ತಳಕಲ್ ಐಟಿಐ : ಐಎಂಸಿ ಕೋಟಾದಡಿ ಸೀಟು ಭರ್ತಿಗೆ ಅರ್ಜಿ ಆಹ್ವಾನ

 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ದೆ ತಳಕಲ್ ಗ್ರಾಮದಲ್ಲಿ ಜೋಡಣೆಗಾರ, ವಿದ್ಯುತ್ ಶಿಲ್ಪಿ ಹಾಗೂ ವಿದ್ಯುನ್ಮಾನ ದುರಸ್ತಿಗಾರ ವಿಭಾಗಗಳ ತಲಾ 5 ಸೀಟು (ಒಟ್ಟು 15 ಸೀಟು) ಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
  ಸೀಟುಗಳನ್ನು ಐ.ಎಂ.ಸಿ ಕೋಟಾದಡಿಯಲ್ಲಿ ಭರ್ತಿ ಮಾಡಲಾಗುವುದು. ಇಚ್ಚೆಯುಳ್ಳ ಅಭ್ಯರ್ಥಿಗಳು ರೂ.100 ಗಳನ್ನು ಪಾವತಿಸಿ ಸಂಸ್ಧೆಯಿಂದ ಅರ್ಜಿಗಳನ್ನು ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 09 ರಂದು ಸಂಜೆ 5 ಗಂಟೆಗೆ ಪ್ರಾಚಾರ್ಯರ ಕಾರ್ಯಾಲಯ ತಳಕಲ್ ಇವರಿಗೆ ಸಲ್ಲಿಸಬೇಕು.  ಪ್ರವೇಶ ಸಂದರ್ಶನವನ್ನು ಜುಲೈ 10 ರಂದು ಬೆಳಗ್ಗೆ 10 ಗಂಟೆಗೆ ನಡೆಸಲಾಗುವುದು ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ಐ.ಎಂ.ಸಿ ಕಮೀಟಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು/ಕಾರ್ಯದರ್ಶಿ  ದೂರವಾಣಿ ಸಂಖ್ಯೆ 08534-239216 ರಲ್ಲಿ ಅಥವಾ ಖುದ್ದಾಗಿ ಸಂಪರ್ಕಿಸಬಹುದಾಗಿದೆ 
Please follow and like us:
error

Related posts

Leave a Comment