ಕೊಪ್ಪಳ ತಾಲೂಕ ಮಟ್ಟದ ದಸರಾ ಕ್ರೀಡಾಕೂಟ

  ಕೊಪ್ಪಳ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆಶ್ರಯದಲ್ಲಿ ೨೦೧೩-೧೪ ನೇ ಸಾಲಿನ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ದಿನಾಂಕ ೦೭-೦೯-೨೦೧೩ ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೯.೩೦ ಗಂಟೆಗೆ ಜರುಗಿಸಲಾಗುವದು ಎಂದು ಸಹಯಕ ಯುವಜನ ಸೇವಾ ಮತ್ತು ಕ್ರಿಡಾಧಿಕಾರಿ ಎನ್.ಎಸ್. ಪಾಟೀಲ್ ತಿಳಿಸಿದ್ದಾರೆ. 
ಪುರುಷರಿಗೆ ಸ್ಪರ್ಧೆಗಳು : ಈ ಕ್ರೀಡಾಕೂಟದಲ್ಲಿ ಪುರುಷರಿಗೆ ಅಥ್ಲೆಟಿಕ್ಸ್ ( ೧೦೦ ಮೀ, ೨೦೦, ೪೦೦, ೮೦೦, ೧೫೦೦ ಹಾಗೂ ೫೦೦೦ ಮೀ ಓಟ ) , ಉದ್ದ ಜಿಗಿತ , ಎತ್ತರ ಜಿಗಿತ , ತ್ರಿವಿಧ ಜಿಗಿತ, ಗುಂಡು ಎಸೆತ , ಚಕ್ರ ಎಸೆತ , ಬಲ್ಲೆ ಎಸೆತ, ೪*೧೦೦ರೀಲೇ, ೪*೪೦೦ ರೀಲೆ, ವ್ಹಾಲಿಬಾಲ್ , ಕಬ್ಬಡ್ಡಿ , ಖೋ ಖ್ಖೋ , ಬ್ಯಾಡ್ಮಿಂಟನ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು . 
ಮಹಿಳೆಯರಿಗೆ ಸ್ಪರ್ಧೆಗಳು: ಅದೇ ರೀತಿಯಾಗಿ ಮಹಿಳೆಯರಿಗೆ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ( ೧೦೦ ಮೀ, ೨೦೦, ೪೦೦, ೮೦೦, ೧೫೦೦ ಹಾಗೂ ೩೦೦೦ ಮೀ ಓಟ ) , ಉದ್ದ ಜಿಗಿತ , ಎತ್ತರ ಜಿಗಿತ , ತ್ರಿವಿಧ ಜಿಗಿತ, ಗುಂಡು ಎಸೆತ , ಚಕ್ರ ಎಸೆತ , ಬಲ್ಲೆ ಎಸೆತ, ೪*೧೦೦ ರೀಲೇ, ೪*೪೦೦ ರೀಲೆ, ವ್ಹಾಲಿಬಾಲ್ , ಕಬ್ಬಡ್ಡಿ , ಖೋ ಖ್ಖೋ , ಬ್ಯಾಡ್ಮಿಂಟನ್ ಹಾಗೂ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು,ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಮತ್ತು ಗುಂಪು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದವರು ಮಾತ್ರ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಲು ಅರ್ಹರಿರುತ್ತಾರೆ. ಕ್ರೀಡಾಕೂಟದಲ್ಲಿ ಭಾಗವಹಿಸಲಿಚ್ಚಿಸುವ ಕ್ರಿಡಾಪಟುಗಳು ದಿನಾಂಕ : ೦೬-೦೯-೨೦೧೩ ರೊಳಗಾಗಿ ತಮ್ಮ ಹೆಸರನ್ನುನೊಂದಾಯಿಸಿಕೊಳ್ಳಬೇಕು. ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆ ಇರುವುದಿಲ್ಲಿ . ಹೆಚ್ಚಿನ ಮಾಹಿತಿಗಾಗಿ ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಎನ್.ಎಸ್. ಪಟೀಲ್ ದೂರವಾಣಿ ಸಂಖ್ಯೆ : ೯೯೮೦೮೫೨೭೩೫ ಗೆ ಹಾಗೂ ಸಿ.ಎ.ಪಾಟೀಲ್ ವ್ಹಾಲಿಬಾಲ್ ತರಬೇತುದಾರರು ಸೆಲ್ : ೯೩೪೨೮೭೯೩೫ ಇವರನ್ನು ಸಂಪರ್ಕಿಸಲು ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ಕೊಪ್ಪಳ  ತಿಳಿಸಿರುತ್ತಾರೆ.  
Please follow and like us:
error