ಚುನಾವಣೆ : ರಾತ್ರಿ ವೇಳೆ ನಿಷೇಧಾಜ್ಞೆ ಜಾರಿಗೆ

  ಪ್ರಸಕ್ತ ವಿಧಾನಸಭೆ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಮೇ. ೦೫ ರವರೆಗೆ ಪ್ರತಿ ದಿನ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೦೬ ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.

  ಚುನಾವಣೆ ನಿಮಿತ್ಯ ಮತದಾನ ದಿನಾಂಕ ಸಮೀಪಿಸುತ್ತಿದ್ದು, ರಾತ್ರಿ ವೇಳೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಒಂದೆಡೆ ಸೇರಿ ಸಾರ್ವಜನಿಕರಿಗೆ ತೊಂದರೆ ನೀಡುವ ಸಂಭವ ಇರುತ್ತದೆ.  ಅಲ್ಲದೆ ಮತದಾರರಿಗೆ ಆಮಿಷ ಒಡ್ಡಲು ರಾತ್ರಿ ವೇಳೆ ವಸ್ತು, ಹಣ ಇತ್ಯಾದಿ ಹಂಚುವ ಸಾಧ್ಯತೆ ಇರುತ್ತದೆ.  ಚುನಾವಣೆಯನ್ನು ಮುಕ್ತ ಹಾಗೂ ನಿಸ್ಪಕ್ಷಪಾತವಾಗಿ ಕೈಗೊಳ್ಳುವ ಉದ್ದೇಶದಿಂದ ಸಿ.ಆರ್.ಪಿ.ಸಿ. ೧೯೮೩ ಕಲಂ ೧೪೪ ರ ಪ್ರದತ್ತ ಅಧಿಕಾರ ಚಲಾಯಿಸಿ,  ಮೇ. ೦೫ ರವರೆಗೆ ಪ್ರತಿ ದಿನ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೦೬ ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.  ಇದರನ್ವಯ ನಿಷೇಧಿತ ಅವಧಿಯಲ್ಲಿ ಸಾರ್ವಜನಿಕರು ನಾಲ್ಕು ಜನಕ್ಕಿಂತ ಹೆಚ್ಚಾಗಿ ಗುಂಪಾಗಿ ಸೇರಿ ತಿರುಗಾಡುವಂತಿಲ್ಲ.  ಎಲ್ಲ ಅಂಗಡಿ ಮುಂಗಟ್ಟುಗಳನ್ನು ರಾತ್ರಿ ೧೦ ಗಂಟೆಯ ಒಳಗಾಗಿ ಮುಚ್ಚಬೇಕು.  ಯಾವುದೇ ರೀತಿಯ ಮಾರಕ ಶಸ್ತ್ರ ಗಳೊಂದಿಗೆ ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.

Leave a Reply