ಪಲ್ಲಕ್ಕಿ ಮಹೋತ್ಸವ:

ಶ್ರೀಗವಿಮಠದ ಜಾತ್ರೆಯ ನಿಮಿತ್ಯವಾಗಿ ಇಂದು ದಿನಾಂಕ ೦೯-೦೧-೨೦೧೨ ರಂದು ಶ್ರೀ.ಮ.ನಿ.ಪ್ರ ಹಿರಿಶಾಂತವೀರಮಹಾಸ್ವಾಮಿಗಳು ಶಾಖಾ ಶ್ರೀಗವಿಮಠ, ಹೂವಿನಹಡಗಲಿ ಈ ಪೂಜ್ಯರ ಪಲ್ಲಕ್ಕಿ ಮಹೋತ್ಸವವು  ಕೋಟೆ ಮಠದಿಂದ ಪ್ರಾರಂಭವಾಗಿ ನಗರದ ಪ್ರಮುಖ ಬೀದಿಗಳ ಮೂಲಕ ಶ್ರೀ ಗವಿಮಠ ತಲುಪುವದು. ಪ್ರತಿ ವರ್ಷದ ಪದ್ದತಿಯಂತೆ ಮುದ್ದಾಬಳ್ಳಿ, ಮಂಗಳಾಪುರ ಗ್ರಾಮಗಳಿಂದ ಶ್ರೀ ಗವಿಸಿದ್ಧೇಶ್ವರ ಮೂರ್ತಿಯು ಹಾಗೂ ಹಲಗೇರಿ ಗ್ರಾಮದ ಸದ್ಭಕ್ತರಾದ ಲಿಂ.ಶ್ರೀಮತಿ ಗಿರಿಜಮ್ಮ ಗಂ.ಲಿಂ.ಶ್ರೀ ವೀರನಗೌಡರು ಪಾಟೀಲ ಇವರ ಮನೆಯಿಂದ ಶ್ರೀಗವಿಸಿದ್ಧೇಶ್ವರ ರಥದ ಕಳಸವು ಉತ್ಸವದೊಂದಿಗೆ ಹೊರಟು ಶ್ರೀಮಠಕ್ಕೆ ತಲುಪುವದು. ಈ ಉತ್ಸವದಲ್ಲಿ ಸದ್ಭಕ್ತರು ಭಾಗವಹಿಸಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. 


Please follow and like us:
error