ಚುನಾವಣೆ ವೆಚ್ಚ ವೀಕ್ಷಕರ ನೇಮಕ : ಮೈಕೆಲ್ ಜರಾಲ್ಡ್

 ಕೊಪ್ಪಳ ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ಭಾರತ ಚುನಾವಣಾ ಆಯೋಗ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ವೃಂದದ ಆದಾಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮೈಕೆಲ್ ಜರಾಲ್ಡ್ ಅವರನ್ನು ನೇಮಿಸಿದ್ದು, ಈಗಾಗಲೆ ಇವರು ಕೊಪ್ಪಳಕ್ಕೆ ಆಗಮಿಸಿದ್ದಾರೆ.
  ಜಿಲ್ಲಾಡಳಿತ ಭವನದಲ್ಲಿನ ಉದ್ಯೋಗ ವಿನಿಮಯ ಕಚೇರಿಯಲ್ಲಿ ಇವರ ತಾತ್ಕಾಲಿಕ ಕಚೇರಿ ಪ್ರಾರಂಭವಾಗಿದ್ದು, ಇವರು ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಮಾಡಿರುತ್ತಾರೆ.  ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಅಥವಾ ಅಕ್ರಮದ ಬಗ್ಗೆ ಮಾಹಿತಿ ಇದ್ದಲ್ಲಿ, ಸಾರ್ವಜನಿಕರು ಇವರ ಮೊಬೈಲ್ ಸಂಖ್ಯೆ: ೯೪೮೧೫೬೭೧೪೭ ಕ್ಕೆ ಕರೆ ಮಾಡಿ ಚುನಾವಣಾ ವೆಚ್ಚ ವೀಕ್ಷಕರಿಗೆ ನೀಡಬಹುದಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ   ತಿಳಿಸಿದೆ

.

Leave a Reply