fbpx

ಇಂದಿನ ದಿನಗಳಲ್ಲಿ ಶರಣರ ಚರಿತ್ರೆಯ ನಾಟಕಗಳು ಅವಶ್ಯ :

ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು

ಕೊಪ್ಪಳ,ಮಾ.೧೨: ಮಹಾನ್ ಶಿವಯೋಗಿಗಳವರ ನಾಟಕಗಳನ್ನು ನೋಡುವುದರಿಂದ ನಮ್ಮ ಮನಸ್ಸು ಪಾವನವಾಗುತ್ತದೆ. ನಮ್ಮ ಬುದ್ದಿಗೆ ಉತ್ತಮವಾದ ಸಂಸ್ಕಾರ ಬೆಳೆಯುತ್ತದೆ. ಇಂದಿನ ದಿನಮಾನಗಳಲ್ಲಿ ಶರಣರ ಚರಿತ್ರೆಯ ನಾಟಕಗಳು ಅತೀ ಅವಶ್ಯಕವಾಗಿ ಬೇಕಾಗಿವೆ ಎಂದು ಚಿಕ್ಕೇನಕೊಪ್ಪದ ಶ್ರೀ ಶಿವಶಾಂತವೀರ ಶರಣರು ಹೇಳಿದರು.
ಅವರು ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ಇತ್ತೀಚಿಗೆ ಶ್ರೀ ಗುರು ಪುಟ್ಟರಾಜ ಕಲಾಮಂದಿರದಲ್ಲಿ ಶ್ರೀ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘದಿಂದ ಏರ್ಪಡಿಸಲಾಗಿದ್ದ ೫೨ನೇ ತುಲಭಾರವನ್ನು ನೆರವೇರಿಸಿಕೊಂಡ ಬಳಿಕ ಆಶೀರ್ವಚನ ನೀಡುತ್ತ, ಶ್ರೀ ಗವಿಸಿದ್ದೇಶ್ವರ ಮಹಾತ್ಮೆ ನಮ್ಮ ಕರ್ನಾಟಕದ ತುಂಡೆಲ್ಲ ಅತ್ಯಂತ ಹೆಸರುವಾಸಿಯಾಗಿರುವಂತಹ ನಾಟಕ ನಡೆದುಬಂತು. ಮಾಂಡ್ರೆಯವರು ಕನ್ನಡ ಭಾಷೆಯಲ್ಲಿ ಅನೇಕ ವಚನಗಳನ್ನು ತತ್ವಾದರ್ಶಕವಾದ ನಾಟಕಗಳನ್ನು ಬರೆದು ಈ ನಾಟಕವನ್ನು ಕೊಟ್ಟಿದ್ದಾರೆ. ಆ ನಾಟಕವನ್ನು ನೋಡುವುದೇ ಒಂದು ಹಬ್ಬದ ವಾತಾವರಣ. ಸುಮಾರು ೨೦ ರಿಂದ ೨೫ ವರ್ಷಗಳಿಂದ ನಾವು ನೋಡುತ್ತ ಬಂದಿದ್ದೇವೆ ಅದನ್ನು ಮರಳಿ ಅಂತಹ ನಾಟಕಗಳನ್ನು ಕಲೆಯನ್ನು ನೋಡಬೇಕಾದರೆ ಹಿರೇಬಗನಾಳಗೆ ಬರಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಅವರು, ಇಂತಹ ತುಲಾಭಾರದಿಂದ ಬಂದಿರುವ ಹಣವನ್ನು ಬಳಗಾನೂರು ಶ್ರೀಗಳ ಮಠದಲ್ಲಿ ನಡೆಯುವ ಉಚಿತ ಪ್ರಸಾದ ನಿಲಯಕ್ಕೆ, ಹುಬ್ಬಳ್ಳಿಯಲ್ಲಿ ಅಂಧ-ಅನಾಥರ ಶಾಲೆಯನ್ನು ನಡೆಸುತ್ತಿದ್ದು, ಅಂತಹ ಮಕ್ಕಳಿಗೆ ಪ್ರಸಾದ ಹಾಗೂ ಶಿಕ್ಷಣದ ವ್ಯವಸ್ಥೆಗಾಗಿ ಈ ತುಲಾಭಾರ ಸದ್ಬವವಾಗುತ್ತದೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ 
Please follow and like us:
error

Leave a Reply

error: Content is protected !!