ಏಜೆನ್ಸಿ ಮೂಲಕ ಶಿಕ್ಷಕರ ಆಯ್ಕೆ: ಆ. ೧೬ ರಂದು ದಾಖಲೆಗಳ ಪರಿಶೀಲನೆ

ಕೊಪ್ಪಳ ಆ. ೧೦ : ಉನ್ನತೀಕರಿಸಿದ ಶಾಲೆ ಹಾಗೂ ಆದರ್ಶ ವಿದ್ಯಾಲಯಗಳಿಗೆ ಬಾಹ್ಯ ಮೂಲಗಳಿಂದ ಶಿಕ್ಷಕರ ಸೇವೆ ಪಡೆಯಲು ಆಸ್ಟ್ರಿಕ್ ಟೆಕ್ನಾಲಜೀಸ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆಗಸ್ಟ್ ೧೬ ರಂದು ಬಿ.ಆರ್.ಸಿ. ಕೊಪ್ಪಳ ಹಾಗೂ ಸ.ಹಿ.ಪ್ರಾ. ಶಾಲೆ (ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣ) ಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ ಕೊಪ್ಪಳ ಜಿಲ್ಲೆಯಲ್ಲಿ ಉನ್ನತೀಕರಿಸಿದ ಶಾಲೆಗಳಿಗೆ ಹಾಗೂ ಆದರ್ಶ ವಿದ್ಯಾಲಯಗಳಿಗೆ ಶಿಕ್ಷಕರ ಸೇವೆಯನ್ನು ಬಾಹ್ಯ ಮೂಲಗಳಿಂದ ಒದಗಿಸಲು ರಾಜ್ಯ ಮಟ್ಟದಲ್ಲಿ ಈ ಜವಾಬ್ದಾರಿಯನ್ನು ಆಸ್ಟ್ರೀಕ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್, ಬೆಂಗಳೂರು ಇವರಿಗೆ ವಹಿಸಲಾಗಿದೆ. ಈ ಸಂಸ್ಥೆಯು ಆನ್‌ಲೈನ್ ಮೂಲಕ ಅರ್ಜಿ ಕರೆದಿದ್ದು, ಮೆರಿಟ್ ಆಧಾರದ ಮೇಲೆ ಶಿಕ್ಷಕರನ್ನು ಆಯ್ಕೆ ಮಾಡಿಕೊಳ್ಳಲು ಸಂಸ್ಥೆಯು ಸಿದ್ಧ ಪಡಿಸಿದ ಮೆರಿಟ್ ಪಟ್ಟಿಯಂತೆ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲಿಸಲು ಆ. ೧೬ ರಂದು ಬೆಳಿಗ್ಗೆ ೧೦ ಗಂಟೆಗೆ ಬಿ.ಆರ್.ಸಿ. ಕೊಪ್ಪಳ ಹಾಗೂ ಸ.ಹಿ.ಪ್ರಾ. ಶಾಲೆ (ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣ) ಯಲ್ಲಿ ಮೂಲ ದಾಖಲೆಗಳ ಪರಿಶೀಲನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಪರಿಶೀಲನೆಗೆ ಅಗತ್ಯ ಮೂಲ ದಾಖಲಾತಿಗಳೊಂದಿಗೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.
Please follow and like us:
error

Related posts

Leave a Comment