ರಂಗಭೂಮಿಯು ಭವಿಷ್ಯ ರೂಪಿಸುವ ದೀವಿಗೆ- ಮಂಜುನಾಥ.

ವಿದ್ಯಾರ್ಥಿಗಳ ದಿಸೆಯಲ್ಲೇ ರಂಗಚಟುವಟಿಗಳಲ್ಲಿ ತೊಡಗಿಸಿಕೊಂಡರೆ ಅದು ನಿಮ್ಮ ಭವಿಷ್ಯವನ್ನು ಉತ್ತುಂಗೇರಿಸಲು ಸಹಾಕವಾಗುತ್ತದೆ ಎಂದು ಕರ್ನಾಟಕ ನಾಟಕ ಅಕಾಡಮಿ ಹಾಗು ಸರ್ಕಾರಿ ಪದವಿ ಪೂರ್ವಕಾಲೇಜು ಬೇವೂರು ಅಯೋಜಿಸಿದ ಕೊಪ್ಪಳ ಜಿಲ್ಲಾ ರಸಗ್ರಹಣ ಶಿಬಿರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾ

ಖೆಯ ನಿರೂಪಣಾ ಅಧಿಕಾರಿ ಮಂಜುನಾಥ ಅವರು  ಮಾತನಾಡುತ್ತಾ ನಾನೂ ಕೂಡ ಕಷ್ಟದಲ್ಲೇ ನೊಂದು ಬೆಂದು ವಿದ್ಯಾಭ್ಯಾಸ ಮಾಡಿ ಈಗ ಅಧಿಕಾರಿಯಾಗಿದ್ದೇನೆ. ನನ್ನ ಪ್ರಜ್ಞೆ ಅರಿವಿಗೆ ರಂಗಭೂಮಿಯೇ ಕಾರಣ ಎಂದರು. ಶಿಬಿರದ ಉದ್ಘಾಟನೆ ಮಾಡಿದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಅವರು ಮಾತನಾಡುತ್ತಾ ಅನಾದಿ ಕಾಲದಿಂದಲೂ ರಂಗಭುಮಿ ತನ್ನ ಛಾಪನ್ನು ಉಳಿಸಿಕೊಂಡು ಬಂದಿದೆ.ಎಂತ ತಂತ್ರಜ್ಞಾನ ,ವಿದ್ಯುನ್ಮಾನ ಬಂದರೂ ರಂಗಭುಮಿಯು ನೀರಿನ ತೊರೆಯಂತೆ ಹರಿಯುತ್ತಿರುತ್ತ ಎಂದರು. ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಪ್ರಸ್ತಾವಿಕವಾಗಿ ಮಾತಾನಾಡುತ್ತಾ  ಇಂದಿನ ಶಿಕ್ಷಣ ರೋಬೋಗಳನ್ನಾಗಿ ಪರಿವರ್ತಿಸುತ್ತಿದೆ ಮಾನವೀಯತೆ, ಮನುಷ್ಯತ್ವದ ಆಹಿಂಸಾ ಜನ್ಯಗಳನ್ನು ಕಲಿಸುವಲ್ಲಿ ನಪಾಸುಗೊಂಡಿವೆ ರಂಗಕ್ರಿಯೆಗಳ ಮೂಲಕ ಬೌದ್ಧಿಕ ಸ್ತರಗಳು ಅರಳಿಕೊಳ್ಳುತ್ತವೆ ಎಂದರು.ರಂಗನಟರಾದ ಬಸವರಾಜ್ ಕರುಗಲ್ಲು ವಿದ್ಯಾರ್ಥಿಗಳಿಗೆ ರಂಗಭೂಮಿಯ ವಿವಿದ ಆಯಾವುಗಳನ್ನು ವಿವಿದ ಮಜಲುಗಳನ್ನು ತಿಳಿಸಿಕೊಟ್ಟರು. ನಾಟಕಕಾರರಾದ ಶರತ್ ಹೆಗ್ಡೆ ಕಡ್ತಲ ಅವರು ನಾಟಕ ರಚನೆಯ ಕುರಿತು ಮಾತನಾಡಿದರೆ ಶೀಲಾ ಹಾಲ್ಕುರಿಕೆ ರಂಗಗೀತೆಗಳನ್ನು ಹೇಳಿಕೊಟ್ಟರು. ಕಾಲೇಜಿನ ಪ್ರಚಾರ್ಯರಾದ ಜಿಎಮ್ ಭುಸನೂರಮಠ ಅಧ್ಯಕ್ಷತೆ ವಹಿಸಿದ್ದರು ಡಾ ಮಹಾತೇಶ ಮಲ್ಲನಗೌಡರ ಅತಿಥಿಗಳಾಗಿ ಭಾಗವಿಹಿಸಿದ್ದರು.ಬೇವೂರಿನಸರ್ಕಾರಿ ಪದವಿ ಪೂರ್ವಕಾಲೇಜಿನ ಎಲ್ಲ ಉನ್ಯಾಸಕರು ಮತ್ತು ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಉತ್ಸಹದಿಂದ ಭಾಗವಹಿಸಿ ರಸಗ್ರಹಣ ಶಿಬಿರವನ್ನುಯಶಸ್ವಿಗೊಳಿಸಿದರು.

Leave a Reply