ಕೊಪ್ಪಳ ಜಿಲ್ಲಾ ಕಾನ್ಫಡರೇಷನ್ ಆಫ್ ಇಂಡಸ್ಟ್ರೀಜ್ ಆಂಡ್ ಕಾಮರ್ಸ :ಅಧ್ಯಕ್ಷರಾಗಿ ಶ್ರೀನಿವಾಸ್ ಗುಪ್ತಾ , ಕಾರ್ಯದರ್ಶಿಯಾಗಿ ಶಿವಯೋಗಪ್ಪ ಎಸ್.ಬಿ. ಆಯ್ಕೆ


ಕೊಪ್ಪಳ ಜಿಲ್ಲಾ ಕಾನ್ಫಡರೇಷನ್ ಆಫ್ ಇಂಡಸ್ಟ್ರೀಜ್ ಆಂಡ್ ಕಾಮರ್ಸ ಅಧ್ಯಕ್ಷರಾಗಿ ಉಧ್ಯಮಿ ಶ್ರೀನಿವಾಸ್ ಗುಪ್ತಾ ಆಯ್ಕೆಯಾಗಿದ್ದಾರೆ .
ಕಾರ್ಯದರ್ಶಿಯಾಗಿ ಶಿವಯೋಗಪ್ಪ ಎಸ್.ಬಿ. ಆಯ್ಕೆಯಾಗಿದ್ದಾರೆ.
ಕೊಪ್ಪಳದಲ್ಲಿ ಇತ್ತೀಚೆಗೆ ಹಲವಾರು ಪ್ರಗತಿಪರ ವಾಣಿಜ್ಯೋಧ್ಯಮಿಗಳ ಪ್ರಯತ್ನದಿಂದ ರಚನೆಗೊಂಡ ಕೊಪ್ಪಳ ಜಿಲ್ಲಾ ಕಾನ್ಫಡರೇಷನ್ ಆಫ್ ಇಂಡಸ್ಟ್ರೀಜ್ ಆಂಡ್ ಕಾಮರ್ಸ ಕೊಪ್ಪಳ ಸಂಸ್ಥೆ ಪ್ರಮುಖವಾಗಿ ಕೊಪ್ಪಳ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯೋಧ್ಯಮಿಗಳ ಹಿತರಕ್ಷಣೆಯ ಉದ್ಧೇಶವನ್ನು ಹೊಂದಿದೆ. ಜೊತೆಗೆ ಅವರು ತಮ್ಮ ವ್ಯವಹಾರದಲ್ಲಿ ಅವಶ್ಯಕ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಸಹಕರಿಸುವ ಜೊತೆಗೆ ಕೊಪ್ಪಳ ಜಿಲ್ಲೆಯ ಜನರ ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಯ ಗುರಿಯನ್ನೂ ಹೊಂದಿದೆ.

Leave a Reply