ಅಭ್ಯರ್ಥಿಗಳನ್ನು ಬೆಂಬಲಿಸಿ ನಗರಾಭಿವೃದ್ಧಿಗೆ ನಾಂದಿಯಾಡಿ: ಶ್ರೀರಾಮುಲು

 ಕೊಪ್ಪಳ, ಮಾ. ೦೨ : ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಬೆಂಬಲಿಸಿ ನಗರಾಭಿವೃದ್ಧಿಗೆ ನಾಂದಿಯಾಡಬೇಕೆಂದು ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಸ್ವಾಭಿಮಾನಿ ಬಿ. ಶ್ರೀರಾಮುಲುರವರು ಹೇಳಿದರು.
ಅವರು ಶನಿವಾರ ನಗರದಲ್ಲಿ ಸ್ಥಳೀಯ ಚುನಾವಣೆ ಪ್ರಚಾರದ ಅಂಗವಾಗಿ ಇಲ್ಲಿನ ಅಂಬೇಡ್ಕರ್ ವೃತ್ತ, ಗಡಿಯಾರ ಕಂಬ ಹಾಗೂ ತೆಗ್ಗಿನಕೇರಿ ಓಣಿಯಲ್ಲಿ ಬಾರಿ ಬಹಿರಂಗ ಪ್ರಚಾರ ನಡೆಸಿ ಮಾತನಾಡಿದರು. ಈಗಾಗಲೆ ಎಲ್ಲಾ ಪಕ್ಷದ ಅಧಿಕಾರವನ್ನು ಕಂಡಿರುವ ಜನತೆ ಇದೊಂದು ಬಾರಿ ನಮ್ಮ ಬಿಎಸ್‌ಆರ್ ಕಾಂಗ್ರೆಸ್‌ನ ಅಭ್ಯರ್ಥಿಗಳಿಗೆ ಬೆಂಬಲಿಸಿ ಸಂಪೂರ್ಣ ನಗರ ಸೌಂದರ್ಯೀಕರಣ, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಓದಗಿಸಲು ಅವಕಾಶ ನೀಡಬೇಕೆಂದು ಅವರಿಲ್ಲಿ ಕರೆನೀಡಿದರು. 
ನಮ್ಮ ಸ್ವಾಭಿಮಾನಿ ಬಳಗದಿಂದ ತಮ್ಮ ನಿಸ್ವಾರ್ಥ ಸೇವೆಗೆ ಸದಾಸಿದ್ಧರಿದ್ದೇವೆ ತಾವು ಅವಕಾಶ ಕಲ್ಪಿಸಬೇಕೆಂದು ಅವರಿಲ್ಲಿ ಮನವಿ ಮಾಡಿದರು. 
ಈ ಸಂದರ್ಭದಲ್ಲಿ ಬಿಎಸ್‌ಆರ್ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಕೆ. ವಿರುಪಾಕ್ಷಪ್ಪ, ಹಿರಿಯ ಮುಖಂಡರಾದ ಅಲ್ಲಂ ಚನ್ನಪ್ಪನವರ, ಸೈಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನ ನಿಯೋಜಿತ ಅಭ್ಯರ್ಥಿ ಕೆ.ಎಂ. ಸೈಯದ್, ತಾಲೂಕಾಧ್ಯಕ್ಷ ಪ್ರಭುಗೌಡ ಪಾಟೀಲ, ನಗರಸಭೆ ಚುನಾವಣೆ ಕಣದಲ್ಲಿರುವ ಈರಣ್ಣ ಹಂಚಿನಾಳ, ಮಹುಬೂಬ ನಾಲಬಂದ್, ಮಹಿಬೂಬ ಅರಗಂಜಿ, ರಂಗಪ್ಪ ಪೂಜಾರ, ಗೀತಾ ರಾಮಣ್ಣ ವಾಲ್ಮೀಕಿ, ಸರೀತಾ ಸುಧಾಕರ ಹೊಸಮನಿ, ಖಾಜಾ ಪಾಷಾ ಲಾಠಿ, ಶಾಂತಾ ನಾಯಕ, ಗವಿಸಿದ್ದಯ್ಯ ಹಿರೇಮಠ, ರೊಹಿತ್ ಮಹಾಂತೇಶ ಗ್ಯಾಸ್, ಬಾಬುಹುಸೇನ ಕಂಪ್ಲಿ, ರಾಜು ಉತ್ತಂಗಿ, ನಾಗರಾಜ ಭಜಂತ್ರಿ, ಮಲ್ಲಿಕಾರ್ಜುನ ಕಲ್ಲನ್ನವರ, ವಿಶ್ವನಾಥ ಬೆಲ್ಲದ್, ಶಿಲ್ಪಾ ಸುಗಮದವರ, ತ್ರೀವೇಣಿ ಜ್ಞಾನಮೂಠೆ, ಬಡೀಮಾ ಹೊನ್ನುರಸಾ, ರಾಕೇಶ ಕಾಂಬ್ಲೇಕರ್, ಬೋರಮ್ಮ ತಳಗಡೆ, ಪಾಪಣ್ಣ ಶಾಪುರ, ಅಂಜುಮಾ ಬೇಗಂ, ವಿನೋದಗೌಡ,  ರಾಜ್ಯ ಸಂಘಟನಾ ಕಾರ್ಯದರ್ಶಿ ಶಾಮೀದ್‌ಸಾಬ ಕಿಲ್ಲೇದಾರ್, ಅಲ್ಪಸಂಖ್ಯಾತರ ಜಿಲ್ಲಾ ಘಟಕ ಅಧ್ಯಕ್ಷ ಇಮಾಮ್‌ಸಾಬ ಬಿಜಾಪುರ, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀಪ್ರೀಯಾ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು, ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಂಡಿದ್ದರು.
Please follow and like us:
error