ಅಕ್ಷರಾಭ್ಯಾಸ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ

ಶ್ರೀಗವಿಮಠದಲ್ಲಿ ದಿನಾಂಕ ೩೧-೦೫-೨೦೧೩ ರಂದು ಶುಕ್ರವಾರ ಬೆಳಿಗ್ಗೆ ೯ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ  ಹೊಸದಾಗಿ ಶಾಲೆಗೆ ಸೇರುವ  ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ ಮಾಡಿಸುವಂತಹ ವಿನೂತನ ಕಾರ್ಯಕ್ರಮ 

ಕೊಪ್ಪಳ : ಈ ನಾಡಿನ ಮಕ್ಕಳೆಲ್ಲರೂ ವಿದ್ಯಾವಂತರಾಗಬೇಕೆಂಬ ಸದುದ್ಧೇಶದಿಂದ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು. ಅವರು ಇಂದು  ಸಂಸ್ಥಾನ ಶ್ರೀಗವಿಮಠದ ಕಲ್ಯಾಣ ಮಂಟಪದಲ್ಲಿಂದು ಜರುಗಿದ  ಹೊಸದಾಗಿ ಶಾಲೆಗೆ ಸೇರುವ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಂದುವರಿದು ಮಾತನಾಡಿದ ಅವರು ಬಡವ ಬಲ್ಲಿದರೆನ್ನದೇ ಎಲ್ಲ ಮಕ್ಕಳು ಶಿಕ್ಷಣವನ್ನು ಪಡೆದುಕೊಳ್ಳಬೇಕು.ಇಂದು ಅಕ್ಷರಾಭ್ಯಾಸ ಮಾಡಿಸಿಕೊಂಡ ಮಕ್ಕಳು  ಉತ್ತಮ ಶಿಕ್ಷಣ ಪಡೆದುಕೊಂಡು ಉತ್ತಮ ನಾಗರೀಕರಾಗಬೇಕಾದ ಅಗತ್ಯವಿದೆಯೆಂದರು. ಸಭೆಯಲ್ಲಿ ಪಾಲಕರು ಹಾಗೂ ಹೊಸದಾಗಿ ಶಾಲೆಗೆ ಸೇರುವ ಮಕ್ಕಳು  ಭಾಗಿಯಾಗಿದ್ದರು.ಸುಮಾರು ೧೫೦ ಕ್ಕಿಂತಲೂ ಹೆಚ್ಚು ಮಕ್ಕಳು ಇದರಲ್ಲಿ ಭಾಗಿಯಾಗಿ ಪುನೀತರಾದರು. ಪ್ರಾರಂಭದಲ್ಲಿ ಪೂಜ್ಯರ ಸಾನಿಧ್ಯದಲ್ಲಿ ಗಣಪತಿ ಹಾಗೂ ಸರಸ್ವತಿ ಪೂಜೆ ಜರುಗಿತು. ಕೊಪ್ಪಳ ಹಾಗೂ ಸುತ್ತಮುತ್ತಲಿನ ಭಕ್ತರು ಆಗಮಿಸಿದ್ದರು. ಗವಿಸಿದ್ದಪ್ಪ ಕೊಪ್ಪಳ ನಿರೂಪಿಸಿದರು.

Leave a Reply