡೆಯರ ಮಠ ಇವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ

 ಶ್ರೀ ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಟೆನ್ನಿಸ್ ಬಾಲ್ ಟೂರ್ನಾಮೆಂಟ್‌ನ್ನು ಹಮ್ಮಿಕೊಳ್ಳಲಾಗಿತ್ತು. ಈ ಟೂರ್ನಾಮೆಂಟ್‌ನ್ನು ಡೆಡ್ಲಿಬಾಯ್ಸ್ ಟೀಮ್‌ನ ವತಿಯಿಂದ ನಡೆಸಲಾಯಿತು. ಶ್ರೀಮತಿ ಪಾರ್ವತೆಮ್ಮ ಚನ್ನ ಒಡೆಯರ ಮಠ ಇವರ ಸ್ಮರಣಾರ್ಥವಾಗಿ ಈ ಪಂದ್ಯವು ೧೨ ಓವರಗಳ ಪಂದ್ಯವಾಗಿತ್ತು, ಇದರಲ್ಲಿ ೨ ಟೀಮುಗಳು ಫೈನಲ್ ಪ್ರವೇಶಿಸಿದವು,                                      ಅವು ೧ ಡೆಡ್ಲಿ ಬಾಯ್ಸ್ ಹಾಗೂ ೨ನೆ ಟೀಮು ರಾಕ್ಸ್ ಸ್ಟಾರ್ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಡ್ಲಿ ಬಾಯ್ಸ್ ತಂಡವು ೮೨ರನ್ ಗಳನ್ನು ಗಳಿಸಿತು, ಇದರ ಉತ್ತೆರವಾಗಿ ರಾಕ್ಸ್ ಸ್ಟಾರ್ ತಂಡವು ೧೧ ಓವರಗಳಲ್ಲಿ ೮೩ರನ್ನ ಗಳಿಸಿರುವುದರ ಜೊತೆಗೆ ಈ ಪಂದ್ಯದಲ್ಲಿ ಜಯಗಳಿಸಿತು. ಅಂತಿಮ ಸಮಾರೋಪ ಕಾರ್ಯಕ್ರಮದಲ್ಲಿ ಅಥಿತಿಗಾಳಗಿ ನಗರಸಭೆಯ ಮಾಜಿ ಸದಸ್ಯ ಅಜ್ಜಪ್ಪಸ್ವಾಮಿ ಚನ್ನ ಓಡೆಯರ್ ಮಠ, ಹಾಗೂ ಅಮಜದ್ ದಾದ್ಗಾರ್, ಮೌಲಾಹುಸೇನ ವರ್ದಿ, ಇಸ್ಮಾಯಿಲ್ ಅgಗಂಜಿ, ಸಾಧಿಕ್‌ಹುಸೇನ್ ವಾಲಿಕಾರ, ರವಿಕುಮಾರ ಹಡಪದ, ಆಜಮ್ ಕರ್ಕಿಹಳ್ಳಿ, ನೈಮ್ ಕತೀಮ್, ಗವಿಸಿದ್ದ, ಹಾಗೂ ಇತರರು ಭಾಗವಹಿಸಿದ್ದರು ಎಂದು  ಸಾದಿಕ್‌ಹುಸೇನ್  ತಿಳಿಸಿದ್ದಾರೆ.

Leave a Reply