ಕೊಪ್ಪಳದ ನೆಲ ಸತ್ವಯುತವಾಗಿದೆ – ಹೆಚ್.ಎಸ್. ಪಾಟೀಲ.

ಕೊಪ್ಪಳ-13- ಕೊಪ್ಪಳದ ನೆಲ ಸತ್ವಯುತವಾಗಿದ್ದು ಕವಿಗಳ ಮೂಲಕ ಸಾಹಿತ್ಯದ ಫಸಲು ಹೊರಬರುತ್ತಿದೆ. ಹಿಂದೆ ಪರಿಮಳಬಾಯಿ ಮುದೋಳರವರು ಮಾತ್ರ ಮಹಿಳೆಯರ ಪ್ರತಿನಿಧಿಯಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಇಂದು ಕೊಪ್ಪಳದಲ್ಲಿ ವಿಜಯಲಕ್ಷ್ಮಿ ಕೊಟಗಿ, ವಿಮಲಾ ಇನಾಮದಾರ, ಅನಸೂಯ ಜಾಗಿರದಾರ, ಸ್ನೇಹಲತಾ ಜೋಷಿ, ಶಾಂತಾದೇವಿ ಹಿರೇಮಠ, ಪುಷ್ಪಲತಾ ಏಳುಬಾವಿ, ಅರುಣಾ ನರೇಂದ್ರರಂತಹ ಕವಯತ್ರಿಯರು ಅನೇಕ ಕೃತಿಗಳನ್ನು ಹೊರತಂದು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದು ಕೊಪ್ಪಳಕ್ಕೆ ಕೀರ್ತಿ ತರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ಎಸ್. ಪಾಟೀಲ ಹೇಳಿದರು.  ಅವರು ರವಿವಾರ ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಸ್ನೇಹಸ್ಪರ್ಶ ಪ್ರಕಾಶನ ಹಾಗೂ ವಿರಂಚಿ ಕಲಾ ಬಳಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಜಯಲಕ್ಷ್ಮಿ ಕೊಟಗಿರವರ ಕೃತಿಗಳಾದ ಕೆಂಡದ ಉಡಿಯಕ್ಕಿ ಹಾಗೂ ಮುತ್ತಿನಕುಂಚಿಗೆ ಲೋಕಾರ್ಪಣೆ ಹಾಗೂ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ಲಿಂಗಣ್ಣ ಮೇಟಿಯವರ ಅಭಿನಂದನಾ ಗ್ರಂಥ ಸದಭಿರುಚಿಯ ಸರದಾರ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ, ವಿಜಯಲಕ್ಷ್ಮಿ ಕೊಟಗಿಯವರ ತಂದೆ ಷಣ್ಮುಖಯ್ಯ ಅವರು ದೊಡ್ಡ ಓದುಗರಾಗಿದ್ದರು. ಅವರು ಬರೆದಿದ್ದರೆ ದೊಡ್ಡ ಲೇಖಕರಾಗುತ್ತಿದ್ದರು. ವಿಜಯಲಕ್ಷ್ಮಿ ಕೊಟಗಿಯವರು ಬಹಳ ಸಮರ್ಥವಾಗಿ ಕಾವ್ಯವನ್ನು ರಚಿಸಿದ್ದಾರೆ. ಇವರ ಕಾವ್ಯ ಕೃಷಿ ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರಲ್ಲದೆ ಹನುಮಂತಪ್ಪ ಅಂಡಗಿ ಚಿಲವಾಡಗಿ ಸಂಪಾದಿತ ಲಿಂಗಣ್ಣ ಮೇಟಿಯವರ ಅಭಿನಂದನಾ ಗ್ರಂಥ ಸದಭಿರುಚಿಯ ಸರದಾರ ಇಂದು ಬಿಡುಗಡೆಯಾಗಿರುವುದು ಬಹಳ ಸಂತಸ ತಂದಿದೆ. ಲಿಂಗಣ್ಣ ಮೇಟಿಯವರು ಬಹಳ ಸಂಕೋಚದ ಮನುಷ್ಯ. ಇವರು ಕೊಪ್ಪಳದಲ್ಲಿ ಜರುಗಿದ ಅಖಿಲ ಭಾರತ ೬೨ ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮ ಹಳೇ ದಿನಪತ್ರಿಗಳ ವಿಶೇಷ ವರದಿಗಳ ಚಿತ್ರ ಪ್ರದರ್ಶನ ಏರ್ಪಡಿಸಿದ್ದರು ಎಂದರು.
ಗಂಗಾವತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಜಾಜಿ ದೇವೇಂದ್ರಪ್ಪ ಕೆಂಡದ ಉಡಿಯಕ್ಕಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ, ವಿಜಯಲಕ್ಷ್ಮಿ ಕೊಟಗಿಯವರ  ಕೃತಿ ಸತ್ವಯುತವಾಗಿದೆ. ಇವರು ಪದ ಸಂಪತ್ತನ್ನು ಗಳಿಸಿಕೊಂಡು ಕವಿತೆಗಳಿಗೆ ವರ್ತಮಾನದ ನೆಲೆಗಳನ್ನು ಒದಗಿಸಿದ್ದಾರೆ ಎಂದರು.  ಕೊಪ್ಪಳದ ಹಿರಿಯ ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿಯವರು ಮುತ್ತಿನಕುಂಚಿಗೆ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡುತ್ತಾ, ಇವರ ಕಾವ್ಯಗಳಲ್ಲಿ ಮಕ್ಕಳ ಮನ ಗೆಲ್ಲುವಂತಹ ಪ್ರಾಸ, ಲಯ, ಗೇಯತೆಯನ್ನು ಕಾಣಬಹುದು ಎಂದರು.
ಭಾಗ್ಯನಗರದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ರಾಜಶೇಖರ ಪಾಟೀಲ ಅವರು ಸದಭಿರುಚಿಯ ಸರದಾರ ಬಿಡುಗಡೆಗೊಳಿಸಿ ಮಾತನಾಡುತ್ತಾ, ಕೊಪ್ಪಳದಲ್ಲಿ ಹನುಮಂತಪ್ಪ ಅಂಡಗಿ ಚಿಲವಾಡಗಿ ಅವರ ಪರಿಶ್ರಮದಿಂದಾಗಿ ಇವರ ಸಂಪಾದಕತ್ವದಲ್ಲಿ ಎಲೆಮರೆಯ ಕಾಯಿಯಂತಿದ್ದ ಹಲವಾರು ಪ್ರತಿಭೆಗಳನ್ನು ಗುರುತಿಸಿ ಅಭಿನಂದನಾ ಗ್ರಂಥ ಹೊರತರುತ್ತಿರುವುದು ಅಭಿನಂದನಾರ್ಹವಾಗಿದೆ. ಲಿಂಗಣ್ಣ ಮೇಟಿಯವರನ್ನು ಕುರಿತು ಇವರ ಗೆಳೆಯರು, ಸಹೋದ್ಯೋಗಿಗಳು, ಶಿಷ್ಯರು ಇವರ ಸಂಗ್ರಹದ ಕುರಿತು ಅಭಿಮಾನದ ಮಾತುಗಳ
ಅಕ್ಷತಾ ಬಣ್ಣದಭಾವಿ ಪ್ರಾರ್ಥಿಸಿದರು. ಅನುಸೂಯ ಜಾಗಿರದಾರ ನಿರೂಪಿಸಿದರು. ಅರುಣಾ ನರೇಂದ್ರ ಸ್ವಾಗತಿಸಿದರು. ವಿರಂಚಿ ಕಲಾ ಬಳಗದ ಉಪಾಧ್ಯಕ್ಷರಾದ ಮಲ್ಲಿಕಾರ್ಜುನಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುಷ್ಪಲತಾ ಏಳುಭಾವಿ ವಂದಿಸಿದರು.

ನ್ನಾಡಿದ್ದಾರೆ. ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ      ಡಾ. ವಿ.ಬಿ. ರಡ್ಡೇರ, ಹಿರಿಯ ಸಾಹಿತಿಗಳಾದ ಶಾಂತಾದೇವಿ ಹಿರೇಮಠ, ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರಾದ ಶೇಖರಗೌಡ ಮಾಲಿಪಾಟೀಲ, ಹಿರಿಯ ಬಂಡಾಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ವಿರಂಚಿ ಕಲಾ ಬಳಗದ ಅಧ್ಯಕ್ಷರಾದ ಈಶ್ವರ ಹತ್ತಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Please follow and like us:
error